National Parents Day 2024 : ಪೋಷಕರ ದಿನಕ್ಕೆ ತಂದೆ ತಾಯಿಗೆ ಈ ರೀತಿ ಸಂದೇಶ ಕಳುಹಿಸಿ ಶುಭಾಶಯ ತಿಳಿಸಿ
ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿಯ ಪ್ರೀತಿ ಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ ಅವರ ಪ್ರೀತಿ, ಕಾಳಜಿ, ಜವಾಬ್ದಾರಿಗಳನ್ನು ಅರಿತು, ಗೌರವ ಸೂಚಿಸುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ. ತಂದೆ ತಾಯಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜುಲೈ ತಿಂಗಳ ನಾಲ್ಕನೇ ಭಾನುವಾರದಂದು ರಾಷ್ಟ್ರೀಯ ಪೋಷಕರ ದಿನ ಎಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವವೇನು ಎನ್ನುವುದರ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರ ಜೀವನದಲ್ಲಿ ಹಿತವನ್ನೇ ಬಯಸುವ ಜೀವಗಳೆಂದರೆ ತಂದೆ ತಾಯಿ ಮಾತ್ರ. ಹುಟ್ಟಿನಿಂದ ಸಾವಿನವರೆಗೆ ಪ್ರತಿ ಹೆಜ್ಜೆಯಲ್ಲೂ ಜೊತೆಗೆ ನಿಂತು ಮಕ್ಕಳಿಗೆ ಧೈರ್ಯ ತುಂಬುತ್ತಾರೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು, ಉದ್ಯೋಗ ಗಿಟ್ಟಿಸಿಕೊಂಡು ಒಂದೊಳ್ಳೆ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಯರ ಆಸೆಯಾಗಿರುತ್ತದೆ. ಹೀಗಾಗಿ ತಮ್ಮ ಕಷ್ಟವನ್ನು ಮಕ್ಕಳ ಮುಂದೆ ತೋರಿಸದೆ, ಅವರ ಖುಷಿಗಾಗಿ ರಾತ್ರಿ ಹಗಲು ಎನ್ನದೇ ದುಡಿಯುತ್ತಾರೆ. ಹೀಗಾಗಿ ಈ ದಿನದಂದು ಪ್ರತಿಯೊಬ್ಬ ಮಕ್ಕಳು ಪೋಷಕರ ತ್ಯಾಗವನ್ನು ನೆನೆಯುವ ಅವರಿಗೆ ಗೌರವ ಸಲ್ಲಿಸಬಹುದು.
ರಾಷ್ಟ್ರೀಯ ಪೋಷಕರ ದಿನದ ಇತಿಹಾಸ:
ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಕಾಂಗ್ರೆಷನಲ್ ರೆಸಲ್ಯೂಷನ್ ಕಾನೂನಿಗೆ ಸಹಿ ಹಾಕಿ, ರಾಷ್ಟ್ರೀಯ ಪೋಷಕರ ದಿನದ ಆಚರಿಸಲು ಮುಂದಾದರು. ಈ ಮಸೂದೆಯನ್ನು ರಿಪಬ್ಲಿಕನ್ ಸೆನೆಟರ್ ಟ್ರೆಂಟ್ ಲಾಟ್ ಮಂಡಿಸಿದರು. ಕೊರಿಯಾದಲ್ಲಿ ಮೇ 8 ರಂದು ಪೋಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಅಮೆರಿಕ ಸೇರಿದಂತೆ ಹಲವು ದೇಶದಲ್ಲಿ ಜುಲೈ ತಿಂಗಳ ನಾಲ್ಕನೇ ಭಾನುವಾರದಂದೇ ರಾಷ್ಟ್ರೀಯ ಪೋಷಕರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಪೋಷಕರ ದಿನ ಮಹತ್ವ ಹಾಗೂ ಆಚರಣೆ:
ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ತಂದೆ ತಾಯಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವು ಮಹತ್ವಪೂರ್ಣವಾಗಿದೆ. ಈ ದಿನದಂದು ಸಂಘ-ಸಂಸ್ಥೆಗಳು, ಸಮುದಾಯುಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅದಲ್ಲದೇ, ಮಕ್ಕಳು ಕೂಡ ತಮ್ಮ ಪೋಷಕರಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ಪೋಷಕರ ದಿನಾಚರಣೆಯ ಶುಭಾಶಯ ತಿಳಿಸಲು ಸಂದೇಶಗಳಿವು:
- ಪೋಷಕರಾಗುವುದು ಎಂದರೆ ದೊಡ್ಡ ಜವಾಬ್ದಾರಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಎಲ್ಲಾ ಪೋಷಕರಿಗೆ ಪೋಷಕರ ದಿನದ ಶುಭಾಶಯಗಳು
- ನೀವಿಬ್ಬರು ದೀರ್ಘಕಾಲ, ಸಂತೋಷದಿಂದ ಕೂಡಿದ ನೆಮ್ಮದಿಯುತ ಜೀವನವನ್ನು ನಡೆಸುವಂತಾಗಲಿ, ಪೋಷಕರ ದಿನದ ಹಾರ್ಥಿಕ ಶುಭಾಶಯಗಳು.
- ನನ್ನ ಜೀವನವನ್ನು ಇಷ್ಟು ಸುಂದರವಾಗಿ ಮಾಡಿಕೊಟ್ಟ ಅಪ್ಪ ಅಮ್ಮ ನಿಮಗೆ ಪೋಷಕರ ದಿನದ ಶುಭಾಶಯಗಳು.
- ನಿಮ್ಮಿಬ್ಬರ ಬಗ್ಗೆ ನನಗೆ ಅತಿಯಾದ ಪ್ರೀತಿ ಮತ್ತು ಗೌರವ ತುಂಬಿದೆ. ಕಷ್ಟಗಳನ್ನು ನನಗೆ ತಿಳಿಯದ ಹಾಗೆಯೇ ನನ್ನನ್ನು ಬೆಳೆಸಿದ್ದೀರಿ. ನನ್ನ ಜೀವನವನ್ನು ಅದ್ಭುತಗೊಳಿಸಿದ್ದೀರಿ. ನಿಮಗೆ ನಾನು ಹೃದಯದಿಂದ ಧನ್ಯವಾದವನ್ನು ತಿಳಿಸುತ್ತೇನೆ. ಪೋಷಕರ ದಿನಾಚರಣೆಯ ಶುಭಾಶಯಗಳು
- ನಿಮ್ಮಂತಹ ತಂದೆ ತಾಯಿಯನ್ನು ಪಡೆದಿರುವುದು ನಾನು ಮಾಡಿದ ಪುಣ್ಯವಾಗಿದೆ. ಮುಂದಿನ ಜನ್ಮದಲ್ಲಿಯೂ ನಿಮ್ಮ ಮಗ / ಮಗಳಾಗಿ ಹುಟ್ಟುವೆನು. ಪೋಷಕರ ದಿನಾಚರಣೆಯ ಶುಭಾಶಯಗಳು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sat, 27 July 24