AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malnad Akki Rotti: ಮಲೆನಾಡಿನ ಜೈನರ ವಿಶಿಷ್ಟ ಅಕ್ಕಿರೊಟ್ಟಿಯ ಘಮ, ಟೇಸ್ಟಿ ರೆಸಿಪಿ ಮಾಡುವುದು ಸುಲಭ

ಭಾರತವು ವೈವಿಧ್ಯತೆಯಿಂದ ಕೂಡಿದ ದೇಶ. ಹೀಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಲಿಸಿದರೆ ಆಚಾರ ವಿಚಾರ, ಅಡುಗೆ ತೊಡುಗೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಅದರಲ್ಲಿಯೂ ಒಂದೊಂದು ಪ್ರದೇಶದಲ್ಲಿಯೂ ಒಂದೊಂದು ರೀತಿಯ ಆಹಾರವು ಫೇಮಸ್ ಆಗಿದೆ. ಕರ್ನಾಟಕದ ಮಲೆನಾಡಿನ ಭಾಗಗಳಲ್ಲಿ ಅಕ್ಕಿ ರೊಟ್ಟಿ ಪ್ರಸಿದ್ಧ ತಿಂಡಿ ತಿನಿಸುಗಳಲ್ಲಿ ಒಂದು. ಅಕ್ಕಿ ರೊಟ್ಟಿ ಮಾಡುವ ವಿಧಾನದಲ್ಲಿ ವ್ಯತ್ಯಾಸವಿದ್ದರೂ ರುಚಿ ಮಾತ್ರ ಅದ್ಭುತವಾಗಿರುತ್ತದೆ.

Malnad Akki Rotti: ಮಲೆನಾಡಿನ ಜೈನರ ವಿಶಿಷ್ಟ ಅಕ್ಕಿರೊಟ್ಟಿಯ ಘಮ, ಟೇಸ್ಟಿ ರೆಸಿಪಿ ಮಾಡುವುದು ಸುಲಭ
ಸಾಯಿನಂದಾ
| Edited By: |

Updated on:Jun 06, 2024 | 10:24 AM

Share

ಮಲೆನಾಡು ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯಕ್ಕೆ ಎಷ್ಟು ಪ್ರಸಿದ್ಧಿ ಪಡೆದುಕೊಂಡಿದೆಯೋ, ಅಲ್ಲಿನ ಆಹಾರವು ವಿಭಿನ್ನ ಹಾಗೂ ರುಚಿಕರವಾಗಿರುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಜೋಳದ ರೊಟ್ಟಿ ಖಾರ ಚಟ್ನಿ ಫೇಮಸ್ ಆದ್ರೆ ಈ ಮಲೆನಾಡು ಭಾಗಗಳಲ್ಲಿ ಅಕ್ಕಿ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯದ ಬೆಳಗ್ಗಿನ ತಿಂಡಿಗಳಲ್ಲಿ ಅಕ್ಕಿ ರೊಟ್ಟಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಈ ಪಶ್ಚಿಮ ಘಟ್ಟದ ಜೈನರು ತಯಾರಿಸುವ ವಿಶಿಷ್ಟ ಅಕ್ಕಿರೊಟ್ಟಿಯೂ ಘಮ ಹಾಗೂ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ.

ಪಶ್ಚಿಮ ಘಟ್ಟದ ಜೈನರ ಅಕ್ಕಿ ರೊಟ್ಟಿಯ ವಿಧಾನ ಭಿನ್ನ ಹೇಗೆ?

ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಜೈನರ ಮನೆಗಳಲ್ಲಿ ತಯಾರಿಸುವ ಈ ಅಕ್ಕಿ ರೊಟ್ಟಿಗಳು ರುಚಿಯ ವಿಚಾರದಲ್ಲಿ ಉಳಿದ ಅಡುಗೆಯನ್ನು ಮೀರಿಸುತ್ತದೆ ಈ ಭಾಗದಲ್ಲಿ ಬಹುತೇಕರು ರೊಟ್ಟಿ ಮಾಡುವ ವಿಧಾನವೂ ಬೇರೆಯೇ ಆಗಿದ್ದು, ಅಕ್ಕಿಯನ್ನು ಬೀಸುಕಲ್ಲಿನಲ್ಲಿ ಒಣ ಹಿಟ್ಟು ಮಾಡಿ ರೊಟ್ಟಿ ಮಾಡುತ್ತಾರೆ. ಆದರೆ ಈ ಪ್ರದೇಶದ ಜೈನರು ಮಾತ್ರ ಅಕ್ಕಿ ನೆನಸಿ ರುಬ್ಬುವ ಕಲ್ಲಿನಲ್ಲಿ ನೆನೆಸಿದ ಅಕ್ಕಿಯನ್ನು ರುಬ್ಬಿ ಆ ಹಸಿ ಹಿಟ್ಟಿನಿಂದ ರೊಟ್ಟಿ ತಟ್ಟುತ್ತಾರೆ. ಕಟ್ಟಿಗೆಯ ಒಲೆಯ ಮೇಲಿನ ಹೆಂಚಿನಲ್ಲಿ ಬೇಯಿಸಿ ನಂತರ ಕಟ್ಟಿಗೆಯ ಕೆಂಪು ಕೆಂಡದಲ್ಲಿ ಹದವಾಗಿ ಸುಡುತ್ತಾರೆ. ಈ ರೊಟ್ಟಿಯ ಜೊತೆಗೆ ನೆಂಚಿಕೊಳ್ಳಲು ತೆಂಗಿನಕಾಯಿ ಹಾಗೂ ಹಸಿಮೆಣಸಿನ ಚಟ್ನಿ ಇರುತ್ತದೆ. ಇದರ ರುಚಿಯನ್ನು ಸವಿದವನೇ ಬಲ್ಲ. ಸುರಿಯುವ ವಿಪರೀತ ಮಳೆಗೆ, ದಟ್ಟವಾದ ಕಾಡುಗಳ ನಡುವೆ ಇಲ್ಲಿನ ಜೈನರು ಈ ವಿಧಾನದ ಮೂಲಕ ಅಕ್ಕಿ ರೊಟ್ಟಿ ತಯಾರಿಸುವುದು ಇವರ ಸಾಂಪ್ರದಾಯಿಕ ಶೈಲಿಯ ಆಹಾರ ತಯಾರಿ ಕ್ರಮವೆನ್ನಬಹುದು.

;

ಇದನ್ನೂ ಓದಿ: ಬೆಳ್ಳಿ ಸಾಮಗ್ರಿಗಳು ಕಪ್ಪಾಗಿದ್ದರೆ ಐದೇ ನಿಮಿಷದಲ್ಲಿ ಫಳ ಫಳ ಹೊಳೆಯುವಂತೆ ಮಾಡುವುದೇಗೆ?

ಆಹಾರ ಪದ್ಧತಿಯಲ್ಲಿ ಅಹಿಂಸಾ ತತ್ವಗಳು ಇಲ್ಲಿ ಇಂದಿಗೂ ಜೀವಂತ

ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಪ್ರದೇಶದ ಜೈನ ಅನುಯಾಯಿಗಳು ಸೂರ್ಯಾಸ್ತದ ಒಳಗೆ ತಮ್ಮ ರಾತ್ರಿ ಊಟವನ್ನು ಮಾಡಿ ಮುಗಿಸುತ್ತಾರೆ. ರಾತ್ರಿಯ ವೇಳೆ ಕತ್ತಲಲ್ಲಿ ಕಣ್ಣಿಗೆ ಕಾಣದ ಕ್ರಿಮಿ ಕೀಟಗಳನ್ನು ಹಿಂಸಿಸಬಾರದೆಂಬ ಅಹಿಂಸಾ ತತ್ವವನ್ನು ಇವತ್ತಿಗೂ ಪಾಲಿಸುತ್ತಿದ್ದಾರೆ. ಅದಲ್ಲದೇ, ಸಾಂಪ್ರದಾಯಿಕ ಸುಲಭ ವಿಧಾನವಾದ ಅಕ್ಕಿಹಿಟ್ಟನ್ನು ಬಳಸದೇ ಇರಲು ಜೈನರ ಅಹಿಂಸಾ ತತ್ವವೇ ಕಾರಣವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:23 am, Thu, 6 June 24

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ