ಹೊಸ ವರ್ಷ(New Year)ಸಮೀಪಿಸುತ್ತಿದೆ ಮತ್ತು ಇದು ಕೆಲವು ರೆಸಲ್ಯೂಷನ್‌ಗಳನ್ನು ಮಾಡುವ ಸಮಯ. ಕೆಲವೊಮ್ಮೆ ಈ ರೆಸಲ್ಯೂಷನ್‌ಗಳು ನಿಮ್ಮನ್ನು ನಿರಾಶೆಗೊಳಿಸಬಹುದು. ಆದ್ದರಿಂದ ನೀವು ಎಂದಿಗೂ ಮಾಡಬಾರದ ಹೊಸ ವರ್ಷದ ರೆಸಲ್ಯೂಷನ್‌ಗಳ ಪಟ್ಟಿ ಇಲ್ಲಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಒಟ್ಟಾಗಿ ಸೇರಲು ಯೋಜನೆಗಳನ್ನು ಮಾಡುವುದರ ಜೊತೆಗೆ ಮುಂಬರುವ ವರ್ಷದಲ್ಲಿ ಏನನ್ನಾದರೂ ಸಾಧಿಸಲು ರೆಸಲ್ಯೂಷನ್‌ಗಳನ್ನು ಮಾಡುತ್ತೀರಿ. ಸಾಧಿಸಲು ರೆಸಲ್ಯೂಷನ್‌ಗಳನ್ನು ಮಾಡುವುದು ಅಥವಾ ಗುರಿಗಳನ್ನು ಮಾಡುವುದು ನಿಮಗೆ ಹೊಸ ವರ್ಷವನ್ನು ಎದುರು ನೋಡಲು ಸಹಾಯ ಮಾಡುತ್ತದೆ.
ಅವಾಸ್ತವಿಕ ಅಥವಾ ವಿಷಕಾರಿ ಯೋಜನೆಗಳನ್ನು ಆರಿಸುವುದರಿಂದ ನಿಮ್ಮ ಮಾನಸಿಕ ಮತ್ತು ಭೌತಿಕ ಜಾಗಗಳನ್ನು ಹಾನಿಗೊಳಿಸಬಹುದು. ಆದ್ದರಿಂದ ನಿಮ್ಮ ಹೊಸ ವರ್ಷದ ಗುರಿಗಳಿಗೆ ಬದ್ಧರಾಗುವ ಮೊದಲು ಮತ್ತು ನಿರಾಶೆಯನ್ನು ಅನುಭವಿಸುವ ಮೊದಲು ತ್ವರಿತ ಲೆಕ್ಕಪರಿಶೋಧನೆ ಮಾಡುವುದು ಯಾವಾಗಲೂ ಉತ್ತಮ ಅಭ್ಯಾಸವಾಗಿದೆ. ಆದ್ದರಿಂದ ನೀವು ಎಂದಿಗೂ ಮಾಡಬಾರದ 5 ಹೊಸ ವರ್ಷದ ರೆಸಲ್ಯೂಷನ್‌ಗಳು ಇಲ್ಲಿವೆ.
ಬೇರೆಯವರು ನಿಮ್ಮನ್ನು ಇಷ್ಟ ಪಡಲು ನೀವು ಯಾವತ್ತಿಗೂ ನಿಮ್ಮತನವನ್ನು ಬದಲಾಯಿಸಲು ಪ್ರಯತ್ನಿಸಬೇಡಿ. ಯಾವಾತ್ತಿಗೂ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಲು ಒತ್ತಾಯಿಸುವ ರೆಸಲ್ಯೂಷನ್‌ಗಳನ್ನು ಮಾಡಬೇಡಿ. ಇದು ಬೇರೆಯವರಿಗೆ ಖುಷಿ ನೀಡಿದರೂ ಕೂಡ ನೀವು ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತೀರಿ.
ಸಾಕಷ್ಟು ಜನರಿಗೆ ನಾನು ಸ್ಲೀಮ್ ಆಗಬೇಕು ಮತ್ತು ದೇಹದ ಬಗ್ಗೆ ಅಸಮಾಧಾನವನ್ನು ಹೊಂದಿರುತ್ತಾರೆ. ಸ್ಲೀಮ್ ಆಗಬೇಕೆಂದು ರೆಸಲ್ಯೂಷನ್ ತೆಗೆದುಕೊಂಡು ಆಹಾರವನ್ನು ಸ್ಕಿಪ್ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಆದಷ್ಟು ಆರೋಗ್ಯಕರವಾಗಿ ತೂಕ ಇಳಿಸಲು ಪ್ರಯತ್ನಿಸಿ. ನೀವು ಆನಂದಿಸುವ ಕ್ರೀಡೆ, ನೃತ್ಯ ಶೈಲಿಯಲ್ಲಿ ತೊಡಗಿಸಿಕೊಳ್ಳಿ. ಸಮಾಜವು ನಿಮ್ಮನ್ನು ಸ್ವೀಕಾರಾರ್ಹವೆಂದು ನಂಬುವಂತೆ ಬಲವಂತಪಡಿಸಿದ ದೇಹ ಪ್ರಕಾರವನ್ನು ಪಡೆಯುವಲ್ಲಿ ಆರೋಗ್ಯಕರವಾಗಿರುವುದನ್ನು ಆರಿಸಿ. ಸಮಾಜವು ನಿಮ್ಮನ್ನು ಒಪ್ಪಿಕೊಳ್ಳಬೇಕೆಂದು ಬಯಸುತ್ತಿರುವ ದೇಹ ಪ್ರಕಾರದಲ್ಲಿ ನಿಮ್ಮನ್ನು ಹೊಂದಿಸಿಕೊಳ್ಳುವುದಕ್ಕಿಂತ ನಿಮ್ಮ ಮಾನಸಿಕ ಆರೋಗ್ಯವು ಹೆಚ್ಚು ಮುಖ್ಯವಾಗಿದೆ.
ಡಯೆಟ್ ಕ್ರಮಕ್ಕೆ ಹೋಗಲು ನಿಮ್ಮನ್ನು ಒತ್ತಾಯಿಸುವುದು ತೂಕವನ್ನು ಕಳೆದುಕೊಳ್ಳಲು ನಿಮ್ಮನ್ನು ಮನವೊಲಿಸುವಷ್ಟು ಕೆಟ್ಟದಾಗಿದೆ. ಇದು ನಿಮ್ಮ ಬಗ್ಗೆ ಕೆಟ್ಟ ಭಾವನೆಯನ್ನು ಉಂಟು ಮಾಡುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿರಾಶೆಗೆ ಕಾರಣವಾಗುತ್ತದೆ. ಬದಲಾಗಿ ಆರೋಗ್ಯಕರವಾಗಿರಲು ಗುರಿಯನ್ನು ಇಟ್ಟುಕೊಳ್ಳಿ, ನೀವು ಆನಂದಿಸುವ ವ್ಯಾಯಾಮಗಳನ್ನು ಮಾಡಿ. ನಿಮಗೆ ಬೇಕಾದುದನ್ನು ಮತ್ತು ನೀವು ಇಷ್ಟ ಪಡುವುದನ್ನು ತಿನ್ನಿರಿ.
ಇದನ್ನೂ ಓದಿ: ಈ ಹೊಸವರ್ಷಕ್ಕೆ ನಿಮ್ಮವರಿಗೆ ಗಿಫ್ಟ್ ಕೊಡಲು ಐಡಿಯಾಗಳು ಇಲ್ಲಿವೆ
ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಪಡೆಯುವುದು ಅತ್ಯಂತ ಸುಂದರವಾದ ಅನುಭವವಾಗಿದೆ. ಆ ಪ್ರಕ್ರಿಯೆಯನ್ನು ಒತ್ತಾಯದಿಂದ ಪಡೆದುಕೊಳ್ಳಬೇಡಿ. ನೀವು ಇನ್ನೊಬ್ಬರೊಂದಿಗೆ ಆರೋಗ್ಯಕರ ಅನ್ಯೋನ್ಯ ಸಂಬಂಧವನ್ನು ಹೊಂದಲು ಪ್ರಯತ್ನಿಸಿ. ನಿಮ್ಮ ಅಗತ್ಯವನ್ನು ತಿಳಿದುಕೊಳ್ಳಲು ನಿರ್ಧರಿಸಿ, ಹೆಚ್ಚು ಜನರನ್ನು ಭೇಟಿ ಮಾಡಿ, ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸಿ ಮತ್ತು ನಂತರ ಒಂದು ಹೆಜ್ಜೆ ಮುಂದಿಡಿ.
ಏನನ್ನಾದರೂ ತ್ಯಜಿಸಲು ನಿಮ್ಮನ್ನು ಒತ್ತಾಯಿಸುವ ಯಾವುದೇ ನಿರ್ಣಯಗಳು ಅಂತಿಮವಾಗಿ ನಿರಾಶೆಗೆ ಕಾರಣವಾಗುತ್ತದೆ. ಉದಾಹರಣೆಗೆ ನೀವು ಆಹಾರಕ್ರಮದಲ್ಲಿ ಹೇಳುವುದಾದರೆ ಯಾವುದೇ ಒಂದು ಆಹಾರವನ್ನು ತ್ಯಜಿಸಲು ಪ್ರಯತ್ನಿಸಿದರೆ ಅದು ನೀವು ಅರೆ ಮನಸ್ಸಿನಿಂದ ಮಾಡಿದರೆ ಅದು ನಿಮಗೆ ಮಾನಸಿಕವಾಗಿ ನೋವನ್ನು ನೀಡುತ್ತದೆ. ಆದ್ದರಿಂದ ಯಾವುದೇ ರೆಸಲ್ಯೂಷನ್‌ಗಳನ್ನು ಅರೆ ಮನಸ್ಸಿನಿಂದ ತೆಗೆದುಕೊಳ್ಳಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:56 pm, Fri, 30 December 22