Nag Panchami Wishes 2024 : ನಾಗರ ಪಂಚಮಿಯಂದು ನಿಮ್ಮ ಬಂಧು ಬಾಂಧವರಿಗೆ ಈ ಸಂದೇಶ ಕಳುಹಿಸಿ ಶುಭಾಶಯ ಕೋರಿ
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯು ಮುಂಬರುವ ಹಬ್ಬಗಳ ಸಂಭ್ರಮಕ್ಕೆ ಮುನ್ನುಡಿಯಾಗಿದೆ. ಈ ಬಾರಿ ಭಾರತದಾದಂತ್ಯ ಆಗಸ್ಟ್ 9 ರಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಪ್ರೀತಿ ಪಾತ್ರರ್ರಿಗೆ ಹಾಗೂ ಬಂಧು ಮಿತ್ರರಿಗೆ ಈ ರೀತಿಯ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ಕೋರಿ ಹಬ್ಬವನ್ನು ಸಂಭ್ರಮಿಸಿ.
ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದ್ದು, ಈ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಈ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 9 ರಂದು ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ನಾಗರ ದೇವರ ವಿಗ್ರಹಗಳಿಗೆ ಹಾಲೆರೆದು ಹೂಗಳಿಂದ ಅಲಂಕಾರ ಮಾಡಿ ದೀಪ, ನೈವೇದ್ಯಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಈ ಹಬ್ಬದ ದಿನದಂದು ಕುಟುಂಬದವರಿಗೆ ವಿಶೇಷವಾಗಿ ಶುಭಾಶಯಗಳನ್ನು ಕೋರಬಹುದು.
- ಸರ್ವರಿಗೂ ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ನಾಗ ದೇವತೆ ಸರ್ವರಿಗೂ ಸಕಲ ಶ್ರೇಯಾಭಿವೃದ್ಧಿಯನ್ನು ಕರುಣಿಸಿ ಆಶೀರ್ವಾದಿಸಲಿ, ನಾಡಿನ ದೊಡ್ಡ ಹಬ್ಬ ನಾಗರ ಪಂಚಮಿಯ ಶುಭಾಶಯಗಳು.
- ಭಗವಂತವು ನಿಮ್ಮೆಲ್ಲಾ ಆಸೆ ಕೋರಿಕೆಗಳನ್ನು ಈಡೇರಿಸಲಿ, ಆರೋಗ್ಯ ಕರುಣಿಸಲಿ ಎಲ್ಲರಿಗೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ಭಗವಂತ ನಿಮಗೂ, ನಿಮ್ಮ ಕುಟುಂಬಕ್ಕೂ ಆಯುಸ್ಸು, ಐಶ್ವರ್ಯ, ಆರೋಗ್ಯ ಕೊಟ್ಟು ಅನುಗ್ರಹಿಸಲಿ ನಾಗರ ಪಂಚಮಿ ಹಬ್ಬದ ಹಾರ್ಥಿಕ ಶುಭಾಶಯಗಳು.
- ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿವು ನಿಮ್ಮ ಕುಟುಂಬದಲ್ಲಿ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲಿ. ಯಾವಾಗಲೂ ಸಂತೋಷವೇ ತುಂಬಿ ತುಳುಕಲಿ ಎಂದು ಆಶಿಸುತ್ತ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ಸಾಲು ಸಾಲು ಹಬ್ಬಗಳನ್ನು ಹೊತ್ತು ತಂದಿರುವ ನಾಗರಪಂಚಮಿ ಹಬ್ಬದ ದಿನದಂದು ನಿಮ್ಮ ಬಾಳಿನಲ್ಲಿ ಸುಖ, ಸಂತೋಷ, ನೆಮ್ಮದಿಯನ್ನು ತರಲಿ ದೇವರ ಕೃಪೆ ನಿಮ್ಮ ಮೇಲೆ ಸದಾ ಇರಲಿ. ನಾಗರ ಪಂಚಮಿ ಹಬ್ಬದ ಶುಭಾಶಯಗಳು.
- ಹಬ್ಬದ ದಿನದಂದು ಬದುಕಿನಲ್ಲಿನ ಎಲ್ಲಾ ಕಷ್ಟಗಳು ದೂರವಾಗಿ ಸದಾ ಖುಷಿಯ ಜೀವನವೇ ನಿಮ್ಮದಾಗಲಿ. ನಾಗರ ಪಂಚಮಿ ಹಬ್ಬದ ಹಾರ್ಥಿಕ ಶುಭಾಶಯಗಳು.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ