Moon Moving : ಭೂಮಿಯಿಂದ ದೂರಾಗುತ್ತಿರುವ ಚಂದ್ರ, ಇನ್ನು ಮುಂದೆ ದಿನಕ್ಕೆ 24 ಗಂಟೆ ಅಲ್ಲ, 25 ಗಂಟೆ

ಪ್ರಕೃತಿಯಲ್ಲಿಯು ವಿಸ್ಮಯಕಾರಿ ಘಟನೆಗಳು ನಡೆಯುತ್ತದೆ. ಅದರಂತೆಯೇ ಈ ಸೌರಮಂಡಲದಲ್ಲಿನ ಒಂದಲ್ಲ ಒಂದು ಬದಲಾವಣೆಗಳನ್ನು ಊಹೆ ಮಾಡುವುದು ಕಷ್ಟವೇ. ವರ್ಷಗಳು ಉರುಳಿದಂತೆ ಸೌರಮಂಡಲದಲ್ಲಿ ಬದಲಾವಣೆಗಳಾಗುತ್ತದೆ. ಇದೀಗ ಭವಿಷ್ಯದಲ್ಲಿ ದಿನಕ್ಕೆ 24 ಗಂಟೆಯ ಬದಲಾಗಿ 25 ಗಂಟೆಗಳಾಗಬಹುದು ಎಂದು ಅಘಾತಕಾರಿ ವಿಚಾರವನ್ನು ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

Moon Moving : ಭೂಮಿಯಿಂದ ದೂರಾಗುತ್ತಿರುವ ಚಂದ್ರ, ಇನ್ನು ಮುಂದೆ ದಿನಕ್ಕೆ 24 ಗಂಟೆ ಅಲ್ಲ, 25 ಗಂಟೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 12:26 PM

ಚಂದ್ರನು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಗೂ ಹಾಗೂ ಚಂದ್ರನಿಗೆ ಅದೇನೋ ನಂಟಿದೆ. ಆದರೆ ಇದೀಗ ಗುರುತ್ವಾಕರ್ಷಣೆಯ ಬಲದಿಂದ ಚಂದ್ರನು ಭೂಮಿಯಿಂದ ನಿರಂತರ ದೂರದಲ್ಲಿ ಹೋಗುತ್ತಿದ್ದಾನೆ. ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ವರ್ಷಗಳು ಕಳೆದಂತೆ ಹೆಚ್ಚುತ್ತಿದೆ. ಇದರ ಪರಿಣಾಮ ದಿನಗಳ ಗಂಟೆಯಲ್ಲಿ ಬದಲಾವಣೆಯಾಗಲಿದೆ. ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.

ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಭೂಮಿಯಿಂದ ಚಂದ್ರನು ಬೇರ್ಪಡುವುದರಿಂದ ಆಗುವ ಪರಿಣಾಮಗಳ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರಕ್ಕೆ ಹೋಗುವ ಅಪಾಯವಿದೆ ಎನ್ನುವ ವಿಚಾರವನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

ಚಂದ್ರನು ಭೂಮಿಯಿಂದ ವರ್ಷಕ್ಕೆ ಸರಿಸುಮಾರು 3.8 ಸೆಂ.ಮೀಟರ್‌ಗಳಷ್ಟು ದರದಲ್ಲಿ ದೂರ ಸಾಗುತ್ತಿದ್ದಾನೆ. ಇದರ ಪರಿಣಾಮವು ಭೂಮಿಯಲ್ಲಿರುವ ಒಂದು ದಿನದ ಸಮಯದಲ್ಲಿ ಬದಲಾವಣೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ ಎಂದಿದ್ದಾರೆ ವಿಜ್ಞಾನಿಗಳು

ಇದನ್ನೂ ಓದಿ: ಅತಿ ವೇಗವಾಗಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ, ಜಗತ್ತಿನ ನಾಶಕ್ಕೆ ಇದು ಮುನ್ನುಡಿ ಎಂದ ವಿಜ್ಞಾನಿಗಳು

ಸರಿಸುಮಾರು 1.4 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು. ಆದರೆ ಕಾಲ ಕಳೆಯುತ್ತಾ ಹೋದಂತೆ ಈ ಸಮಯವು ಹೆಚ್ಚಾಗುತ್ತಲೇ ಹೋಗಿ ಇದೀಗ 24 ಗಂಟೆಗೆ ಬಂದು ನಿಂತಿದೆ. ಹೀಗೆ ಚಂದ್ರನು ದೂರ ಸರಿಯುತ್ತಿದ್ದಂತೆ, ಭೂಮಿಯು ತಿರುಗುವ ಫಿಗರ್ ಸ್ಕೇಟರ್‌ನಂತಿದೆ, ತಮ್ಮ ತೋಳುಗಳನ್ನು ಚಾಚಿದಂತೆ ನಿಧಾನಗೊಳಿಸುತ್ತದೆ. ಹೀಗಾಗಿ ಭೂಮಿಯ ಮೇಲಿನ ಒಂದು ದಿನದ ಅವಧಿಯು ವಿಸ್ತರಣೆಯಾಗುತ್ತದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ