Parenting Tips : ಮಕ್ಕಳ ಮುಂದೆ ಯಾವತ್ತೂ ಹೀಗೆಲ್ಲ ಮಾತನಾಡಬೇಡಿ, ಕೆಟ್ಟ ಪರಿಣಾಮ ಎದುರಿಸಬೇಕಾದಿತು

ಮನೆಯೇ ಮೊದಲ ಪಾಠ ಶಾಲೆ. ಹೀಗಾಗಿ ಏನೇ ಒಳ್ಳೆಯದನ್ನು ಹಾಗೂ ಕೆಟ್ಟದನ್ನು ಕಲಿತರೂ ಮನೆಯಿಂದಲೇ. ಈ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಾದ ಕೆಲಸವಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚು. ಕೆಲವೊಮ್ಮೆ ಪೋಷಕರು ಹೇಳುವ ಈ ಮಾತುಗಳೇ ಮಕ್ಕಳ ವ್ಯಕ್ತಿತ್ವ ಹಾಗೂ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ತಂದೆ ತಾಯಿಯರು ಮಕ್ಕಳ ಮುಂದೆ ಈ ರೀತಿಯಾಗಿ ಮಾತನಾಡುವುದನ್ನು ಆದಷ್ಟು ತಪ್ಪಿಸಿದರೆ ಒಳ್ಳೆಯದು.

Parenting Tips : ಮಕ್ಕಳ ಮುಂದೆ ಯಾವತ್ತೂ ಹೀಗೆಲ್ಲ ಮಾತನಾಡಬೇಡಿ, ಕೆಟ್ಟ ಪರಿಣಾಮ ಎದುರಿಸಬೇಕಾದಿತು
ಸಾಂದರ್ಭಿಕ ಚಿತ್ರ
Edited By:

Updated on: Jun 27, 2024 | 2:48 PM

ಮಕ್ಕಳ ಬೆಳೆಸುವುದು ಒಂದು ಕಲೆ. ತಂದೆಗಿಂತ ತಾಯಿಯಾದವಳು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ಆದರೆ ಮಕ್ಕಳಿಗೆ ಬೇಕು ಬೇಡಗಳನ್ನು ತಿಳಿದುಕೊಳ್ಳುವ ಪೋಷಕರು ಮಗುವಿನ ಬೆಳವಣಿಗೆಯ ವೇಳೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಮಕ್ಕಳ ಮುಂದೆ ಈ ರೀತಿಯ ವರ್ತನೆಯನ್ನು ಪೋಷಕರು ತೋರಿಸುತ್ತಾರೆ. ಇದರಿಂದ ಮಗುವಿನ ವ್ಯಕ್ತಿತ್ವವು ಹಾಳಾಗುವುದಲ್ಲದೆ, ಮನಸ್ಸಿಗೂ ನೋವನ್ನು ಉಂಟು ಮಾಡುತ್ತದೆ.

* ನೀನು ‘ಹಾಳಾಗಿದ್ದೀಯ’ ಎಂದು ಹೇಳುವುದನ್ನು ನಿಲ್ಲಿಸಿ : ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವುದನ್ನು ಹಾಳಾಗುತ್ತಾರೆ. ಮಕ್ಕಳು ಅದು ಬೇಕು ಇದು ಬೇಕು ಎಂದು ಹಠ ಮಾಡಿದರೆ ಸಾಕು, ಹಿಂದೆ ಮುಂದೆ ನೋಡದೇನೆ ಎಲ್ಲವನ್ನು ತಂದುಕೊಡುತ್ತಾರೆ. ಹೀಗೆ ಅತಿಯಾಗಿ ಮುದ್ದು ಮಾಡಿದರೆ ಸಹಜವಾಗಿಯೇ ಮಕ್ಕಳು ಹಾಳಾಗುತ್ತಾರೆ. ಈ ರೀತಿಯಾದಾಗ ಮಕ್ಕಳ ಮುಂದೆಯೇ ನೀನು ಹಾಳಾಗಿದ್ದಿಯಾ ಎಂದು ಹೇಳಲೇ ಬೇಡಿ. ಇದು ಮಕ್ಕಳಿಗೆ ನೋವನ್ನು ಉಂಟು ಮಾಡುತ್ತದೆ.

* ಬುದ್ದಿವಂತ ಎಂದು ಅಟ್ಟಕೇರಿಸಬೇಡಿ : ಕೆಲವು ಮಕ್ಕಳು ಕಲಿಕೆಯಲ್ಲಿ ಮುಂದೆ ಇರುತತ್ತಾರೆ. ಒಂದೂ ವೇಳೆ ನಿಮ್ಮ ಮಗು ಕೂಡ ಹೇಳಿದ್ದನ್ನು ಬೇಗನೇ ಅರ್ಥ ಮಾಡಿಕೊಂಡು ಕಲಿತುಕೊಂಡರೆ ಬುದ್ದಿವಂತ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಮಗುವಿನ ಮುಂದೆ ನೀವು ಸ್ಮಾರ್ಟ್ ಇದ್ದಿಯಾ ಎಂದು ಹೇಳುತ್ತಲೇ ಇರಬೇಡಿ. ಮಕ್ಕಳು ಬೆಳೆಯುತ್ತ ಹೋದಂತೆಲ್ಲಾ ನಾನು ಬುದ್ಧಿವಂತ ಎನ್ನುವುದು ತಲೆಯಲ್ಲಿ ಕುಳಿತುಕೊಳ್ಳಬಹುದು. ನನಗೆ ಎಲ್ಲಾ ಗೊತ್ತಿದೆ ಎಲ್ಲಾ ಕಲಿತುಕೊಳ್ಳುತ್ತೇನೆ ಎನ್ನುವ ಅಹಂ ಬೆಳೆಯಬಹುದು. ಹೀಗಾಗಿ ಆದಷ್ಟು ಮಕ್ಕಳ ಮುಂದೆ ಈ ಮಾತನ್ನು ಹೇಳುವುದನ್ನು ತಪ್ಪಿಸುವುದು ಒಳ್ಳೆಯದು.

* ರಾಜಾ ರಾಣಿ ಎಂದು ಅತಿಯಾಗಿ ಮುದ್ದಿಸಬೇಡಿ: ಪೋಷಕರಿಗೆ ತಮ್ಮ ಮಗುವೇ ಸರ್ವಸ್ವವಾಗಿರುತ್ತದೆ. ಹೀಗಾಗಿ ಮಕ್ಕಳಿಗೆ ಪ್ರೀತಿಯಿಂದ ಹೆಸರಿಟ್ಟು ಕರೆಯುತ್ತಾರೆ. ಕೆಲವರು ನೀನು ನನ್ನ ರಾಜಾ ರಾಣಿ ಎಂದು ಮಕ್ಕಳನ್ನು ಮುದ್ದಿಸುತ್ತಾರೆ. ಹೀಗಾಗಿ ಮಗುವಿನಲ್ಲಿ ನಾನೇ ರಾಜಾ ಅಥವಾ ರಾಣಿ ಎನ್ನುವ ಭಾವನೆಯು ಮೂಡಿ ತನ್ನ ಸಹಪಾಠಿಗಳನ್ನು ಕೆಳ ಮಟ್ಟದಲ್ಲಿ ಮಾಡುವ ಸಾಧ್ಯತೆಯೇ ಹೆಚ್ಚು. ಈ ಮಾತಿನಿಂದ ನನಗೆ ಯಾವುದರಲ್ಲಿ ಕೊರತೆ ಬರುವುದಿಲ್ಲ ಎಂದು ಕೊಳ್ಳುತ್ತದೆ. ಹೀಗಾಗಿ ನಿಮ್ಮ ಪ್ರೀತಿಯ ಮಾತುಗಳು ಮಿತವಾಗಿರಲಿ.

ಇದನ್ನೂ ಓದಿ: ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸಿನಿಮಾಗಳನ್ನು ನೋಡಲೇಬೇಕು

* ಮೂರ್ಖ ಎಂದು ಕರೆಯಬೇಡಿ : ಕೆಲವು ಮಕ್ಕಳು ಓದಿನಲ್ಲಿ ಹಿಂದೆ ಇರಬಹುದು. ಎಷ್ಟೇ ಹೇಳಿಕೊಟ್ಟರೂ ತಲೆಗೆ ಹೋಗದೇ ಇರಬಹುದು. ಹೀಗಾದಾಗ ಮಗುವಿಗೆ ಪದೇ ಪದೇ ನೀನು ಮೂರ್ಖ, ದಡ್ಡ ಎಂದು ಹೇಳುತ್ತಲೇ ಇರಬೇಡಿ. ನಿಮ್ಮ ಈ ಮಾತು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ತನ್ನನ್ನು ತಾನೇ ಮೂರ್ಖ ಎಂದು ಕೊಂಡು ಓದುವುದಕ್ಕೆ ಮನಸ್ಸು ಮಾಡುವುದಿಲ್ಲ. ಇಲ್ಲದಿದ್ದರೆ ಈ ಮಾತಿನಿಂದಲೇ ನಿಮ್ಮ ಮಗುವೂ ಓದಿನಲ್ಲಿ ಹಿಂದೆ ಉಳಿಯಲು ಕಾರಣವಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ