AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Voters Day 2026: ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸುವ ಜವಾಬ್ದಾರಿ ದೇಶದ ಪ್ರಜೆಗಳ ಮೇಲಿದೆ

ಮತದಾನವು ನಮ್ಮೆಲ್ಲರ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದ್ದು, ಈ ಮತದಾನದ ಮುಖಾಂತರ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿ, ಸಾಮಾಜಿಕ ಬದಲಾವಣೆ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಬಹುದು. ಈ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

National Voters Day 2026: ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸುವ ಜವಾಬ್ದಾರಿ ದೇಶದ ಪ್ರಜೆಗಳ ಮೇಲಿದೆ
ರಾಷ್ಟ್ರೀಯ ಮತದಾರರ ದಿನImage Credit source: Pinterest
ಮಾಲಾಶ್ರೀ ಅಂಚನ್​
|

Updated on:Jan 25, 2026 | 9:50 AM

Share

ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮತಪೆಟ್ಟಿಗೆಯಲ್ಲಿದೆ. ನಾಗರಿಕನು ಹಾಕುವಂತರ ಒಂದು ಮತದಿಂದ (Vote) ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಮತದಾನ ಸಂವಿಧಾನ ನಾಗರಿಕರಿಗೆ ನೀಡಿರುವ ಅತ್ಯಮೂಲ್ಯ ಹಕ್ಕಾಗಿದ್ದು, ಈ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮತದಾನ ಪ್ರಾಮುಖ್ಯತೆ ಹಾಗೂ ಮತದಾನವೆಂಬ ಅತ್ಯಮೂಲ್ಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಅಂದರೆ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನುಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಮತದಾರರ ದಿನದ ಇತಿಹಾಸವೇನು?

ಭಾರತದ ಎಲ್ಲಾ ನಾಗರಿಕರಿಗೆ ರಾಷ್ಟ್ರದ ಅಭಿವೃದ್ಧಿ, ಏಳಿಗೆಯ ಕಡೆಗೆ ಅವರ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ ಭಾರತ ಸರ್ಕಾರವು 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ 2011 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿವರ್ಷ ಜನವರಿ 25 ರಂದು ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ.

2026 ಮತದಾರರ ದಿನದ ಥೀಮ್ ಏನು?

ರಾಷ್ಟ್ರೀಯ ಮತದಾರರ ದಿನದ ಅಧಿಕೃತ ಧ್ಯೇಯವಾಕ್ಯವನ್ನು ಪ್ರತಿ ವರ್ಷ ಭಾರತೀಯ ಚುನಾವಣಾ ಆಯೋಗ ಘೋಷಿಸುತ್ತದೆ. 2026 ರ ಮತದಾರರ ದಿನದ ಧ್ಯೇಯವಾಕ್ಯವು ನನ್ನ ಭಾರತ, ನನ್ನ ಮತ (My India, My Vote).  ಮತದಾರರ ದಿನದ ಧ್ಯೇಯವಾಕ್ಯವು ಈ ಕೆಳಗಿನ ಮೇಲೆ ಕೇಂದ್ರೀಕರಿಸುತ್ತದೆ,

  • ಯುವ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
  • ಮಾಹಿತಿಯುಕ್ತ ಮತ್ತು ಜವಾಬ್ದಾರಿಯುತ ಮತದಾನ
  • ಅಂತರ್ಗತ ಪ್ರಜಾಪ್ರಭುತ್ವ
  • ನೈತಿಕ ಮತ್ತು ನ್ಯಾಯಯುತ ಚುನಾವಣೆಗಳು

ಇದನ್ನೂ ಓದಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸವುದರ ಹಿಂದಿನ ಉದ್ದೇಶವೇನು?

ಮತದಾರರ ದಿನದ  ಮಹತ್ವವೇನು?

  • ದೇಶದ ಉತ್ತಮ ಸರ್ಕಾರ ಮತ್ತು ಅಭಿವೃದ್ಧಿಗಾಗಿ ಮತದಾನ ಮಾಡುವುದು ನಾಗರಿಕರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಪ್ರಜೆಯ ಈ ಜವಾಬ್ದಾರಿಯನ್ನು ಶ್ಲಾಘಿಸಲು, ಚುನಾವಣೆಯ ಮಹತ್ವ ಮತ್ತು ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
  • ಮತದಾರರ ದಿನವನ್ನು ಆಚರಿಸುವ ಗುರಿಯು 18 ವರ್ಷ ವಯಸ್ಸಿನ ಎಲ್ಲರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅವರ ಮತದಾನದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು.
  • ಪ್ರತಿಯೊಂದು ಪ್ರಜ್ಞಾಪೂರ್ವಕ ಮತವು ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ ಎಂಬುದರ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡುವುದು ಈ ದಿನದ ಉದ್ದೇಶವಾಗಿದೆ.
  • ಮತದಾನದ ಪ್ರಕ್ರಿಯೆಯಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನೂ ಈ ದಿನ ಹೊಂದಿದೆ.
  • ಈ ದಿನ ಮತದಾನವು ಕೇವಲ ಹಕ್ಕಲ್ಲ, ಅದು ದೇಶದ ಕಡೆಗೆ ಜವಾಬ್ದಾರಿಯೂ ಆಗಿದೆ ಎಂಬುದನ್ನು ನಮಗೆಲ್ಲರಿಗೂ ನೆನಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 am, Sun, 25 January 26