
ಒಂದು ಕಾಲದಲ್ಲಿ ಸಮಾಜದ ದುರ್ಬಲ ವರ್ಗಗಳ ಜನರು, ಅದರಲ್ಲೂ ವಿಶೇಷವಾಗಿ ಹಿಂದುಳಿದ ಸಮುದಾಯಗಳು, ಮಹಿಳೆಯರು ಮತ್ತು ವಿಕಲ ಚೇತನರಿಗೆ ಸರಿಯಾದ ಕಾನೂನು ಸೇವೆಗಳು (Legal Services) ದೊರೆಯುತ್ತಿರಲಿಲ್ಲ, ಕಾನೂನು ನೆರವು ಪಡೆಯಲು ಕಷ್ಟಪಡುತ್ತಿದ್ದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಬಂದ ಬಳಿಕ ದುರ್ಬಲರು ಯಾರಿದ್ದಾರೋ ಅವರಿಗೆ ಉಚಿತ ಕಾನೂನು ಸೇವೆಗಳನ್ನು ನೀಡುವ ಭರವಸೆಯನ್ನು ನೀಡಲಾಯಿತು. ಇದು ಶ್ರೀಮಂತ ಮಾತ್ರವಲ್ಲ ವ್ಯಕ್ತಿ ಬಡವನಾಗಿರಲಿ, ವಿಕಲ ಚೇತನರಾಗಿರಲಿ, ಸಮಾಜದ ದುರ್ಬಲ ವರ್ಗದವನಾಗಿರಲಿ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶವಿದೆ ಎಂಬುದನ್ನು ಒತ್ತಿ ಹೇಳಿತು. ಕಾನೂನು ಎನ್ನುವಂತಹದ್ದು ಎಲ್ಲರಿಗೂ ಒಂದೇ, ನ್ಯಾಯ ಪಡೆಯುವ ಸಮಾನ ಅವಕಾಶ ಎಲ್ಲರಿಗೂ ಇದೆ. ಈ ಕಾನೂನು ಸೇವೆಗಳು, ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಮತ್ತು ಈ ಕಾಯ್ದೆಯ ಅಡಿಯಲ್ಲಿ ಸಮಾಜದ ದುರ್ಬಲ ವರ್ಗದವರಿಗೆ ಲಭಿಸುವ ಉಚಿತ ಕಾನೂನು ಸೇವೆಗಳ ನೆರವಿನ ಲಭ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನವೆಂಬರ್ 9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತದೆ.
1995 ರಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ದಿನವನ್ನು ಸ್ಥಾಪಿಸಿತು. ಅಂದಿನಿಂದ, ಪ್ರತಿ ವರ್ಷ ನವೆಂಬರ್ 9 ರಂದು ಇದನ್ನು ಆಚರಿಸಲಾಗುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ 1987 ನ್ನು ಅಕ್ಟೋಬರ್ 1987 ರಂದು ಕೇಂದ್ರ ಸರ್ಕಾರವು ಭಾರತೀಯ ಸಂವಿಧಾನದ 39A ವಿಧಿಯ ಅಡಿಯಲ್ಲಿ ಮತ್ತು ಅದರ ಸಮಿತಿಯ ಶಿಫಾರಸುಗಳ ಮೇಲೆ ಈ ಕಾಯಿದೆಯನ್ನು 09 ನವೆಂಬರ್ 1995 ರಂದು ಜಾರಿಗೆ ತರಲಾಯಿತು. ಈ ಕಾಯಿದೆ ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿ ರಾಷ್ಟ್ರೀಯ ಸೇವಾ ದಿನವನ್ನು ಆಚರಿಸುವುದಾಗಿ, ಭಾರತದ ಸರ್ವೋಚ್ಛ ನ್ಯಾಯಾಲಯವು ಘೋಷಿಸಿತು. ಈ ದಿನದ ಮೂಲಕ ಕಾನೂನು ವ್ಯವಸ್ಥೆಗಳ ಬಗ್ಗೆ ಜಾಗೃತಿ ಮೂಡಿಸು ಪ್ರಯತ್ನ ಮಾಡಲಾಗುತ್ತಿದೆ. ಹೀಗೆ ಜನರಿಗೆ ನ್ಯಾಯ ಪಡೆಯುವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಸಮಾಜದ ಬಡವರು ಮತ್ತು ದುರ್ಬಲ ವರ್ಗಗಳಿಗೆ ಕಾನೂನು ನೆರವು ನೀಡುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಯಾಗಿದೆ. NALSA ಅನ್ನು 1995 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಸ್ಥಾಪಿಸಿತು. ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಮತ್ತು ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗಳನ್ನು ಆಯೋಜಿಸುವ ಉದ್ದೇಶದಿಂದ 1987 ರ ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, NALSA ಅನ್ನು ರಚಿಸಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ 1987 ನ್ನು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 39A ಮತ್ತು ಅದರ ಸಮಿತಿಯು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ ಜಾರಿಗೆ ತಂದಿತು. 1994 ರ ತಿದ್ದುಪಡಿ ಕಾಯಿದೆಯ ನಂತರ ಈ ಕಾಯಿದೆಯನ್ನು ನವೆಂಬರ್ 1995 ರಂದು ಜಾರಿಗೆ ತರಲಾಯಿತು. ಅಂದಿನಿಂದ ಈ ಮುಖ್ಯ ಕಾಯಿದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕಾಯ್ದೆಯ ಮೂಲಕ ಸಮಾಜದ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲವಿರುವ ವರ್ಗಗಳು ಮತ್ತು ವಿಕಲಚೇತನರಿಗೆ ಉಚಿತ ಕಾನೂನು ನೆರವನ್ನು ಪಡೆಯುವ ಹಕ್ಕನ್ನು ನೀಡಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ನ್ಯಾಯಮೂರ್ತಿ ಆರ್.ಎನ್ ಮಿಶ್ರಾ ಡಿಸೆಂಬರ್ 05, 1995 ರಂದು ಕಾನೂನು ಸೇವೆಗಳ ಪ್ರಾಧಿಕಾರ 1987 ರ ಅಡಿಯಲ್ಲಿ ಜಾರಿಗೆ ತಂದರು. ಈ ಪ್ರಾಧಿಕಾರವು ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು, ಮಾರ್ಗದರ್ಶನವನ್ನು ಒದಗಿಸುವ ಮತ್ತು ಮಧ್ಯಸ್ಥಿಕೆ ಹಾಗೂ ಸೌಹಾರ್ದಯುತ ಇತ್ಯರ್ಥಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವಂತಹ ಕಾರ್ಯವನ್ನು ಮಾಡುತ್ತದೆ. ಜೊತೆಗೆ ಅಗತ್ಯವಿರುವವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಉಚಿತ ಕಾನೂನು ನೆರವು ಮತ್ತು ಉಚಿತ ಸಮಲೋಚನೆಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಸುನಾಮಿ ಎಚ್ಚರಿಕೆ ವ್ಯವಸ್ಥೆಗಳು ಸಾವಿರಾರು ಜೀವಗಳನ್ನು ಉಳಿಸಬಲ್ಲದು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ