AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cleaning Tips: ಈ ಸಿಂಪಲ್‌ ಟಿಪ್ಸ್‌ ಪಾಲಿಸುವ ಮೂಲಕ ಬಟ್ಟೆಯ ಕಲೆ, ಗ್ಯಾಸ್ ಸ್ಟವ್‌ ಮೇಲಿನ ಕೊಳೆಯನ್ನು ಹೋಗಲಾಡಿಸಿ

ಎಷ್ಟೇ ಜಾಗ್ರತೆ ವಹಿಸಿದರೂ ಬಟ್ಟೆಯ ಮೇಲೆ ಕಲೆ ಮತ್ತು ಅಡುವೆ ಮನೆಯಲ್ಲಿ ಕೊಳೆ ಆಗ್ತಾನೆ ಇರುತ್ತವೆ. ಅದರಲ್ಲೂ ಹಾಲು ಬಿದ್ದು, ಎಣ್ಣೆ ಬಿದ್ದು ಗ್ಯಾಸ್‌ ಸ್ಟವ್‌ಗಳ ಮೇಲೆ ಹೆಚ್ಚು ಕೊಳೆಯಾಗುತ್ತಿರುತ್ತವೆ. ಈ ಕೊಳೆಗಳಂತೂ ಎಷ್ಟು ಕ್ಲೀನ್‌ ಮಾಡಿದ್ರೂ ಹೋಗಲ್ಲ ಅಂತ ಗೃಹಿಣಿಯರು ಗೊಣಗುತ್ತಿರುತ್ತಾರೆ. ನಿಮ್ಮ ಮನೆಯಲ್ಲೂ ಗ್ಯಾಸ್‌ ಸ್ಟವ್‌ ತುಂಬಾ ಕೊಳೆಯಾಗಿದ್ಯಾ ಅಥವಾ ಮನೆಯವರ ಜೀನ್ಸ್‌ ಪ್ಯಾಂಟ್‌ಗಳಲ್ಲಿ ಕಲೆ ಆಗಿದ್ಯಾ, ಹಾಗಿದ್ರೆ ಈ ಕೆಲವೊಂದು ಸಿಂಪಲ್‌ ಹ್ಯಾಕ್‌ಗಳನ್ನು ಫಾಲೋ ಮಾಡುವ ಮೂಲಕ ಸುಲಭವಾಗಿ ಕಲೆಗಳನ್ನು ಹೋಗಲಾಡಿಸಿ.

Cleaning Tips: ಈ ಸಿಂಪಲ್‌ ಟಿಪ್ಸ್‌ ಪಾಲಿಸುವ ಮೂಲಕ ಬಟ್ಟೆಯ ಕಲೆ, ಗ್ಯಾಸ್ ಸ್ಟವ್‌ ಮೇಲಿನ ಕೊಳೆಯನ್ನು ಹೋಗಲಾಡಿಸಿ
ಕ್ಲೀನಿಂಗ್‌ ಟಿಪ್ಸ್Image Credit source: Social Media
ಮಾಲಾಶ್ರೀ ಅಂಚನ್​
|

Updated on: May 07, 2025 | 4:38 PM

Share

ಎಷ್ಟೇ ಕ್ಲೀನ್‌  ಮಾಡಿ ಇಟ್ಟುಕೊಂಡರು, ಅಡುಗೆ, ಇನ್ನಿತರೆ ಕೆಲಸ ಮಾಡುವಾಗ ಅಡುಗೆ ಮನೆ (Kitchen) ಕೊಳೆಯಾಗುವುದು, ಅದರಲ್ಲೂ ವಿಶೇಷವಾಗಿ ಅಡುಗೆ ಮನೆಯಲ್ಲಿ ಗ್ಯಾಸ್‌ ಸ್ಟವ್‌ (Gas Stove) ಕೊಳೆಯಾಗುವುದು ಮತ್ತು ಬಟ್ಟೆಗಳ (cloths)  ಮೇಲೆ ಜಿಡ್ಡು, ಪದಾರ್ಥಗಳ ಕಲೆ ಆಗೋದು ಸಾಮಾನ್ಯ. ಡಿಟರ್ಜಂಟ್‌ನಿಂದ ಎಷ್ಟೇ ಎಷ್ಟೇ ಸ್ಕ್ರಬ್‌ ಮಾಡಿದರೂ ಆ ಬಟ್ಟೆ ಮೇಲಿನ ಕಲೆ ಹೋಗುವುದಿಲ್ಲ. ಇನ್ನೂ ಗ್ಯಾಸ್‌ ಸ್ವವ್‌ಗಳನ್ನು ಪ್ರತಿ ಬಾರಿ ಅಡುಗೆ ಮಾಡಿದ ನಂತರ ಕ್ಲೀನ್‌ ಮಾಡಿದ್ರೂ ಕೂಡಾ ಅದರ ಕೊಳೆ ಮಾತ್ರ ಹೋಗೋದಿಲ್ಲ ಎಂದು ಗೃಹಿಣಿಯರು ಗೊಣಗುತ್ತಿರುತ್ತಾರೆ. ಹೀಗಿರುವಾಗ ಕೆಲವೊಂದು ಸಿಂಪಲ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.

ಬಟ್ಟೆ ಕಲೆ, ಗ್ಯಾಸ್‌ ಸ್ಟವ್‌ ಮೇಲಿನ ಕೊಳೆ ತೆಗೆದು ಹಾಕಲು ಇಲ್ಲಿದೆ ಟಿಪ್ಸ್:‌

ಕ್ಲೀನಿಂಗ್‌ ಟಿಪ್ಸ್‌ಗಳಿಗೆ ಸಂಬಂಧಿಸಿದ ಉಪಯುಕ್ತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಜೀನ್ಸ್‌ ಪ್ಯಾಂಟ್‌ ಮೇಲಿನ ಕಲೆ, ಗ್ಯಾಸ್‌ ಸ್ಟವ್‌ ಮೇಲಿನ ಕೊಳೆ ಹಾಗೂ ಇಸ್ತ್ರಿ ಪೆಟ್ಟಿಗೆಯ ಮೇಲಿನ ಕಲೆಯನ್ನು ಸುಲಭವಾಗಿ ತೆಗೆದು ಹಾಕುವ ಟಿಪ್ಸ್‌ ನೀಡಲಾಗಿದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ವಿಶ್ವ ಅಥ್ಲೆಟಿಕ್ಸ್‌ ದಿನವನ್ನು ಆಚರಿಸುವ ಉದ್ದೇಶವೇನು?
Image
ಈ ರೀತಿ ಮನೆಯಲ್ಲೇ ಮಾಡಿ ನೋಡಿ ಟೇಸ್ಟಿಯಾಗಿರುವ ಚಿಕನ್‌ ಉಪ್ಪಿನಕಾಯಿ
Image
ಬೇಸಿಗೆಯಲ್ಲಿ ಈ 5 ವಸ್ತುಗಳು ನಿಮ್ಮ ಪರ್ಸ್‌ನಲ್ಲಿ ಇರಬೇಕು

ಇದನ್ನೂ ಓದಿ: ಚಿಕನ್‌ನಿಂದಲೂ ಸಖತ್‌ ಟೇಸ್ಟಿ ಉಪ್ಪಿನಕಾಯಿ ಮಾಡ್ಬೋದು; ಇಲ್ಲಿದೆ ನೋಡಿ ರೆಸಿಪಿ

ವಿಡಿಯೋ ಇಲ್ಲಿದೆ ನೋಡಿ:

ಒಂದು ವೇಳೆ ಜೀನ್ಸ್‌ ಪ್ಯಾಂಟ್‌ ಮೇಲೆ ಕಲೆಗಳಾದ್ರೆ ಅದನ್ನು ಡಿಟರ್ಜಂಟ್‌ ಬಳಸಿ ತಿಕ್ಕಿ ತಿಕ್ಕಿ ಬಣ್ಣ ಮಾಸುವಂತೆ ಮಾಡುವ ಬದಲು ಕಲೆಯಾದ ಜಾಗಕ್ಕೆ ಸ್ವಲ್ಪ ಬೇಕಿಂಗ್‌ ಸೋಡಾ ಹಾಕಿ ಅದರ ಮೇಲೆ ಪ್ಲೈನ್‌ ಪೇಪರ್‌ ಇಟ್ಟು ಇಸ್ತ್ರಿ ಪೆಟ್ಟಿಗೆಯಿಂದ ಸ್ವಲ್ಪ ಬಿಸಿ ಮಾಡಿದರೆ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು.

ಇನ್ನೂ ಗ್ಯಾಸ್‌ ಸ್ಟವ್‌ ಮೇಲೆ ಜಿಡ್ಡು ಇನ್ನಿತರೆ ಕೊಳೆಯಾದರೆ ಅದರ ಮೇಲೆ ಸಾಬೂನೂ ನೀರು ಹಾಕಿ ಸ್ಕ್ರಬ್ಬರ್‌ನಿಂದ ನಿಧಾನಕ್ಕೆ ತಿಕ್ಕಿದರೆ ಕೊಳೆ ತೆಗೆದು ಹಾಕಬಹುದು. ಒಂದು ವೇಳೆ ಬಟ್ಟೆ ಇಸ್ತ್ರಿ ಮಾಡುವಾಗ ಆ ಬಟ್ಟೆಯ ಬಣ್ಣ ಇಸ್ತ್ರಿ ಪೆಟ್ಟಿಗೆಯ ಮೇಲೆ ಅಂಟಿಕೊಂಡರೆ, ಇಸ್ತ್ರಿ ಪೆಟ್ಟಿಗೆಯನ್ನು ಸ್ವಲ್ಪ ಬಿಸಿ ಮಾಡಿ ಕಲೆಯಿರುವ ಜಾಗಕ್ಕೆ ಆಸ್ಪಿರಿನ್‌ ಮಾತ್ರೆಯನ್ನು ತಿಕ್ಕುವ ಮೂಲಕ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು. ಇಂತಹ ಸಿಂಪಲ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಕಲೆ, ಕೊಳೆಗಳನ್ನು ತೆಗೆದುಹಾಕಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ