
ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ನಾವು ಹಲವಾರು ರೀತಿಯ ಪಯತ್ನಗಳನ್ನು ಮಾಡುತ್ತೇವೆ. ಆದರೆ ಈಗಿನ ಕ್ರೀಮ್ (Cream) ಗಳು ನಿಮಗೆ ನೀವು ಅಂದುಕೊಂಡಂತಹ ಫಲಿತಾಂಶ ನೀಡುವುದಿಲ್ಲ ಜೊತೆಗೆ ಇವು ನಿಮ್ಮ ಚರ್ಮಕ್ಕೂ ಒಳ್ಳೆಯದಲ್ಲ. ಆದರೆ ಚರ್ಮದ (Skin) ಕಾಂತಿ ಹೆಚ್ಚಿಸಲು ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸುವ ಸ್ಕ್ರಬ್ (Scrub) ಗಳನ್ನು ಬಳಕೆ ಮಾಡಬಹುದು. ಅದರಲ್ಲಿಯೂ ಭಾರತೀಯರು ಸಾಂಪ್ರದಾಯಿಕವಾಗಿ ಚರ್ಮದ ಆರೈಕೆ ಮಾಡುವುದಕ್ಕಾಗಿ, ಶತಮಾನಗಳಿಂದಲೂ ಬಳಸುತ್ತಿರುವ ಉಬ್ಟಾನ್ ( ಸ್ಕ್ರಬ್) ಬಳಸಬಹುದು, ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಏಕೆಂದರೆ ಇವುಗಳನ್ನು ವಿವಿಧ ಗಿಡಮೂಲಿಕೆಗಳು, ಮಸಾಲೆ (spice) ಗಳು ಮತ್ತು ನೈಸರ್ಗಿಕ ಪದಾರ್ಥ (Natural product) ಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹಾಗಾದರೆ ಇದರ ಬಳಕೆಯಿಂದ ಸಿಗುವ ಪ್ರಯೋಜನಗಳೇನು? ಚರ್ಮದ ಕಾಂತಿ ಹೆಚ್ಚಿಸಲು ಇದು ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.
ಕಾಂತಿಯುತ ಮೈ ಬಣ್ಣ ಪಡೆಯುವುದಕ್ಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾನಾ ರೀತಿಯ ಕ್ರೀಮ್ ಬಳಸಿ ಚರ್ಮವನ್ನು ಹಾಳು ಮಾಡಿಕೊಳ್ಳುವ ಬದಲು ಉಬ್ಟಾನ್ ಬಳಸಬಹುದು. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಹೊಳೆಯುವ ಚರ್ಮ ಪಡೆಯಲು ಇದು ಉತ್ತಮ ಪರಿಹಾರವಾಗಿದೆ. ಹಾಗಾದರೆ ಉಬ್ಟಾನ್ ಬಳಸುವುದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ