ಎಷ್ಟೋ ಜನರ ಮನೆಯಲ್ಲಿ ಗಂಡು ಮಗು ಜನನ ಆಗಬೇಕು, ಹೆಣ್ಣು ಮಗು ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ ನನ್ನಮ್ಮ ಹೆಣ್ಣು ಮಕ್ಕಳು ಬೇಕು ಅಂತಲೇ ಪ್ರಾರ್ಥನೆ ಮಾಡುತ್ತಿದ್ದರು. ಹೆಣ್ಣು ಮಗುವನ್ನು ಆಕೆಗೆ ದೇವರು ಕರುಣಿಸದಿದ್ದರೂ, ಇಂದು ಓರ್ವ ಶಿಕ್ಷಕಿಯಾಗಿ ನನ್ನಮ್ಮ ಶಾಲೆಯಲ್ಲಿ ನೂರಾರು ವಿದ್ಯಾರ್ಥಿನಿಯರಿಗೆ ಗುರುಗಳಾಗಿದ್ದಾರೆ. “ಕೂಸು ಹುಟ್ಟುವ ಮುನ್ನ ಕುಲಾವಿ” ಈ ಗಾದೆಗೆ ಹೋಲುವ ಹಾಗೆ, ನಾನು ಹುಟ್ಟುವ ಮುನ್ನವೇ ನನ್ನಮ್ಮ ಶಿರಡಿಯ ದರ್ಶನಕ್ಕೆ ಹೋಗಿ ಅಲ್ಲಿ ಪಿಂಕ್ ಬಣ್ಣದ ಕೂಲವಿ ನನಗೋಸ್ಕರ ತಂದಿದ್ದರಂತೆ! ನಡೆದಾಡುವಾಗ ಜಾನಿ ಜಾನಿ: ನನ್ನಮ್ಮ ಶಿಕ್ಷಕಿಯಾಗಿರುವುದರಿಂದ ಪಾಠ ಮಾಡುವ ಶೈಲಿ ಗೊತ್ತಿತ್ತು, ನಾನು ಮೂರು ವರ್ಷದವನಾಗಿರುವಾಗಲೇ ಸಂಜೆ ಮನೆಯಿಂದ ಹೊರಗಡೆ ವಾಕಿಂಗ್ ಹೋಗುವಾಗ ಜಾನಿ ಜಾನಿ ಎಸ್ ಪಪ್ಪಾ ರೈಮ್ಸ್ ಗಳನ್ನು ಹೇಳಿಕೊಡುತ್ತಿದ್ದರು.
ಎಷ್ಟೋ ಜನ ವೀಕೆಂಡ್ ಆದರೆ ಹೋಟೆಲ್ಗೆ ಹೋಗಿ ಅಲ್ಲಿನ ಆಹಾರವನ್ನು ಸವಿಯುತ್ತಾರೆ. ಆದರೆ ಹೋಟೆಲ್ಗಳಲ್ಲಿ ಅಡುಗೆಗೆ ಸೋಡಾ, ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಹಾಕುರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಅಮ್ಮ ಹೋಟೆಲ್ ಗೆ ಹೋಗಬಾರದು, ಮನೆಯಲ್ಲಿ ನಮಗಿಷ್ಟವಾಗುವ ಗುಲಾಬ್ ಜಾಮೂನ್, ಇಡ್ಲಿ, ವಡಾ, ಗೋಬಿ ಮಂಚೂರಿ, ಪಾನಿಪುರಿ, ವಡಾ ಪಾವ್, ಪಾವ್ ಬಜಿ ರುಚಿರುಚಿಯಾಗಿ ಮಾಡಿಕೊಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವವರು ಅಡುಗೆಗೆ ಬಟ್ಟೆಗೆ ಕೆಲಸಕ್ಕೆ ಹಚ್ಚುತ್ತಾರೆ. ಆದರೆ ನನಮ್ಮಾ ಸರ್ಕಾರಿ ಶಾಲೆಯ ಶಿಕ್ಷಕಿ ಆದರೂ ಮನೆಯಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಬಟ್ಟೆಗಳನ್ನು ಒಗೆದು ರುಚಿರುಚಿಯಾದ ಅಡುಗೆಯನ್ನು ಮಾಡಿ ಶಾಲೆಗೆ ಹೋಗುತ್ತಾರೆ. ನಮ್ಮ ಮನೆಯ ಹಾರ್ಟ್ ಬೀಟ್ ಅವರ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿ ಇರುವ ಹಾಗೆಯೇ ಬೋಧನೆ ಮಾಡದೆ, ಅವರಿಗೆ ವಿಷಯಗಳು ಮನಸ್ಸಿನಲ್ಲಿ ಉಳಿಯುವ ಹಾಗೆ ಬೋಧನೆ ಮಾಡಬೇಕು. ಕಲಿಕೆಯ ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು, 25 ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ನನ್ನಮ್ಮ, 13000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿತಿದ್ದಾರೆ. ಇವರ ವಿದ್ಯಾರ್ಥಿಗಳು ಪೊಲೀಸ್ ಕಾನ್ಸ್ಟೇಬಲ್,ಡಾಕ್ಟರ್, ಇಂಜಿನಿಯರ್,ನಾನಾ ರಂಗಗಳಲ್ಲಿ ತಮ್ಮ ವೃತ್ತಿಯನ್ನು ಕಂಡುಕೊಂಡಿದ್ದಾರೆ.
ಮೇ 8 ರಂದು ಮಾತ್ರ ಅಮ್ಮನ ದಿನವೆಂದು ಆಚರಣೆ ಮಾಡಬಾರದು, ಪ್ರತಿದಿನವೂ ಅಮ್ಮ ದಿನವೆಂದು ಆಚರಣೆ ಮಾಡೋಣ ಸ್ನೇಹಿತರೆ.ಅಮ್ಮನೇ ಬಗ್ಗೆ ಹೇಳಿಕೊಂಡು ಹೋದರೆ ವರ್ಣಿಸಲು ಪದಗಳು ಸಾಲದು ಒಂದೇ ಮಾತಿನಲ್ಲಿ ಹೇಳಬೇಕಾದರೆ ನನ್ನಮ್ಮ ದೇವರು.
ಆನಂದ್ ಜೇವೂರ್, ಕಲಬುರಗಿ
ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿ
ಅಮ್ಮಂದಿರ ಬಗ್ಗೆ ಅದ್ಭುತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ