AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2025 : ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು

ಮಕರ ಸಂಕ್ರಾಂತಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಸೂರ್ಯನಿಗೆ ಸಮರ್ಪಿತವಾಗಿದ್ದು ಈ ದಿನ ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗಿದೆ. ಈ ಸಂಕ್ರಾಂತಿಯು ಸಮೃದ್ಧಿಯ ಸಂಕೇತವಾಗಿದ್ದು, ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಈ ಶುಭ ಸಂದೇಶಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸುವ ಮೂಲಕ ಮಕರ ಸಂಕ್ರಾಂತಿಗೆ ಶುಭಾಶಯ ಕೋರಬಹುದು. ಹಾಗಾದ್ರೆ ಶುಭ ಕೋರಲು ಸಂದೇಶಗಳು ಇಲ್ಲಿವೆ.

Makar Sankranti 2025 : ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
Makar Sankranti 2025
ಸಾಯಿನಂದಾ
| Edited By: |

Updated on:Jan 10, 2025 | 3:13 PM

Share

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡ ಒಂದು. ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ವರ್ಷದ ಮೊದಲ ಹಬ್ಬ ಇದಾಗಿದ್ದು, ಈ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವನ್ನು ಮಕರ ಸಂಕ್ರಾತಿ ಹಬ್ಬವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರತಿಯೊಂದು ಮನೆಗಳಲ್ಲಿ ಈ ಮಕರ ಸಂಕ್ರಾಂತಿಯಂದು ಎಳ್ಳುಬೆಲ್ಲಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ, ಜೀವನದಲ್ಲಿ ಸಿಹಿಯೇ ತುಂಬಿರಲಿ ಎಂದು ಹಾರೈಸುತ್ತಾರೆ. ವರ್ಷದ ಮೊದಲ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಿ.

  • ಮಕರ ಸಂಕ್ರಾಂತಿಯ ಶುಭ ದಿನ ಸೂರ್ಯನು ತನ್ನ ಪಥ ಬದಲಾಯಿಸುವಂತೆ ನಿಮ್ಮೆಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಕರುಣಿಸಲಿ, ಮಕರ ಸಂಕ್ರಾಂತಿ ಶುಭಾಶಯಗಳು.
  • ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
  • ವರ್ಷದ ಮೊದಲ ಹಬ್ಬವು ನಿಮ್ಮ ಬದುಕನ್ನು ಬಂಗಾರವಾಗಿಸಲಿ. ಜೀವನದಲ್ಲಿ ದುಃಖ ಕಳೆದು ಕೇವಲ ಸಂತೋಷವೇ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿಯ ಶುಭಾಶಯಗಳು.
  • ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿ ಶುಭಾಶಯಗಳು.
  • ಎಳ್ಳು-ಬೆಲ್ಲ ಸವಿಯುತ ದ್ವೇಷ-ಅಸೂಯೆಗಳ ಮರೆಯುತ ಹಬ್ಬದ ಸಂಭ್ರಮ ಸಾರುತ, ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ, ಮಕರ ಸಂಕ್ರಾಂತಿಯ ಶುಭಾಶಯಗಳು.
  • ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಬಣ್ಣಗಳನ್ನು ತರಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ, ಸಮೃದ್ಧಿ ಮತ್ತು ಸುಖ – ಶಾಂತಿಯನ್ನು ದಯಪಾಲಿಸಲಿ, ಮಕರ ಸಂಕ್ರಾಂತಿಯ ಹಾರ್ಥಿಕ ಶುಭಾಶಯಗಳು.
  • ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವು ನಿಮ್ಮ ಬಾಳಲ್ಲಿ ಸಂಭ್ರಮ ತರಲಿ, ಮಕರ ಸಂಕ್ರಾಂತಿಯ ಹಾರ್ಥಿಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Fri, 10 January 25