Mother’s Day 2025: ತಾಯಂದಿರ ದಿನದಂದು ಪ್ರೀತಿಯ ಅಮ್ಮನಿಗೆ ಈ ಕೆಲವು ಸರ್‌ಪ್ರೈಸ್‌ ಗಿಫ್ಟ್‌ಗಳನ್ನು ನೀಡಿ

ತಾಯಿಯ ನಿಷ್ಕಲ್ಮಶ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ. ಆಕೆಯ ಪ್ರೀತಿ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳಿಗಾಗಿ ಯಾವ ಕಷ್ಟವನ್ನು ಬೇಕಾದರೂ ಎದುರಿಸಿ ನಿಲ್ಲುವ ತಾಯಂದಿರಿಗೆ ಗೌರವ ಸಲ್ಲಿಸಲು ಮತ್ತು ತಾಯಿಯ ಮೌಲ್ಯ ಎಂತಹದ್ದೆಂದು ಜಗತ್ತಿಗೆ ತಿಳಿಸಲು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನ ನಿಮ್ಮ ಪ್ರೀತಿಯ ಅಮ್ಮನಿಗೆ ಈ ಕೆಲವೊಂದು ಗಿಫ್ಟ್‌ ನೀಡುವ ಮೂಲಕ ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.

Mother’s Day 2025: ತಾಯಂದಿರ ದಿನದಂದು ಪ್ರೀತಿಯ ಅಮ್ಮನಿಗೆ ಈ ಕೆಲವು ಸರ್‌ಪ್ರೈಸ್‌ ಗಿಫ್ಟ್‌ಗಳನ್ನು ನೀಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 08, 2025 | 4:45 PM

ಈ ಪ್ರಪಂಚದಲ್ಲಿ ತಾಯಿಗೆ (Mother) ವಿಶೇಷವಾದ ಸ್ಥಾನಮಾನವಿದೆ. ಅಮ್ಮ ಎನ್ನುವುದು ಕೇವಲ ಪದವಲ್ಲ, ಅದೊಂದು ಶಕ್ತಿ. ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಆಕೆಯ ಋಣವನ್ನು ಏಳು ಜನ್ಮ ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ. ಇಂತಹ ತ್ಯಾಗಮಯಿ ತಾಯಿಯ ಪ್ರೀತಿ, ತ್ಯಾಗವನ್ನು ಗೌರವಿಸಲು, ತಾಯಿಯ ಮೌಲ್ಯವನ್ನು ಜಗತ್ತಿಗೆ ತಿಳಿಸಲು ಪ್ರತಿ ವರ್ಷ ಮೇ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು (Mother’s Day) ಆಚರಿಸಲಾಗುತ್ತದೆ. ಈ ವಿಶೇಷ ದಿನ ನಿಮ್ಮ ಪ್ರೀತಿಯ ಅಮ್ಮನಿಗೆ ಈ ಕೆಲವು ಉಡುಗೊರೆಗಳನ್ನು (Gift)  ನೀಡುವ ಮೂಲಕ ತಾಯಂದಿರ ದಿನವನ್ನು ಬಹಳ ವಿಶೇಷವಾಗಿ ಆಚರಿಸಿ.

ತಾಯಂದಿರ ದಿನದಂದು ಅಮ್ಮನಿಗೆ ಈ ಉಡುಗೊರೆಗಳನ್ನು ನೀಡಿ:

ಆಭರಣ:  ನಿಮ್ಮ ತಾಯಿಗೆ ಆಭರಣ ಧರಿಸುವುದು ಇಷ್ಟವಾಗಿದ್ದರೆ, ಅವರಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡಿ. ಮಹಿಳೆಯರು ಸಾಮಾನ್ಯವಾಗಿ ಆಭರಣಗಳನ್ನು ಇಷ್ಟಪಡುವುದರಿಂದ ನಿಮ್ಮ ತಾಯಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ. ಈ ತಾಯಂದಿರ ದಿನದಂದು ನೀವು ನಿಮ್ಮ ಪ್ರೀತಿಯ ತಾಯಿಗೆ ಒಂದು ಸುಂದರವಾದ ಉಂಗುರ, ಅಥವಾ ಹಾರ ಅಥವಾ ಬಳೆಯನ್ನು ಉಡುಗೊರೆಯಾಗಿ ನೀಡಬಹುದು.

ಅಡುಗೆ ಪಾತ್ರೆಗಳು: ಅಮ್ಮಂದಿರಿಗೆ ಮನೆಯಲ್ಲಿ ಎಷ್ಟು ಅಡುಗೆ ಪಾತ್ರೆಗಳು ಇದ್ದರೂ ಸಾಲುವುದಿಲ್ಲ. ನಿಮ್ಮ ತಾಯಿಗೂ ಅಡುಗೆ ಮಾಡುವುದು ತುಂಬಾ ಇಷ್ಟವಾಗಿದ್ದರೆ ಮತ್ತು ಬಗೆಬಗೆಯ ಪಾತ್ರೆಗಳನ್ನು ಖರೀದಿಸುವುದು ಇಷ್ಟವಾಗಿದ್ದರೆ, ನೀವು ಅಮ್ಮಂದಿರ ದಿನದಂದು ಒಂದಷ್ಟು ಪಾತ್ರೆ, ಕಿಚನ್‌ ಐಟಂಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರನ್ನು ಸಂತೋಷ ಪಡಿಸಬಹುದು.

ಇದನ್ನೂ ಓದಿ
ಬೇಸಿಗೆಯಲ್ಲಿ ನೀವು ಸವಿಯಲೇಬೇಕಾದ ಭಾರತೀಯ ಭಕ್ಷ್ಯ, ಪಾನೀಯಗಳಿವು
ರಾಜ್ಯದಿಂದ ರಾಜ್ಯಕ್ಕೆ ಪೊಲೀಸರ ಸಮವಸ್ತ್ರ ಭಿನ್ನವಾಗಿರುತ್ತದೆಯೇ?
ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಎಲೆಯೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ
ಬಟ್ಟೆ ಕಲೆ, ಗ್ಯಾಸ್‌ ಸ್ಟವ್‌ ಮೇಲಿನ ಕೊಳೆ ತೆಗೆದು ಹಾಕಲು ಇಲ್ಲಿದೆ ಟಿಪ್ಸ್

ಫೋಟೋ ಫ್ರೇಮ್:‌ ಈ ತಾಯಂದಿರ ದಿನದಂದು ನೀವು ನಿಮ್ಮ ತಾಯಿಗೆ ಕಸ್ಟಮೈಸ್ ಮಾಡಿದ ಫೋಟೋ ಫ್ರೇಮ್‌ಗಳನ್ನು ಕೂಡಾ ಉಡುಗೊರೆಯಾಗಿ ನೀಡಬಹುದು. ನಿಮ್ಮ ಸುಂದರ ನೆನಪುಗಳ ಆಲ್ಬಮ್ ಅನ್ನು ಅವರಿಗೆ ನೀಡುವುದು ಉತ್ತಮ ಆಯ್ಕೆಯಾಗಿದೆ.

ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿ: ಇದು ಕೂಡಾ ಒಂದು ಬೆಸ್ಟ್‌ ಗಿಫ್ಟ್‌ ಅಂತಾನೇ ಹೇಳಬಹುದು. ಯಾವಾಗಲೂ ಗಂಡ, ಮಕ್ಕಳು ಸಂಸಾರ ಅಂತ ಬ್ಯುಸಿಯಾಗಿರುವ ತಾಯಿಯನ್ನು ನೀವು ಎಲ್ಲಾದರೂ ಪ್ರವಾಸ ಕರೆದುಕೊಂಡು ಹೋಗಿ, ಅಥವಾ ಒಂದೊಳ್ಳೆ ರೆಸ್ಟೋರೆಂಟ್‌ ಲಂಚ್‌, ಡಿನ್ನರ್‌ಗೆ ಕರೆದುಕೊಂಡು ಹೋಗಿ. ಈ ಮೂಲಕ ನಿಮ್ಮ ತಾಯಿಯನ್ನು ಸಂತೋಷ ಪಡಿಸಬಹುದು.

ಇದನ್ನೂ ಓದಿ: ಈ ಚಿತ್ರದಲ್ಲಿ ನಿಮ್ಮಿಷ್ಟದ ಕುದುರೆಯನ್ನು ಆಯ್ಕೆ ಮಾಡಿ, ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು ಪರೀಕ್ಷಿಸಿ

ಗಿಡಗಳನ್ನು ಉಡುಗೊರೆ ನೀಡಬಹುದು: ಮನೆಯಲ್ಲಿ ಗಿಡಗಳನ್ನು ನೆಡುವುದೆಂದರೆ ತಾಯಂದಿರಿಗೆ ಅದೇನೋ ಪ್ರೀತಿ. ನಿಮ್ಮ ತಾಯಿಗೂ ಗಿಡಗಳು  ಇಷ್ಟ ಎಂದಾದರೆ, ನೀವು ಅವರಿಗೆ ವಿಶೇಷವಾದ ಹೂವಿನ ಗಿಡ, ಇಂಡೋರ್‌ ಗಿಡಗಳನ್ನು ಉಡುಗೊರೆಯಾಗಿ ನೀಡಬಹುದು.

ಬಟ್ಟೆ ಗಿಫ್ಟ್‌ ಮಾಡಬಹುದು: ನೀವು ಅಮ್ಮಂದಿರ ದಿನದಂದು ನಿಮ್ಮ ಪ್ರೀತಿಯ ತಾಯಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಅದರಲ್ಲೂ ಸೀರೆ ಗಿಫ್ಟ್‌ ಮಾಡಿದ್ರೆ ನಿಮ್ಮ ಅಮ್ಮಂದಿರು ನಿಜಕ್ಕೂ ಸಂತೋಷ ಪಡುತ್ತಾರೆ. ಚೂಡಿದಾರ, ಸೀರೆ ಕೂಡಾ ಒಂದೊಳ್ಳೆ ಉಡುಗೊರೆ ಆಯ್ಕೆಯಾಗಿದೆ.

ಇದಲ್ಲದೆ ನೀವು ನಿಮ್ಮ ತಾಯಿಗೆ ನಿಮ್ಮ ಕೈಯಾರೆ ಆಕೆಯ ನೆಚ್ಚಿನ ತಿಂಡಿಯನ್ನು ಮಾಡಿ ಬಡಿಸಬಹುದು, ಸ್ಕಿನ್‌ಕೇರ್‌ ಪ್ರೋಡಕ್ಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಸುಂದರ ಬರಹಗಳಿರುವ ಗ್ರೀಟಿಂಗ್ ಕಾರ್ಡ್‌ಗಳನ್ನು, ಗಾಜಿನ ಬಳೆಯನ್ನು ಉಡುಗೊರೆಯಾಗಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ