Asteroid: ಅತಿ ವೇಗವಾಗಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ, ಜಗತ್ತಿನ ನಾಶಕ್ಕೆ ಇದು ಮುನ್ನುಡಿ ಎಂದ ವಿಜ್ಞಾನಿಗಳು

ಮನುಷ್ಯನ ನಾಶಕ್ಕೆ ಮುನ್ನಡಿ ಬರಿಯಲಿದೆ ಈ ಕ್ಷುದ್ರಗ್ರಹ, ಅತಿ ವೇಗವಾಗಿ ಭೂಮಿಯತ್ತ ಬರುತ್ತಿದೆ ಈ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ವೇಳೆ ಈ ಗ್ರಹ ಭೂಮಿಗೆ ಅಪ್ಪಳಿಸಿದರೆ ಅರ್ಧಕ್ಕರ್ಧ ಜಗತ್ತು ನಾಶವಾಗುವುದು ಖಂಡಿತ ಎಂದು ಹೇಳಿದ್ದಾರೆ. ಈ ಗ್ರಹ ಭೂಮಿಗೆ ಎಷ್ಟು ಸಮೀಪದಲ್ಲಿದೆ. ವಿಜ್ಞಾನಿಗಳು ಹೇಳಿರುವ ಪ್ರಕಾರ ಸೆಕೆಂಡಿಗೆ ಈ ಗ್ರಹದ ವೇಗ ಎಷ್ಟು? ಯಾವಾಗ ಈ ಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Asteroid: ಅತಿ ವೇಗವಾಗಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ, ಜಗತ್ತಿನ ನಾಶಕ್ಕೆ ಇದು ಮುನ್ನುಡಿ ಎಂದ ವಿಜ್ಞಾನಿಗಳು
ಸಾಂದರ್ಭಿಕ ಚಿತ್ರ
Follow us
|

Updated on:Jul 25, 2024 | 2:14 PM

ಜಗತ್ತು ಅಂತ್ಯವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ವಿಜ್ಞಾನ ಜಗತ್ತು ನೀಡಿದೆ. ಆಗಾ ನಾವು ಯಾರೂ ಇರುವುದಿಲ್ಲ ಎಂಬ ಸತ್ಯಕ್ಕೆ ಭೂಮಂಡಲದಲ್ಲಿ ಆಗುತ್ತಿರುವ ಕೆಲವೊಂದು ಘಟನೆಗಳೇ ಸಾಕ್ಷಿ. ಇದರ ಬಗ್ಗೆ ಮನುಷ್ಯ ಕುಲಕ್ಕೆ ಒಂದು ದೊಡ್ಡ ಎಚ್ಚರಿಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿದೆ. ಬೃಹತ್​​​ ಕ್ಷುದ್ರಗ್ರಹವು ಭೂಮಿಯ ಕಡೆಗೆ ಸಾಗುತ್ತಿದೆ ಎಂದು ನಾಸಾ ಹೇಳಿದೆ. ಕ್ಷುದ್ರಗ್ರಹ ಅತಿ ವೇಗವಾಗಿ ಭೂಮಿಯತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ ಈ ಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಜುಲೈ 25ರಂದು ಈ ಗ್ರಹ ಭೂಮಿಯ 3,350,000 ಮೈಲುಗಳನಷ್ಟು ಹತ್ತಿರಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಬಾಹ್ಯಾಕಾಶವು ಈ ಗ್ರಹಕ್ಕೆ 2024 ಎನ್​​ವಿ1 ಎಂದು ಹೆಸರಿಸಿದೆ. ಇನ್ನು ಸ್ಮಾಲ್-ಬಾಡಿ ಡೇಟಾಬೇಸ್​​​ ಲುಕಪ್​​​ ಇದು ಭೂಮಿಗೆ ಸಮೀಪವಿರುವ ಕ್ಷುದ್ರಗ್ರಹವಾಗಿದೆ. ಹಾಗೂ ಇದು ಅಪೊಲೊ ಕ್ಷುದ್ರಗ್ರಹಗಳ ಗುಂಪಿಗೆ ಸೇರಿದೆ ಎಂದು ಹೇಳಲಾಗಿದೆ. ಈ ಗ್ರಹ ಚಲಿಸುವ ವೇಗವು ಅದ್ಭುತವಾಗಿದೆ. ನಾಸಾ ಹೇಳಿರುವ ಪ್ರಕಾರ, ಇದು ಸೆಕೆಂಡಿಗೆ 10.17 ಕಿಮೀ ವೇಗದಲ್ಲಿ ಚಲಿಸುತ್ತದೆ. ಗಂಟೆಗೆ 36601.31 ಕಿಮೀ ಸಾಗುತ್ತದೆ. 2019ರಲ್ಲಿಯೇ ಈ ಗ್ರಹ ಚಲಿಸಲು ಪ್ರಾರಂಭಿಸಿತ್ತು.

ಕ್ಷುದ್ರಗ್ರಹವು ಬೆಳಕಿನಷ್ಟೇ ವೇಗವಾಗಿ ಚಲಿಸುತ್ತದಯೇ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಆದರೆ ನಾಸಾ ಹೇಳಿರುವ ಪ್ರಕಾರ ಬೆಳಕಿನ ವೇಗವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಲ್ಬರ್ಟ್​​​​ ಐನ್​​​​ಸ್ಟೈನ್​​​ನ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ, ಬೆಳಕಿನ ವೇಗವು ಸೆಕೆಂಡಿಗೆ 300,000 ಕಿಲೋಮೀಟರ್​​ ಅಥವಾ ಸೆಕೆಂಡಿಗೆ 186,000 ಮೈಲುಗಳು. ಅವರ ಸಮೀಕರಣದ ಪ್ರಕಾರ, E=mc2(ಸ್ಲ್ವೇರ್), ಶಕ್ತಿ (E), ದ್ರವ್ಯರಾಶಿಗೆ ಸಮನಾಗಿರುತ್ತದೆ (M) ಬೆಳಕಿನ ವರ್ಗದ ವೇಗ (c2).

ಇದನ್ನೂ ಓದಿ: 2025ಕ್ಕೆ ಯುದ್ಧ, 5079ರಲ್ಲಿ ಪ್ರಪಂಚ ಅಂತ್ಯ, ಭೂಮಿ ನಾಶ, ಆಘಾತಕಾರಿ ಭವಿಷ್ಯ ನುಡಿದ ಬಾಬಾ ವಂಗಾ

ಐನ್​​​​ಸ್ಟೈನ್ ಈ ಸಿದ್ಧಾಂತವನ್ನು ಗಮನಿಸಿದಾಗ ಬೆಳಕಿನ ವೇಗಕ್ಕಿಂತ ಕ್ಷುದ್ರಗ್ರಹದ ವೇಗ ಕಡಿಮೆ ಎಂದು ಹೇಳಲಾಗಿದೆ. ಇದು ವಿನಾಶದ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಕೋಟ್ಯಾಂತರ ಸಾವು ನೋವುಗಳು ಸಂಭವಿಸಲಿದೆ. ಸುಮಾರು ಅರ್ಧಕ್ಕೆ ಅರ್ಧ ಜಗತ್ತು ನಾಶವಾಗುತ್ತದೆ. ಇದರ ಜತೆಗೆ ಮತ್ತೊಂದು ಶಿಲಾ ಗ್ರಹವು ಭೂಮಿಗೆ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Thu, 25 July 24

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ