ಸೊಳ್ಳೆ ಕಚ್ಚುವುದರಿಂದ ತಪ್ಪಿಸಿಕೊಳ್ಳಲು ಡಾರ್ಕ್​ ಕಲರ್​ ಬಟ್ಟೆಗಳನ್ನು ಧರಿಸಬೇಡಿ: ಯಾಕೆ ಗೊತ್ತಾ?

ಇತ್ತೀಚೆಗೆ ನಡೆದ ಅಧ್ಯಯನವೊಂದು ವ್ಯಕ್ತಿಗಳು ಧರಿಸಿದ ಬಟ್ಟೆಯ ಬಣ್ಣವೂ ಹೆಚ್ಚು ಸೊಳ್ಳೆ ಕಚ್ಚಲು ಕಾರಣ ಎಂದು ಹೇಳಲಾಗಿದೆ. ಹೌದು ಕಡು ಬಣ್ಣದ ಬಟ್ಟೆಗಳಿಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.

ಸೊಳ್ಳೆ ಕಚ್ಚುವುದರಿಂದ ತಪ್ಪಿಸಿಕೊಳ್ಳಲು ಡಾರ್ಕ್​ ಕಲರ್​ ಬಟ್ಟೆಗಳನ್ನು ಧರಿಸಬೇಡಿ: ಯಾಕೆ ಗೊತ್ತಾ?
ಸೊಳ್ಳೆ
Follow us
TV9 Web
| Updated By: Pavitra Bhat Jigalemane

Updated on:Feb 08, 2022 | 10:30 AM

ಕೆಲವೊಮ್ಮೆ ಸ್ನೇಹಿತರ ಗುಂಪಿನಲ್ಲಿ ಕುಳಿತಾಗ ಕೆಲವರಿಗೆ ಮಾತ್ರ ಸೊಳ್ಳೆ (Mosquitoes) ಕಚ್ಚುತ್ತದೆ. ಇನ್ನೂ ಕೆಲವರಿಗೆ ಸೊಳ್ಳೆ ಹತ್ತಿರುವೂ ಸುಳಿಯುವುದಿಲ್ಲ. ಆಗ ರಕ್ತ ಸಿಹಿಯಾಗಿರಬಹುದು ಅದಕ್ಕೆ ಸೊಳ್ಳೆ ಹೆಚ್ಚು ಕಚ್ಚುತ್ತದೆ ಎಂದು ರೇಗಿಸುವುದು ಸಾಮಾನ್ಯ. ಕಿವಿಯ ಹತ್ತಿರ, ಮುಖದ ಮುಂದೆ ಗುಂಯ್​ ಎಂದು ಸದ್ದು ಮಾಡು ಸೊಳ್ಳೆಗಳು ಕಿರಿಕಿರಿ ಉಂಟುಮಾಡುತ್ತವೆ. ಇಂತಹ ಸೊಳ್ಳೆಗಳು ಕೇವಲ ಬೆವರಿನ ವಾಸನೆಯಿದ ಮಾತ್ರವಲ್ಲ ಧರಿಸಿದ ಬಟ್ಟೆಗೂ ಆಕರ್ಷಿತವಾಗುತ್ತವೆ. ಹೌದು, ಇತ್ತೀಚೆಗೆ ನಡೆದ ಅಧ್ಯಯನವೊಂದು ವ್ಯಕ್ತಿಗಳು ಧರಿಸಿದ ಬಟ್ಟೆಯ ಬಣ್ಣವೂ (Color) ಹೆಚ್ಚು ಸೊಳ್ಳೆ ಕಚ್ಚಲು ಕಾರಣ ಎಂದು ಹೇಳಲಾಗಿದೆ. ಹೌದು ಕಡು ಬಣ್ಣದ (Dark Color)  ಬಟ್ಟೆಗಳಿಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ  ಆದ್ದರಿಂದ  ಡಾರ್ಕ್​ ಕಲರ್​ ಬಣ್ದ ಬಟ್ಟೆ ಧರಿಸಿದವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ವಾಷಿಂಗ್ಟನ್​​ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಸಂಶೋಧನೆಯ ಪ್ರಕಾರ ಅನೇಕ ರೋಗಗಳಿಗೆ ಕಾರಣವಾಗುವ ಈಡೀಸ್​ ಈಜಿಪ್ಟಿ ಸೇರಿದಂತೆ ಅನೇಕ ಸೊಳ್ಳೆಗಳು ಮನುಷ್ಯನ ದೇಹದಿಂದ ಹೊರಬರುವ ಕಾರ್ಬನ್​ ಡೈ ಆಕ್ಸೈಡ್​ ಮೂಲಕ ಕೆಂಪು. ಕಿತ್ತಳೆ, ಕಪ್ಪು ಬಣ್ಣಗಳಂತಹ ಡಾರ್ಕ್​ ಬಣ್ಣಗಳ ಕಡೆಗೆ ಹೆಚ್ಚು ಆಕರ್ಷಿತವಾಗುತ್ತವೆ. ಅದೇ ರೀತಿ ಬಿಳಿ, ಹಳದಿ ಬಣ್ಣಗಳಂತಹ ತಿಳಿ ಬಣ್ಣಗಳನ್ನು ಸೊಳ್ಳೆಗಳು ನಿರ್ಲಕ್ಷಿಸುತ್ತವೆ ಎಂದು ನೇಚರ್​ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ.

ಸೊಳ್ಳೆಗಳ ವಾಸನೆಯ ಮೂಲಕ ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ. ಇದಕ್ಕೆ ಮನುಷ್ಯರ ದೇಹದಿಂದ ಹೊರಬರುವ ಕಾರ್ಬನ್​ ಡೈ ಆಕ್ಸೈಡ್​​ ನೆರವಾಗುತ್ತವೆ. ಡಾರ್ಕ್​ ಕಲರ್​ ಬಟ್ಟೆಗಳನ್ನು ಧರಿಸಿದಾಗ ಬಿಸಿಲು ಅಥವಾ ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿ ಹೆಚ್ಚು ಬೆವರುತ್ತೇವೆ. ಅಲ್ಲದೆ ದೇಹದಿಂದ ಹೆಚ್ಚು ಕಾರ್ಬನ್​ ಡೈ ಆಕ್ಸೈಡ್​ ಅಂಶಗಳು ಬಿಡುಗಡೆಯಾಗುತ್ತವೆ. ಇದರಿಂದ ಡಾರ್ಕ್​ ಬಣ್ಣಗಳ ಬಟ್ಟೆ ಧರಿಸದಾಗ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಕೆಂಪು ಬಣ್ಣಕ್ಕೆ ಹೆಚ್ಚು ಆಕರ್ಷಿಸುವ ಸೊಳ್ಳೆಗಳು: ಸೊಳ್ಳೆಗಳು ಮುಖ್ಯವಾಗಿ ಬೆವರು, ಉಸಿರು ಮತ್ತು ಚರ್ಮದ ಉಷ್ಣತೆಯನ್ನು ಹೆಚ್ಚು ಗಮನಿಸುತ್ತವೆ ಎಂದು ಈ ಹಿಂದೆ ಕಂಡುಕೊಳ್ಳಲಾಗಿತ್ತು. ಇದೀಗ ಬಣ್ಣಗಳ ಮೂಲಕವೂ ಸೊಳ್ಳೆಗಳು ಆಹಾರವನ್ನು ಕಂಡುಕೊಳ್ಳುತ್ತವೆ ಎಂದು ಪತ್ತೆ ಮಾಡಲಾಗಿದೆ. ಅಲ್ಲದೆ ಕೆಂಪು ಬಣ್ಣ ಹೆಚ್ಚು ಆಕರ್ಷಿಸುತ್ತದೆ ಎಂದು ಪತ್ತೆ ಮಾಡಲಾಗಿದೆ.

ಇನ್ನು ಬಿಳಿ, ಹಳದಿ, ಹಸಿರು ಬಣ್ಣದ ಬಟ್ಟೆಗಳನ್ನು ಸೊಳ್ಳೆಗಳನ್ನು ಸೊಳ್ಳೆಗಳು ನಿರ್ಲಕ್ಷಿಸುತ್ತವೆ ಎನ್ನಲಾಗಿದ್ದು, ಮಲೆರಿಯಾ, ಚಿಕನ್​ಗುನ್ಯಾದಿಂದ ಕಾಯಿಲೆಗಳಿಂದಲೂ ದೂರವಿರಬಹುದು ಎಂದು ಸಲಹೆ ನೀಡುತ್ತಾರೆ ವಿಜ್ಞಾನಿಗಳು ಈ ಕುರಿತು ನ್ಯೂಸ್​ ಅಟ್ಲಾಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: 

Forgotten Foods Calendar 2022: ಸೇಬು, ಕಿತ್ತಳೆ ಅಷ್ಟೇ ಅಲ್ಲ, ಅಪರೂಪದ ಹಣ್ಣುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Published On - 10:28 am, Tue, 8 February 22