ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದೇ ಈ ಕೂದಲು. ಆದರೆ ಈ ಬೇಸಿಗೆಯಲ್ಲಿ ಕೂದಲನ್ನು ಆರೈಕೆ ಮಾಡುವುದು ಕಷ್ಟಕರ. ಈ ಸಮಯದಲ್ಲಿ ಹಲವು ರೀತಿ ಕೂದಲಿನ ಸಮಸ್ಯೆಗಳು ಉಂಟಾಗುತ್ತದೆ. ಬಹುತೇಕರಲ್ಲಿ ಒಣ ಹಾಗೂ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯು ಕಂಡು ಬರುತ್ತದೆ. ಇದರಿಂದ ಕೂದಲು ಉದುರುವುದಕ್ಕೂರುವುದಕ್ಕೂ ಆರಂಭವಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಕ್ರಮೇಣವಾಗಿ ಕೂದಲಿನ ಸೌಂದರ್ಯವೇ ಹಾಳಾಗುತ್ತದೆ.
- ಬೇಸಿಗೆಯಲ್ಲಿ ನಿಮ್ಮ ಕೂದಲು ತುಂಬಾ ಎಣ್ಣೆಯುಕ್ತವಾಗಿದ್ದರೆ ಸ್ನಾನ ಮಾಡುವಾಗ ಶಾಂಪೂ ಬಳಸುವುದು ಒಳ್ಳೆಯ ಅಭ್ಯಾಸ.
- ವಾರಕ್ಕೆ ಎರಡು ಬಾರಿಯಾದರೂ ಮೊಸರಿನ ಹೇರ್ ಪ್ಯಾಕ್ ಬಳಸುತ್ತಿದ್ದರೆ ಒಳ್ಳೆಯದು. ಒಂದು ಕಪ್ ಮೊಸರು, ಒಂದು ಚಮಚದಷ್ಟು ನಿಂಬೆ ರಸ, ಅಡುಗೆ ಸೋಡಾ, ಒಂದು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಈ ಸಮಸ್ಯೆಯು ಪರಿಹಾರವಾಗುತ್ತದೆ.
- ಬೇಸಿಗೆಯಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಲು ನಿಂಬೆ ಮತ್ತು ಕಿತ್ತಳೆ ಸಿಪ್ಪೆಯನ್ನು ಬಳಸುವುದು ಪರಿಣಾಮಕಾರಿಯಾಗಿದೆ. ಸಿಪ್ಪೆಗಳನ್ನು ಒಣಗಿಸಿ ಮಾಡಿದ ಪುಡಿಗೆ ಸ್ವಲ್ಪ ನೀರು ಬೆರೆಸಿ ಕೂದಲಿಗೆ ಹಚ್ಚಿ ತೊಳೆದರೆ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.
- ಲೋಳೆಸರಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕೂದಲು ಮತ್ತು ನೆತ್ತಿಗೆ ಹಚ್ಚಿ ಹತ್ತು ಹದಿನೈದು ನಿಮಿಷಗಳ ಕಾಲ ತೊಳೆದರೆ ಎಣ್ಣೆಯುಕ್ತ ಕೂದಲು ನಿವಾರಣೆಯಾಗುತ್ತದೆ.
- ಜೇನುತುಪ್ಪಕ್ಕೆ ಒಂದೆರಡು ಹನಿ ನೀರು ಬೆರೆಸಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಶೀಘ್ರ ಪರಿಹಾರ ದೊರೆಯುತ್ತದೆ.
ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ