Rabindranath tagore’s Death Anniversary: ಸಂತೋಷವಾಗಿರುವುದು ತುಂಬಾ ಸರಳ, ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ
ಜನಗಣ ಮನ ಅಧಿನಾಯಕ ಜಯ ಹೇ... ಎಂಬ ಅದ್ಭುತ ಗೀತೆಯನ್ನು ಕೇಳಿದಾಗ ಇದನ್ನು ಬರೆದ ರವೀಂದ್ರನಾಥ ಟ್ಯಾಗೋರ್ ನೆನಪಾಗುತ್ತಾರೆ. ಇಂದು ಮಹಾನ್ ಲೇಖಕ ರವೀಂದ್ರನಾಥ ಠಾಗೋರ್ ಅವರ ಪುಣ್ಯತಿಥಿ. ಶ್ರೇಷ್ಠ ಕವಿಯಾದ ಅವರು ಆಗಸ್ಟ್ 7, 1941 ರಂದು ಇಹಲೋಕ ತ್ಯಜಿಸಿದರು. ತನ್ನ ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳನ್ನು ಸಾರಿದ ರವೀಂದ್ರನಾಥ ಟ್ಯಾಗೋರ್ ಅವರ ಸ್ಫೂರ್ತಿದಾಯಕ ನುಡಿಮುತ್ತುಗಳು ಇಲ್ಲಿದೆ.
ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ ಟ್ಯಾಗೋರ್ ಅವರು ಏಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತರು. ಶ್ರೇಷ್ಠ ಕವಿ ಮಾತ್ರವಲ್ಲದೆ ಮಾನವತವಾದಿಯಾಗಿದ್ದವರು. ತಮ್ಮ ಜೀವನದಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿದವರು. ಭಾರತದ ರಾಷ್ಟ್ರಗೀತೆಯ ಸೃಷ್ಟಿಕರ್ತರಾಗಿ, 2000ಕ್ಕೂ ಹೆಚ್ಚು ಗೀತೆಗಳನ್ನು ಹಾಗೂ ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡದಾದ ಕೊಡುಗೆಗಳನ್ನು ನೀಡಿದ್ದಾರೆ. ರವೀಂದ್ರನಾಥ ಠಾಗೋರ್ ಗಂಭೀರ ಕಾಯಿಲೆಯಿಂದ ತಮ್ಮ ಜೀವನದ ಕೊನೆಯ ನಾಲ್ಕು ವರ್ಷಗಳನ್ನು ಬಹಳ ನೋವಿನಿಂದಲೇ ಕೂಡಿತ್ತು. ಆಗಸ್ಟ್ 7 1941 ರಂದು ಕೊಲ್ಕತ್ತಾದಲ್ಲಿ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಇಂದು ಈ ಮಹಾನ್ ಕವಿಯ ಪುಣ್ಯತಿಥಿಯಾಗಿದ್ದು, ಅವರ ಸ್ಫೂರ್ತಿದಾಯಕ ಉಲ್ಲೇಖಗಳು ಹಾಗೂ ಸಂದೇಶಗಳು ನೀವಿಲ್ಲಿ ಓದಿ ಜೀವನಕ್ಕೆ ಸ್ಫೂರ್ತಿಯನ್ನು ಪಡೆಯಬಹುದು.
- ಸಂತೋಷವಾಗಿರುವುದು ತುಂಬಾ ಸರಳ. ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.
- ನಿಮ್ಮ ಬದುಕಿನಿಂದ ಸೂರ್ಯ ಹೊರಟು ಹೋದನೆಂದು ನೀವು ಅಳುತ್ತಿದ್ದರೆ, ನಿಮ್ಮ ಕಣ್ಣೀರು ನಿಮ್ಮನ್ನು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ.
- ನಾವು ಜಗತ್ತನ್ನು ತಪ್ಪಾಗಿ ಓದುತ್ತೇವೆ ಹಾಗಾಗಿ ಅದು ನಮ್ಮನ್ನು ಮೋಸಗೊಳಿಸುತ್ತದೆ.
- ಹೂವಿನ ದಳಗಳನ್ನು ಕಸಿದುಕೊಳ್ಳುವ ಮೂಲಕ ನೀವು ಹೂವಿನ ಸೌಂದರ್ಯವನ್ನು ಸಂಗ್ರಹಿಸುವುದಿಲ್ಲ.
- ಮಸುಕಾದ ಪ್ರತಿಯೊಂದು ತೊಂದರೆಗಳು ನಂತರ ನಿಮ್ಮ ವಿಶ್ರಾಂತಿಗೆ ಭಂಗ ತರುವ ಭೂತವಾಗಿರುತ್ತದೆ.
- ಪ್ರೀತಿ ಮಾತ್ರ ವಾಸ್ತವ ಮತ್ತು ಅದು ಕೇವಲ ಶುದ್ಧ ಭಾವನೆಯಲ್ಲ. ಇದು ಸೃಷ್ಟಿಯ ಹೃದಯಭಾಗದಲ್ಲಿರುವ ಅಂತಿಮ ಸತ್ಯ.
- ಸ್ನೇಹದ ಆಳವು ಪರಿಚಯದ ಉದ್ದವನ್ನು ಅವಲಂಬಿಸಿರುವುದಿಲ್ಲ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ