ಯಾವುದೇ ನಟಿ ತನ್ನ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುತ್ತಾರೆ. ನಟಿಯರು ಧರಿಸುವ ಬಟ್ಟೆಗಳು ಕೂಡ ಅವರ ಅಭಿಮಾನಿಗಳಿಗೆ ಪ್ರೇರಣೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಚರ್ಮವನ್ನು ಹೋಲುವ ಪ್ರಿಂಟೆಡ್ ಬಟ್ಟೆಗಳು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ಜನಪ್ರಿಯ ನಟಿಯರು ಧರಿಸಿರುವ ಈ ಪ್ರಿಂಟೆಡ್ ಬಟ್ಟೆಗಳ ಕುರಿತು ಮಾಹಿತಿ ಇಲ್ಲಿದೆ.
ನಟಿ ಶಿಲ್ಪಾ ಶೆಟ್ಟಿ ಚೀತಾ ಚರ್ಮವನ್ನು ಹೋಲುವ ಬಟ್ಟೆಯನ್ನು ಧರಿಸಿ ಸಖತ್ತ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಫಿಟ್ಸೆಸ್ ಬಗ್ಗೆ ಅತಿಯಾದ ಕಾಳಜಿವಹಿಸುವ ಶಿಲ್ಪಾ ಶೆಟ್ಟಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ನೋರಾ ಫತೇಹಿ ತಮ್ಮ ನೃತ್ಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ನಟಿ. ಇತ್ತೀಚೆಗಷ್ಟೇ ಚಿರತೆಯ ಚರ್ಮವನ್ನು ಹೋಲುವ ಪ್ರಿಂಟೆಡ್ ಬಟ್ಟೆಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುಕೊಂಡಿದ್ದಾರೆ.
ಕೃತಿ ಸೋನನ್ ಕೂಡ ಪ್ರಾಣಿಗಳ ಚರ್ಮವನ್ನು ಹೋಲುವ ಪ್ರಿಂಟೆಡ್ ಬಟ್ಟೆಯಲ್ಲಿ ಸಖತ್ತಾಗಿ ಫೋಟೋ ಶೂಟಿಂಗ್ ಮಾಡಿಸಿಕೊಂಡಿದ್ದಾರೆ. ನಟಿಯರಿಂದಲೇ ಇಂತಹ ಬಟ್ಟೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ದೀಪಿಕಾ ಪಡುಕೋಣೆ ಪ್ರತಿಯೊಂದು ಈವೆಂಟ್ ಗಳಲ್ಲಿಯೂ ತನ್ನ ಕ್ರಿಯೇಟಿವ್ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ. ಇದೀಗಾ ಕಪ್ಪು ಬಿಳಿಪಿನ ಬಣ್ಣದ ಪ್ರಾಣಿಗಳ ಚರ್ಮವನ್ನು ಹೋಲುವ ಬಟ್ಟೆಯಲ್ಲಿ ಸಖತ್ತ್ ಲುಕ್ ನೀಡಿದ್ದಾರೆ.