AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electric Heater: ಸ್ನಾನಕ್ಕಾಗಿ ವಾಟರ್ ಹೀಟರ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಅಪಾಯಗಳನ್ನು ತಿಳಿದುಕೊಳ್ಳಿ

ಎಲೆಕ್ಟ್ರಿಕ್ ಹೀಟರ್ ಅನ್ನು ಬಳಸುವುದರಿಂದ ನೀರು ಬೇಗ ಬಿಸಿಯಾಗುತ್ತದೆ. ಆದರೆ, ಆ ನೀರಿನಿಂದ ಸ್ನಾನ ಮಾಡುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹೀಟರ್ ಹಾಕಿ ಕುದಿಸಿದ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತುರಿಕೆ, ಗುಳ್ಳೆಗಳು ಮತ್ತು ಇತರ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.

Electric Heater: ಸ್ನಾನಕ್ಕಾಗಿ ವಾಟರ್ ಹೀಟರ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಅಪಾಯಗಳನ್ನು ತಿಳಿದುಕೊಳ್ಳಿ
Water heaters
ಅಕ್ಷತಾ ವರ್ಕಾಡಿ
|

Updated on: Jul 25, 2024 | 6:58 PM

Share

ಕೆಲವರು ಸ್ನಾನಕ್ಕೆ ಬಿಸಿನೀರಿಗಾಗಿ ಗೀಸರ್ ಬಳಸಿದರೆ, ಇನ್ನೂ ಕೆಲವರು ಗ್ಯಾಸ್ ಸ್ಟವ್ ಮೂಲಕ ನೀರು ಬಿಸಿ ಮಾಡಿಕೊಳ್ಳುತ್ತಾರೆ. ಇದಲ್ಲದೇ ವಾಟರ್ ಹೀಟರ್ ಮೂಲಕ ನೀರನ್ನು ಬಿಸಿ ಮಾಡುವವರೂ ಇದ್ದಾರೆ. ಹೀಟರ್ ಎಲ್ಲರಿಗೂ ಕೈಗೆಟುಕುವ ಏಕೈಕ ವಸ್ತುವಾಗಿದೆ ಮತ್ತು ಕಡಿಮೆ ಸಮಯದಲ್ಲಿ ನೀರನ್ನು ಬಿಸಿ ಮಾಡಬಹುದು. ಆದಾಗ್ಯೂ, ಎಲೆಕ್ಟ್ರಿಕ್ ವಾಟರ್ ಹೀಟರ್ ಬಳಕೆಯಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಇತರ ಕೆಲವು ಅಪಾಯಗಳಿವೆ ಎಂದು ತಜ್ಞರು ಹೇಳುತ್ತಾರೆ.

ಎಲೆಕ್ಟ್ರಿಕ್ ಹೀಟರ್ ಅನ್ನು ಬಳಸುವುದರಿಂದ ನೀರನ್ನು ತ್ವರಿತವಾಗಿ ಬಿಸಿಯಾಗುತ್ತದೆ. ಆದರೆ, ಆ ನೀರಿನಿಂದ ಸ್ನಾನ ಮಾಡುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಟರ್ ಹಾಕಿ ಕುದಿಸಿದ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತುರಿಕೆ, ಗುಳ್ಳೆಗಳು ಮತ್ತು ಇತರ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪಾಪ್​ಕಾರ್ನ್​ ಬ್ರೇನ್ ಎಂದರೇನು? ಈ ಕಾಯಿಲೆ ಬಗ್ಗೆ ನೀವು ತಿಳಿಯಲೇಬೇಕು

ಎಲೆಕ್ಟ್ರಿಕ್ ಹೀಟರ್‌ಗಳನ್ನು ಬಳಸುವಾಗ ಕಾರ್ಬನ್ ಮಾನಾಕ್ಸೈಡ್‌ನಂತಹ ಹಾನಿಕಾರಕ ಅನಿಲಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ ಎಂದು ಹೇಳಲಾಗುತ್ತದೆ. ಹೀಟರ್‌ನಿಂದ ಬಿಡುಗಡೆಯಾಗುವ ಇಂತಹ ಅನಿಲಗಳಿಂದ ಅವರು ತಲೆನೋವು, ವಾಕರಿಕೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಎಲೆಕ್ಟ್ರಿಕ್ ಹೀಟರ್ ಮೂಲಕ ಬಿಸಿ ಮಾಡಿದ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ