Forgotten Foods Calendar 2022: ಸೇಬು, ಕಿತ್ತಳೆ ಅಷ್ಟೇ ಅಲ್ಲ, ಅಪರೂಪದ ಹಣ್ಣುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನಮ್ಮ ಸುತ್ತಮುತ್ತ ಇರುವ ಅದೆಷ್ಟೋ ಗಿಡ, ಹೂವು, ಬೀಜ, ತರಕಾರಿ ಇವುಗಳ ಆರೋಗ್ಯ ಗುಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯ ಕೊರತೆ ಇದೆ. ಇದನ್ನು ಅರಿತ ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್​ ಮೂರು ವರ್ಷಗಳ ಹಿಂದೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

Forgotten Foods Calendar 2022: ಸೇಬು, ಕಿತ್ತಳೆ ಅಷ್ಟೇ ಅಲ್ಲ, ಅಪರೂಪದ ಹಣ್ಣುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಹಣ್ಣುಗಳು (ಪ್ರಾತಿನಿಧಿಕ ಚಿತ್ರ)
Follow us
Preethi Shettigar
| Updated By: preethi shettigar

Updated on: Feb 08, 2022 | 9:01 AM

ಪ್ರಾಚೀನಕಾಲದ ಮನುಷ್ಯರ ಆಹಾರ ಪದ್ಧತಿ ಇಂದು ಅವನತಿ ಹಾದಿ ಹಿಡಿದಿದೆ. ಆದರೆ ಪ್ರಾಚೀನ ಕಾಲದಲ್ಲಿ ಸೇವಿಸುತ್ತಿದ್ದ ಹಣ್ಣು-ಹಂಪಲು, ಸೊಪ್ಪು-ತರಕಾರಿ, ಗೆಡ್ಡೆ-ಗೆಣಸುಗಳಲ್ಲಿನ ಆರೋಗ್ಯಯುತ ಅಥವಾ ಔಷಧಿಯುತ ಗುಣ ಇನ್ನೂ ಹಾಗೆಯೇ ಇದೆ.  ಮನುಷ್ಯ (Human) ತನ್ನ ಬೇಟೆ ಪದ್ಧತಿ ಮುಗಿದ ಮೇಲೆ ಗೆಡ್ಡೆ-ಗೆಣಸುಗಳತ್ತ ಮುಖ ಮಾಡಿದರು. ನಂತರದ ದಿನಗಳಲ್ಲಿ ಹಣ್ಣುಗಳನ್ನು ಸೇವಿಸುವುದಕ್ಕೆ ಶುರು ಮಾಡಿದರು. ಇದು ನೈಸರ್ಗಿಕವಾಗಿ ಬೆಳೆಯುವಂತದ್ದು. ಆದರೆ ಈ ಬಗ್ಗೆ ಮಾಹಿತಿಯ ಕೊರತೆ ಇದೆ. ನಮ್ಮ ಸುತ್ತಮುತ್ತ ಇರುವ ಅದೆಷ್ಟೋ ಗಿಡ, ಹೂವು, ಬೀಜ, ತರಕಾರಿ ಇವುಗಳ ಆರೋಗ್ಯ(Health) ಗುಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯ ಕೊರತೆ ಇದೆ. ಇದನ್ನು ಅರಿತ ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್​ ಮೂರು ವರ್ಷಗಳ ಹಿಂದೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಕ್ಯಾಲೆಂಡರ್ (Calendar)​ ಮೂಲಕ ಮನೆ ಮನೆಗೆ ಮರೆತು ಹೋದ ಆಹಾರಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ.

ಪ್ರಾಚೀನ ಕಾಲದ ಗೆಡ್ಡೆ-ಗೆಣಸು, ಹಣ್ಣು, ಬೀಜಗಳು, ಸೊಪ್ಪು ಮತ್ತು ಹೂವುಗಳ ಬಗ್ಗೆ ಗ್ರಾಹಕರಿಗೆ ಹಾಗೂ ರೈತರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಅವರಿಗೆ ಅರಿವು ಮೂಡಿಸಲು ಮರೆತು ಹೋದ ಆಹಾರ ಎಂಬ ಹೆಸರಿನ ಅಡಿಯಲ್ಲಿ ಕ್ಯಾಲೆಂಡರ್​ ತಂದಿದ್ದೇವೆ. ಕಳೆದ ಮೂರು ವರ್ಷಗಳಿಂದ ಕ್ಯಾಲೆಂಡರ್​ ಜಾರಿಗೆ ತಂದ್ದಿದ್ದೇವೆ. 2020 ರಿಂದ ಇದು ಗ್ರಾಹಕರ ಮನೆಗಳಿಗೆ ತಲುಪುತ್ತಿದೆ. ಇದರಲ್ಲಿ ವಿಶೇಷವಾಗಿ ಬರಿ ಒಂದು ಆಹಾರಕ್ಕೆ ಬಳಕೆಯಾಗುವ ಪದಾರ್ಥದ ಬಗ್ಗೆ ವಿವರಣೆ ನೀಡಿಲ್ಲ. ಬದಲಾಗಿ ಇದರಿಂದ ಏನೆಲ್ಲ ಅಡುಗೆ ಮಾಡಬಹುದು ಎಂಬ ಕುರಿತು ಅಂದರೆ ಪಾಕವಿಧಾನದ ಬಗ್ಗೆಯೂ ಮಾಹಿತಿ ನೀಡಿದ್ದೇವೆ. ಇದು ಈ ಕ್ಯಾಲೆಂಡರ್​ನ ಹೆಗ್ಗಳಿಕೆ ಎಂದು ಸಾವಯಾವ ಕೃಷಿಕರ ಬಳಗದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಟಿವಿ9 ಡಿಜಿಟಲ್​ ಜತೆ ಮಾತನಾಡುತ್ತಾ ವಿವರಿಸಿದ್ದಾರೆ

ಆಹಾರವಾಗಬಲ್ಲ ಹಣ್ಣಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ

ಕುಂಬಳ ಬೀಜಗಳು

ಕುಂಬಳಕಾಯಿ ಒಡೆದು, ಅದರೊಳಗಿನ ಬೀಜಗಳನ್ನು ಹಾಗೆಯೇ ಎಸೆಯುತ್ತಾರೆ. ಆದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ, ಕುಂಬಳ ಬೀಜದ ಸಿಪ್ಪೆ ತೆಗೆದು ಬರ್ಫಿ ಮಾಡಿ ಸವಿಯಬಹುದು. ಇದರ ಬೀಜಗಳನ್ನು ಕಡಾಯಿಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಹುರಿದು ತಿಂಡಿ ರೀತಿಯಲ್ಲಿ ಸಹ ಸವಿಯಬಹುದು.

ಗಣಿಕೆ ಹಣ್ಣು(ಕಾಕಮಂಚಿ)

ವಂಡರ್​ ಬೆರ್ರಿ ಎಂದೆಲ್ಲ ಕರೆಯಲಾಗುವ ಗಣಿಕೆ ಒಂದು ವಿಸ್ಮಯ ಗಿಡ. ವಿಟಮಿನ್​ -ಬಿ ಯಿಂದ ಹಣ್ಣಿನ ಗೊಂಚಲುಗಳನ್ನು ಹೊತ್ತ ಈ ಗಿಡಕ್ಕೆ ಹಿಂದಿಯಲ್ಲಿ ಮಾಕೋಯಿ, ತಮಿಳಿನಲ್ಲಿ ಮನಥಕಳ್ಳಿ ಎನ್ನುತ್ತಾರೆ. ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಹಾಗೂ ವಿಟಮಿನ್​- ಸಿ ಯನ್ನು ಇದು ಒಳಗೊಂಡಿದೆ. ಇದರ ಎಳೆಯ ಸೊಪ್ಪಿನಿಂದ ಸಾಂಬಾರ್​ ಅಥವಾ ಪಲ್ಯ ಮಾಡಿ ಸವಿಯಬಹುದು. ಕರುಳಿನ ಹಣ್ಣುಗಳಂಥ ಸಮಸ್ಯೆಗೆ ಇದು ಪರಿಹಾರ ಕೊಡುತ್ತದೆ. ಸಣ್ಣ ಹಣ್ಣುಗಳನ್ನು ಮಜ್ಜಿಗೆ ಹಾಗೂ ಉಪ್ಪಿನ ಮಿಶ್ರಣದಲ್ಲಿ ನೆನೆಯಿಟ್ಟು, ಬಿಸಿಲಿನಲ್ಲಿ ಒಣಗಿಸಿ ಸಂರಕ್ಷಿಸಿ ಇಡಬಹುದು.

ಚಳ್ಳೆ ಹಣ್ಣು

ಅಂಟು ಅಂಟಾದ ಲೋಳೆಯ ಗೋಲಿ ಗಾತ್ರದ ಹಣ್ಣುಗಳ ಚಳ್ಳೆ ಮರ ತೋಟಗಳಲ್ಲಿ ಅಪರೂಪಕ್ಕೆ ಕಾಣಸಿಗುವ ಮರ. ದ್ರಾಕ್ಷಿಯ ಗೊಂಚಲಿನಂತೆ ಕಾಣುವ ಹಳದಿ ಮಿಶ್ರಿತ ಹಣ್ಣು ಬಾಯಲ್ಲಿ ನೀರೂರಿಸುತ್ತದೆ. ಬಾಯಲ್ಲಿಟ್ಟರೆ ಮೊದಲಿಗೆ ಅಂಟಂಟೆನಿಸಿದರೂ, ಇದರ ಸಿಹಿ ಮತ್ತಷ್ಟು ತಿನ್ನಲು ಪ್ರೇರೇಪಿಸುತ್ತದೆ. ಚಳ್ಳೆ ಹಣ್ಣಿನ ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್ ಮಾಡಬಹುದು. ಪ್ರೋಟೀನ್​, ಕಬ್ಬಿಣಾಂಶ, ಪೊಟಾಷಿಯಂ, ಮೆಗ್ನೀಷಿಯಂ ಮತ್ತು ಸುಣ್ಣದಿಂದ ಸಮೃದ್ಧವಾದ ಚಳ್ಳೆ ಹಣ್ಣು ಮೂತ್ರವರ್ಧನೆ ಮತ್ತು ಕೆಮ್ಮಿಗೆ ಉತ್ತಮ ಔಷಧವಾಗಿದೆ.

ರೇಷ್ಮೆ ಹಣ್ಣು

ಮರವಾಗಿ ಬೆಳೆಯುವ ಹಿಪ್ಪು ನೇರಳೆ ತಳಿಗಳ ರೇಷ್ಮೆ ಹಣ್ಣು ತಿನ್ನಲು ರುಚಿಕರ. ವೈನ್, ಜಾಮ್​, ಜೆಲ್ಲಿ, ಜ್ಯೂಸ್​ ಮೊದಲಾದ ಮೌಲ್ಯವರ್ಧಿಕ ಪದಾರ್ಥಗಳನ್ನು ಮಾಡಬಹುದು. ವಿಟಮಿನ್​ ಸಿ ಮತ್ತು ಕಬ್ಬಿಣದಿಂದ ಸಮೃದ್ಧವಾದ ರೇಷ್ಮೆ ಹಣ್ಣು ಪೋಷಕಾಂಶಗಳ ಭಂಡಾರ. ಕೊಲೆಸ್ಟ್ರಾಲ್​​ ಮತ್ತು ರಕ್ತದೊತ್ತಡ ಕಡಿಮೆಗೊಳಿಸಲು ಇದರ ಸೇವನೆ ಸಹಕಾರಿ. ಕ್ಯಾನ್ಸರ್​ ದೂರವಿಡುವ ಗುಣ ಕೂಡ ಇದರಲ್ಲಿ ಇದೆ.

ಫ್ಯಾಶನ್​ ಫ್ರೂಟ್​

ಫ್ಯಾಶನ್ ಎಂಬ ಪದ ಕೇಳಿದ ತಕ್ಷಣ ನೂರಾರು ಭಾವನೆಗಳು ಮೂಡುತ್ತವೆ. ಒಂದು ಹಣ್ಣಿಗೆ ಈ ಪದವನ್ನೇ ನಾಮಕರಣ ಮಾಡಿದ್ದಾರೆ. ಫ್ಯಾಶನ್​ ಫ್ರೂಟ್ ಸಿಪ್ಪೆಯು ಬಲು ದಪ್ಪ. ಒಳಗೆ ಮಾತ್ರ ಸಾಕಷ್ಟು ರಸ ಇರುತ್ತದೆ. ಇದರಲ್ಲಿ ಹೇರಳವಾದ ಪೋಷಕಾಂಶಗಳಿವೆ. ಬಳ್ಳಿಯಾಗಿ ಬೆಳೆಯುವ ಫ್ಯಾಶನ್​ ಫ್ರೂಟ್ ರಸಕ್ಕೆ ಬೆಲ್ಲ ಸೇರಿಸಿ, ಕುಡಿಯುವುದರಿಂದ ತೀವ್ರ ದಾಹವನ್ನು ತಣಿಸಿಕೊಳ್ಳಬಹುದು.

ಇದನ್ನೂ ಓದಿ: Forgotten Foods Calendar 2022: ಆಹಾರವಾಗುವ ಹೂವುಗಳನ್ನು ಪರಿಚಯಿಸುತ್ತಿದೆ ಈ ಕ್ಯಾಲೆಂಡರ್​

ಒಣ ನೆಲ್ಲಿಕಾಯಿ ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ನೀವು ತಿಳಿಯಲೇಬೇಕು