Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2022 | 9:52 AM

ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ.

Naga Panchami 2022: ನಾಗರ ಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಸಿಹಿ ಕಡುಬು
Naga Panchami
Follow us on

ಹಿಂದುಗಳ ಪವಿತ್ರ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಈ ದಿನ ನಾಗ ದೇವರಿಗೆ ಹಾಲೆರಿಯುವ ಪದ್ದತಿಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದಿಗೂ ಅದೇ ಪದ್ದತಿ ಆಚರಣೆಯನ್ನು ಮಾಡಲಾಗುತ್ತಿದೆ. ಒಂದೊಂದು ಕಡೆಯಲ್ಲಿ ಅವರದೇ ಆದ ಸಂಪ್ರದಾಯವಿದೆ.. ನಾಗರ ಪಂಚಮಿಯ ಹಬ್ಬವನ್ನು ಪ್ರತೀ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿಶೇಷವಾದ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಲಾಗುತ್ತದೆ. ಪಂಚಕಜ್ಜಾಯ, ಕಡುಬು, ಲಡ್ಡು ಹೀಗೆ ಅನೇಕ ಬಗೆಯ ತಿನಿಸಿಗಳನ್ನು ಮಾಡಲಾಗುತ್ತದೆ. ನಾಗರ ಪಂಚಮಿಯ ವಿಶೇಷವಾದ ತಿಂಡಿಗಳಲ್ಲಿ ಅರಶಿನ ಎಲೆಯ ಕಡುಬು ಕೂಡಾ ಒಂದು.

ಈ ಅರಶಿನ ಎಲೆಯ ಕಡುಬನ್ನು ಹೆಚ್ಚಾಗಿ ದಕ್ಷಿಣ ಕನ್ನಡ ಉಡುಪಿ ಭಾಗದ ಜನರು ಮಾಡುತ್ತಾರೆ. ನಾಗರ ಪಂಚಮಿಯ ಶುಭ ದಿನದಂದು ಪ್ರತೀ ಮನೆಯಲ್ಲೂ ಅರಶಿನ ಎಲೆಯ ಕಡುಬನ್ನು ತಯಾರು ಮಾಡಿ ಸವಿಯುತ್ತಾರೆ. ಈ ಕಡುಬನ್ನು ಹೇಗೆ ಮಾಡಲಾಗುತ್ತದೆ ಅಂದ್ರೆ, ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಅರಶಿನ ಎಲೆ, ಅಕ್ಕಿ, ಅವಲಕ್ಕಿ, ತೆಂಗಿನ ಕಾಯಿ ತುರಿ, ಬಿಳಿ ಅಥವಾ ಕಪ್ಪು ಎಳ್ಳು, ಬೆಲ್ಲ ಹಾಗೂ ಸ್ವಲ್ಪ ಏಲಕ್ಕಿ.
ಮೊದಲಿಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ ದಪ್ಪಗಿನ ಪೇಸ್ಟ್ ತಯಾರಿಸಬೇಕು. ಅದಾದ ಬಳಿಕ ಅವಲಕ್ಕಿ, ತೆಂಗಿನ ಕಾಯಿ ತುರಿ, ತುರಿದ ಬೆಲ್ಲವನ್ನು ಸೇರಿಸಿ ಪಾಕವನ್ನು ಮಾಡಬೇಕು ಅದಕ್ಕೆ ಡ್ರೆಹಿ ರೋಸ್ಟ್ ಮಾಡಿದ ಎಳ್ಳನ್ನು ಸೇರಿಸಬೇಕು.

ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಇವೆಲ್ಲದರ ಸಿಹಿ ಹೂರಣವನ್ನು ತಯಾರು ಮಾಡಬೇಕು. ನಂತರ ಶುದ್ಧವಾಗಿ ತೊಳೆದಿಟ್ಟ ಅರಶಿನ ಎಲೆಯ ಮೇಲೆ ಮೊದಲಿಗೆ ಅಕ್ಕಿಯ ದಪ್ಪಗಿನ ಹಿಟ್ಟನ್ನು ಸವರಿ ಅದರ ಮೇಲೆ ಮೊದಲೇ ತಯಾರು ಮಾಡಿ ಇಟ್ಟಂತಹ ಸಿಹಿ ಹೂರಣವನ್ನು ಹಾಕಿ ಎಲೆಯನ್ನು ಮಡಚಬೇಕು. ಕೊನೆಯ ಹಂತದಲ್ಲಿ ಒಂದು ಇಡ್ಲಿ ಪಾತ್ರೆಯಲ್ಲಿ ತಯಾರಿಸಿದಂತಹ ತಿಂಡಿಯನ್ನು ಇಟ್ಟು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಬೇಕು. ಇವಿಷ್ಟು ಅರಶಿನ ಕಡುಬು ತಯಾರಿಸುವ ವಿಧಾನವಾಗಿದೆ. ಬಹಳ ಸುಲಭವಾಗಿ ತಯಾರಿಸಬಹುದಾದಂತಹ ಒಂದು ರುಚಿಕರವಾದ ಸಿಹಿ ತಿನಿಸು ಇದಾಗಿದೆ. ಇದನ್ನು ತುಪ್ಪದ ಜೊತೆ ಸವಿದರೆ ಇದರ ರುಚಿ ಇನ್ನು ಹೆಚ್ಚಾಗಿರುತ್ತದೆ. ನಾಗರ ಪಂಚಮಿಯ ವಿಷೇಶ ತಿನಿಸುಗಳಲ್ಲಿ ಇದು ಕೂಡಾ ಒಂದಾಗಿದೆ. ನಾಗರ ಪಂಚಮಿಯ ದಿನದಂದೆ ಈ ತಿನಿಸನ್ನು ತಯಾರಿಸುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಇದನ್ನೂ ಓದಿ
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Naga Panchami 2022: ನಾಗರ ಪಂಚಮಿ ಹಬ್ಬದ ವಿಶೇಷತೆ, ಆಚರಣೆ ಮತ್ತು ಮಹತ್ವದ ಮಾಹಿತಿ ಇಲ್ಲಿದೆ
ತಿರುಮಲ ತಿರುಪತಿ ಹುಂಡಿ ಆದಾಯ: ಶ್ರೀವಾರಿ ಹುಂಡಿಗೆ ಹಣದ ಪ್ರವಾಹ, ಜುಲೈ ತಿಂಗಳಲ್ಲಿ ಈ ಬಾರಿ ಅತ್ಯಧಿಕ
Spiritual: ಶ್ರಾವಣ ಸೋಮವಾರ ಉಪವಾಸದ ಕ್ರಮ ಮತ್ತು ಫಲ ಏನು ಗೊತ್ತಾ? ಇಲ್ಲಿದೆ ನೋಡಿ

ಮಾಲಾಶ್ರೀ ಅಂಚನ್ 

Published On - 9:49 am, Tue, 2 August 22