Mother’s Day 2022: ಅವಳ ಪ್ರೀತಿಯ ನೆರಳಿನಲ್ಲಿ ನಾನು ಮುದ್ದು ಕಂದ
ಅಮ್ಮ ಇದ್ರೆ ಮಾತ್ರ ಮನೆ ಮನೆಯಾಗಿರುತ್ತೆ . ಟೈಮಿಗೆ ಸರಿಯಾಗಿ ತಿಂಡಿ- ಊಟ , ಗಂಟೆ ಸದ್ದು , ದೀಪಾರಾಧನೆ ಎಲ್ಲಾ.... ಅವಳು ಒಂದು ದಿನ ಇಲ್ಲದಿದ್ರು ಮನೆ ಬಿಕೋ ಅನ್ಸುತ್ತೆ ಹೊಟ್ಟೆಗೆ 5 ರೂಪಾಯಿ ಮ್ಯಾಗಿನೇ ಗತಿ.
ನನ್ನಮ್ಮ ಮೂರಡಿ ಹಾಲಿನ ಗೊಂಬೆ. ಹೆಚ್ಚೇನೂ ಓದದಿದ್ರು , ನನ್ನ ಓದಿಗೊಸ್ಕರ ಅವಳು ಪಡುವ ಶ್ರಮ ಅಷ್ಟಿಷ್ಟಲ್ಲ. ನಂಗೆ ಅನ್ಸುತ್ತೆ ಅವಳು ಹಿಂದಿನ ಜನ್ಮದಲ್ಲಿ ಅರ್ಥಶಾಸ್ತ್ರಜ್ಞೆ ಆಗಿದ್ಲು ಅಂತ, ಯಾಕೆಂದ್ರೆ ಅವಳಷ್ಟು ಸರಿಯಾಗಿ ಲೆಕ್ಕ ಹಾಕೊದಕ್ಕೆ ಯಾರಿಗೂ ಬರಲ್ಲ. ತನ್ನ ಎಷ್ಟು ಆಸೆಗಳನ್ನು ತ್ಯಾಗ ಮಾಡಿದ್ರೆ ತನ್ನ ಮಕ್ಕಳ ಆಸೆಯ ಯಾವ ವಸ್ತು ತೆಗೆದುಕೊಡಬಹುದು ಅಂತ ಅವಳು ಮಾಡೋ ಲೆಕ್ಕಾಚಾರ ಯಾವತ್ತೂ ಸರಿಯಾಗಿ ಇರುತ್ತೆ . ನಮ್ಮ ಮನೆ ಧನಲಕ್ಷ್ಮಿ ಅವಳೇ ಸಾಸಿವೆ ಡಬ್ಬಿನೇ ಅವಳ ಬ್ಯಾಂಕ್ ಲಾಕರ್ , ಬ್ಯಾಂಕಲ್ಲಿ ದುಡ್ಡು ಖಾಲಿಯಾದರೂ ಅವಳ ಸಾಸಿವೆ ಡಬ್ಬಿಯ ಜಣ ಜಣ ಸದ್ದು ಮಾತ್ರ ನಿಲ್ಲಲ್ಲ. ಹಣ ಉಳಿತಾಯ ಮಾಡೋ ಜಾಣ್ಮೆ ಇವಳಿಗೆ ಜನ್ಮತಃ ಬಂದಿದೆ.
ಅಮ್ಮ ಇದ್ರೆ ಮಾತ್ರ ಮನೆ ಮನೆಯಾಗಿರುತ್ತೆ . ಟೈಮಿಗೆ ಸರಿಯಾಗಿ ತಿಂಡಿ- ಊಟ , ಗಂಟೆ ಸದ್ದು , ದೀಪಾರಾಧನೆ ಎಲ್ಲಾ…. ಅವಳು ಒಂದು ದಿನ ಇಲ್ಲದಿದ್ರು ಮನೆ ಬಿಕೋ ಅನ್ಸುತ್ತೆ ಹೊಟ್ಟೆಗೆ 5 ರೂಪಾಯಿ ಮ್ಯಾಗಿನೇ ಗತಿ. ಹಾಗಂತ ಅವಳು ಬಹಳ ದಾರಳಿ ಅಂದ್ಕೋಬೇಡಿ . ತಾನು ಹೊಟ್ಟೆಗೆ ತಿನ್ನದಿದ್ರು ತನ್ನ ಮಕ್ಕಳು ಮಾತ್ರ ಹೊಟ್ಟೆ ತುಂಬಾ ತಿನ್ನಲಿ ಅಂತ ಎಷ್ಟೋ ರಾತ್ರಿ ಊಟ ಬಿಟ್ಟು ಮಲಗೋ ಮಹಾನ್ ಸ್ವಾರ್ಥಿ.
ಅವಳು ಯಾವಾಗ ಕೆಲ್ಸದಿಂದ ಬಂದು ಅವರ ಸೆರಗಲ್ಲಿ ಏನಾದ್ರೂ ತರ್ತಾಳೆ, ಅವಳಿಗೆ ಯಾರಾದ್ರೂ ತಿನ್ನಕೆ ಕೊಟ್ರೆ ಯಾವಾಗ ತಾನೇ ತಾನೇ ತಿಂದಿದ್ದಾಳೆ ಅದರಲ್ಲಿ ಮೂರು ಪಾಲು ಮಾಡಿ, ಸಣ್ಣ ಪಾಲನ್ನು ತಾನು ತಿಂದು, ಮಿಕ್ಕ ಎರಡು ಪಾಲನ್ನು ನನ್ನ , ನನ್ನ ತಂಗಿಯ ಬಾಯಿಗೆ ನಗುತ್ತಾ ತುರುಕುವಾಗ ಮತ್ತೆ ಅನ್ಸುತ್ತೆ ಅವಳೆಸ್ಟು ಸ್ವಾರ್ಥಿ ತನ್ನ ಬಗ್ಗೆ ಒಂದು ದಿನನಾದ್ರು ಯೋಚ್ನೆ ಮಾಡದಿರೋವಷ್ಟು…….
ದಿನಾ ನನ್ನ ನೆನಪು ಮಾಡಿಕೊಳ್ಳೋ ಒಂದು ಜೀವ ಭೂಮಿ ಮೇಲಿದೆ ಅಂದ್ರೆ ಅದು ನೀನೇ ಅಮ್ಮ , ನಾನು ದೊಡ್ಡ ಕಾಲೇಜಲ್ಲಿ ಒದ್ಬೇಕು ಅಂದಾಗ, ಒಂಚೂರು ಯೋಚ್ನೆ ಮಾಡದೆ ಓದು ಅಂತ ಅಂದು ಪ್ರತಿ ಸಲ ನನ್ನ ಅಕೌಂಟ್ ತುಂಬಿಸುತಿರೋದು ಅವಳೇ, ನನ್ನ ಹೇರೋಕೆ ಎಷ್ಟು ಕಷ್ಟ ಪಟ್ಟಿದ್ಲೋ , ನನ್ನ ಸಾಕಿ, ಓದಿಸೋಕು ಅಷ್ಟೇ ಕಷ್ಟ ಪಡುತ್ತಿದ್ದಾಳೆ . ಎಷ್ಟೇ ಕೆಲಸ ಇದ್ದರೂ, ಅವಳು ಊಟ ಮಾಡೋದು ಮರೆತರೂ ನಂಗೆ ಪೋನ್ ಮಾಡಿ ಊಟ ಮಾಡಿದ್ಯೇನೇ ಅಂತ ಕೇಳೋದು ಮಾತ್ರ ಮರೆಯಲ್ಲ. ಇದ್ಯಾವ ಬಟ್ಟೇನೆ ಇದನ್ನ ಹಾಕಬೇಡ ಆ ಉದ್ದವಾದ ಚೂಡಿ ದಾರ ಹಾಕ್ಕೊಂಡು ಹೋಗು ಅಂತ ಗದರೋ ಯಜಮಾನಿನೂ ಅವಳೇ. ನಾನು ಖಾಯಿಲೆ ಬಿದ್ದಾಗ ನನ್ನ ಸೇವೆ ಮಾಡೋ ಜವಾನೀನೂ ..
ಹಾಗಂತ ಅವಳು ಶಾಂತ ಮೂರ್ತಿ ಅಂದ್ಕೋಬೇಡಿ. ಜಂಡಿ – ಚಾಮುಂಡಿಯ ಅವತಾರನೂ ಅವಳೇ ..ಸೌಟು, ಪ್ಯಾನು, ಪೊರಕೆ ಕಡ್ಡಿ ಇವೆ ಅವಳಿಗೆ ಆಯುಧ, ಅಮ್ಮನಿಗೆ ತಿರ್ಗಿ ಮಾತಾಡಿದ್ರೆ , ಬ್ಯಾಕ್ಗ್ರೌಂಡಲ್ಲಿ ಐಗಿರಿ ನಂದಿನಿ ನಂದಿತಾ ಮೀದಿನಿ ಹಾಡು , ಅವಳೇ ಚಾಮುಂಡಿ ,ನಾನೇ ಮಹಿಷ .. ಹೊಡಿಯೋಡು ಅವಳೇ ಮತ್ತೆ ಬಂದು ನಂಗೆ ಮಾತ್ರ ಅನ್ನಕ್ಕೆ ತುಪ್ಪ ಹಾಕಿ ತಿನ್ನಿಸಿ ಸಮಾಧಾನ ಮಾಡುವವಳು ಅವಳೇ..
ನಾನೇನು ಶ್ರೀಮಂತೆ ಅಲ್ಲ ಹಾಗಂತ ಒಂದು ದಿನಾನೂ ನಾನು ಕಷ್ಟ ಪಟ್ಟಿಲ್ಲ , ಇನ್ನೊಂದು ಅರ್ಥದಲ್ಲಿ ಕಷ್ಟ ನನ್ ಹತ್ರ ಬರೋಕೆ ಅವಳು ಬಿಡಲ್ಲ , ಅವಳು ಒಂತರ ಓಝೋನ್ ಇದ್ದಂಗೆ , ಬಿಸಿಲು ಕೂಡ ಅವಳ ಸೆರಗನ್ನು ದಾಟಿ ನನ್ ಹತ್ರ ಬರೋ ಸಾಹಸ ಮಾಡಲ್ಲ, I love you ಅಮ್ಮ ……. ಇದಕ್ಕಿಂತ ಹೆಚ್ಚೇನೂ ಹೇಳೋಕೆ ಸಾಧ್ಯ..
ವೇದಶ್ರೀ ಜಿ ಎಂ ನಾಪೋಕ್ಲು
ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ