Nelson Mandela Day 2024: ನೆಲ್ಸನ್ ಮಂಡೇಲಾ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ದಕ್ಷಿಣ ಆಫ್ರಿಕಾದ ಗಾಂಧಿಯೆಂದೇ ನೆಲ್ಸನ್ ಮಂಡೇಲಾರವರು ಪ್ರಸಿದ್ಧರಾಗಿದ್ದರು. ವರ್ಣಭೇದ ನೀತಿ-ವಿರೋಧಿ ನಾಯಕ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 18 ರಂದು ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ವರ್ಣಬೇಧ ನೀತಿಯ ಬಗ್ಗೆ ಎಲ್ಲರೂ ಕೇಳಿರಬಹುದು. ಹೀಗೆಳುವಾಗ ಮೊದಲು ನೆನಪಾಗುವ ಹೆಸರೇ ನೆಲ್ಸನ್ ಮಂಡೇಲಾ. ವರ್ಣಭೇದ ನೀತಿಯಿಂದಾಗಿ ಬಿಳಿಯರಿಂದ ಕಪ್ಪು ವರ್ಣೀಯರು ನಿರಂತರವಾಗಿ ದಬ್ಬಾಳಿಕೆಗೆ ಒಳಗಾಗುತ್ತಿದ್ದರ ಬಗ್ಗೆ ಓದಿರಬಹುದು. ಈ ತಾರತಮ್ಯವನ್ನು ನಿರ್ಮೂಲನೆ ಮಾಡಲು ಶ್ರಮಿಸಿದವರಲ್ಲಿ ನೆಲ್ಸನ್ ಮಂಡೇಲಾರವರು ಕೂಡ ಒಬ್ಬರು. ಅವರ ಸಾಧನೆಗಳನ್ನು ಗುರುತಿಸಿ ಹಾಗೂ ಈ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸುವುದು ಅತ್ಯಗತ್ಯ. ಹೀಗಾಗಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಜನ್ಮದಿನವನ್ನು ನೆಲ್ಸನ್ ಮಂಡೇಲಾ ದಿನವೆಂದು ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುತ್ತದೆ.
ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನದ ಇತಿಹಾಸ
ನವೆಂಬರ್ 2009ರಲ್ಲಿ ವಿಶ್ವಸಂಸ್ಥೆಯು ಅಧಿಕೃತವಾಗಿ ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವನ್ನು ಆಚರಿಸಲು ನಿರ್ಧಾರ ಕೈಗೊಂಡಿತು. ಈ ದಿನದ ಮೊದಲ ಆಚರಣೆ 2010ರ ಜುಲೈ 18ರಂದು ನಡೆಯಿತು. ಅದಲ್ಲದೇ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 2014ರಲ್ಲಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ನೀಡುವ ಮೂಲಕ ಮಾನವೀಯತೆಯ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರನ್ನು ಗೌರವಿಸಲು ಮುಂದಾಯಿತು. ಐದು ವರ್ಷಗಳಿಗೊಮ್ಮೆ ನೀಡಲಾಗುವ ಪ್ರಶಸ್ತಿ ಇದಾಗಿದ್ದು, ಮಾನವೀಯತೆ ಸೇವೆಯಲ್ಲಿ ತೊಡಗಿಕೊಂಡವರಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಹುಡುಗನು ಈ ರೀತಿ ನಡೆದುಕೊಂಡ್ರೆ ನಿಮಗೆ ಕೈ ಕೊಡೋದು ಪಕ್ಕಾ
ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನದ ಮಹತ್ವ
ಮಂಡೇಲಾ ದಿನವು ಜನಾಂಗೀಯ ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಸರಿಸುಮಾರು ಆರವತ್ತೇಳು ವರ್ಷಗಳ ಸುದೀರ್ಘ ಹೋರಾಟ ನಡೆಸಿದ ಕೀರ್ತಿ ನೆಲ್ಸನ್ ಮಂಡೇಲಾರವರಿಗೆ ಸಲ್ಲುತ್ತದೆ. ಈ ದಿನದಂದು ಜಗತ್ತಿನಲ್ಲಿರುವ ಎಲ್ಲರಿಗೂ ಸಮಾನ ಅವಕಾಶಗಳೊಂದಿಗೆ ಶಾಂತಿಯುತ ಜೀವನ ನಡೆಸಲು ಅವಕಾಶ ಮಾಡಿಕೊಡುವುದಾಗಿದೆ. ಹೀಗಾಗಿ ಮಂಡೇಲಾ ಅವರ ಸಿದ್ಧಾಂತ ಹಾಗೂ ದೃಷ್ಟಿಕೋನವನ್ನು ಅನುಸರಿಸುವ ಕಪ್ಪು ವರ್ಣೀಯ ಸಮುದಾಯಗಳಲ್ಲಿ ಬದಲಾವಣೆ ತರಲು ಪ್ರೇರೇಪಿಸುವುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ