Monsoon: ಮಳೆಗಾಲದಲ್ಲಿ ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಇಲ್ಲಿದೆ ಪರಿಹಾರ
ಮಳೆಗಾಲದಲ್ಲಿ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ತುಂಬಾ ಒಳ್ಳೆಯದು. ವಿಶೇಷವಾಗಿ ಈ ದಿನಗಳಲ್ಲಿ, ನೀವು ಕೆಲವು ಆಹಾರಗಳನ್ನು ಸೇವಿಸಬೇಕು.
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆಗಳು (Stomach Pain) ಸಾಮಾನ್ಯ. ಅದರಲ್ಲೂ ಆಹಾರದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಹೊಟ್ಟೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲದಲ್ಲಿ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ತುಂಬಾ ಒಳ್ಳೆಯದು. ವಿಶೇಷವಾಗಿ ಈ ದಿನಗಳಲ್ಲಿ, ನೀವು ಕೆಲವು ಆಹಾರಗಳನ್ನು ಸೇವಿಸಬೇಕು. ಇದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಈ ಋತುವಿನಲ್ಲಿ ಹೊಟ್ಟೆ ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡಲು ನಿಮ್ಮ ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಒಳ್ಳೆದು.
ಇದನ್ನೂ ಓದಿ: Relationship: ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರಾ? ಕೋಪ ದೂರ ಮಾಡಿ ಸಂಬಂಧ ಉಳಿಸಿಕೊಳ್ಳುವುದು ಹೇಗೆ?
ಮೆಂತ್ಯ ಕಾಳು:
ಮಳೆಗಾಲದ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮೆಂತ್ಯ ಕಾಳು ತೆಗೆದುಕೊಳ್ಳಿ. ಮೆಂತ್ಯವು ಫೈಬರ್ನ್ನು ಹೊಂದಿರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮೂಲಂಗಿ:
ಜೀರ್ಣಕಾರಿ ಸಮಸ್ಯೆ ನಿವಾರಣೆಗೆ ಮೂಲಂಗಿ ತಿನ್ನಬಹುದು. ಮೂಲಂಗಿ ನಿಮ್ಮ ಜೀರ್ಣ ಶಕ್ತಿಯನ್ನು ಬಲಪಡಿಸುವುದರೊಂದಿಗೆ ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ; Low Sugar Diet: ಲೋ ಶುಗರ್ ಡಯೆಟ್ ಎಂದರೇನು? ತೂಕ ಇಳಿಕೆಗೆ ನಿಜವಾಗಿಯೂ ಸಹಕಾರಿಯೇ?
ನಿಂಬೆ ನೀರು:
ಮಳೆಗಾಲದಲ್ಲಿ ನಿಂಬೆ ನೀರು ಆರೋಗ್ಯಕ್ಕೆ ಅತ್ಯಗತ್ಯ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಇದು ಮಳೆಗಾಲದಲ್ಲಿ ಬರುವ ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಮೊಸರು, ಬಾಳೆಹಣ್ಣು:
ಮಳೆಗಾಲದಲ್ಲಿ ಜೀರ್ಣಶಕ್ತಿ ತುಂಬಾ ದುರ್ಬಲವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೊಸರು ಮತ್ತು ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.