AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನಿಂದ ಅಲರ್ಜಿ ಇರುವವರು ಮೊಸರನ್ನು ಕೂಡ ತಿನ್ನಬಾರದೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಹಾಲು ಸೇವಿಸುವುದರಿಂದ ಅನೇಕರಿಗೆ ಅಲರ್ಜಿ ಉಂಟಾಗುತ್ತದೆ. ಆದರೆ ಅಂತವರು ಮೊಸರು ಸೇವನೆ ಮಾಡುವುದನ್ನು ಕೂಡ ನಿಲ್ಲಿಸಬೇಕೇ ಎಂಬ ಗೊಂದಲ ಕಾಡುತ್ತದೆ. ವಾಸ್ತವವಾಗಿ, ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆಯಾದರೂ ಅದನ್ನು ತಯಾರಿಸುವ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಆದರೂ ಕೂಡ ಹಾಲಿನಿಂದ ಅಲರ್ಜಿ ಇರುವವರು ಮೊಸರು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಮೊಸರು ತಿನ್ನುವುದನ್ನು ಬಿಡಬೇಕೇ ಎಂಬ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲಿನಿಂದ ಅಲರ್ಜಿ ಇರುವವರು ಮೊಸರನ್ನು ಕೂಡ ತಿನ್ನಬಾರದೇ? ಇಲ್ಲಿದೆ ಸ್ಪಷ್ಟ ಮಾಹಿತಿ
Curd And Milk Allergy Expert InsightsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 24, 2026 | 4:26 PM

Share

ಇತ್ತೀಚಿನ ದಿನಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕರು ಹಾಲು (Milk) ಕುಡಿದ ನಂತರ ಹೊಟ್ಟೆ ನೋವು, ವಾಂತಿ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ, ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಇಂತಹ ಸಂದರ್ಭಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತಿದ್ದರೆ ಮೊಸರು ತಿನ್ನುವುದನ್ನು ಕೂಡ ನಿಲ್ಲಿಸಬೇಕೇ ಎಂಬ ಗೊಂದಲ ಕೆಲವರಲ್ಲಿರುತ್ತದೆ. ವಾಸ್ತವವಾಗಿ, ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆಯಾದರೂ ಅದನ್ನು ತಯಾರಿಸುವ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಆದರೂ ಕೂಡ ಹಾಲಿನಿಂದ ಅಲರ್ಜಿ ಇರುವವರು ಮೊಸರು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಮೊಸರು ತಿನ್ನುವುದನ್ನು ಬಿಡಬೇಕೇ ಎಂಬ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲಿನಿಂದ ಅಲರ್ಜಿ ಇರುವವರು ಮೊಸರು ತಿನ್ನುವುದನ್ನು ಬಿಡಬೇಕೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಈ ಪ್ರಶ್ನೆಗೆ ಉತ್ತರ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಏಕೆಂದರೆ ಹಾಲಿನ ಅಲರ್ಜಿ ಸಾಮಾನ್ಯವಾಗಿ ಹಾಲಿನಲ್ಲಿರುವ ಪ್ರೋಟೀನ್‌ಗಳಿಂದ ಉಂಟಾಗುತ್ತದೆ, ಆದರೆ ಮೊಸರು ಸೇವನೆ ಮಾಡುವುದರಿಂದ ಹಾಗಾಗಬೇಕು ಎಂಬುದಿಲ್ಲ. ಅದಕ್ಕಾಗಿಯೇ ಅನೇಕರಿಗೆ ಹಾಲು ಕುಡಿಯುವುದರಿಂದ ಸಮಸ್ಯೆಯಾಗುತ್ತದೆ, ಆದರೆ ಮೊಸರು ಸೇವನೆಯಿಂದ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಹಾಲಿನ ಪ್ರೋಟೀನ್‌ಗಳಿಂದ ತೀವ್ರ ಅಲರ್ಜಿ ಇರುವವರಿಗೆ, ಮೊಸರು ತಿನ್ನುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಕಂಡುಬರಬಹುದು. ಹೊಟ್ಟೆ ನೋವು, ತುರಿಕೆ, ಊತ ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಹಾಲಿಗೆ ಅಲರ್ಜಿ ಇರುವ ಎಲ್ಲರಿಗೂ ಮೊಸರು ಸುರಕ್ಷಿತ ಎಂದು ಹೇಳುವುದು ತಪ್ಪು. ಮೊಸರು ಸೇವಿಸುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ದೇಹದ ಪ್ರತಿಕ್ರಿಯೆಯನ್ನು ಗಮನಿಸುವ ಮೂಲಕ ಮಾತ್ರ ನಿರ್ಧರಿಸಬಹುದು.

ಇದನ್ನೂ ಓದಿ: ಹಾಲು ನಿಜವಾಗಿಯೂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಈ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು?

ಹಾಲಿನ ಅಲರ್ಜಿ ಇದ್ದರೆ, ನಿಮ್ಮ ಆಹಾರದಲ್ಲಿ ಮೊಸರನ್ನು ನೇರವಾಗಿ ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಮೊದಲ ಬಾರಿಗೆ, ಮೊಸರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆ ಬಳಿಕ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ. ಅಸ್ವಸ್ಥತೆ ಕಂಡುಬಂದರೆ, ತಕ್ಷಣ ಮೊಸರು ಸೇವನೆ ಮಾಡುವುದನ್ನು ನಿಲ್ಲಿಸಿ. ಸೋಯಾ ಅಥವಾ ತೆಂಗಿನಕಾಯಿಯಿಂದ ತಯಾರಿಸಿದ ಮೊಸರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಕೂಡ ಸೇವನೆ ಮಾಡಬಹುದು. ಹಾಲು ಅಥವಾ ಮೊಸರಿಗೆ ಸಂಬಂಧಿಸಿದ ಅಲರ್ಜಿಯನ್ನು ಲಘುವಾಗಿ ಪರಿಗಣಿಸಬಾರದು. ಹಾಗಾಗಿ ಸರಿಯಾದ ರೋಗನಿರ್ಣಯಕ್ಕೆ ಅಲರ್ಜಿ ಪರೀಕ್ಷೆ ಮತ್ತು ವೈದ್ಯರ ಸಲಹೆ ಅಗತ್ಯ. ವೈದ್ಯರು ನಿಮ್ಮ ಅಲರ್ಜಿಯ ಪ್ರಕಾರವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಸರಿಯಾದ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ