Kavaledurga Fort : ಪಶ್ಚಿಮ ಘಟ್ಟಗಳ ನಡುವೆ ಕಣ್ಮನ ಸೆಳೆಯುವ ‘ಕವಲೆದುರ್ಗ ಕೋಟೆ’
ಕರ್ನಾಟಕದಲ್ಲಿ ಹಚ್ಚ ಹಸಿರಿನ ಪ್ರಕೃತಿಗೆ ಮೈಯೊಡ್ಡಿ ನಿಂತ ಹಲವಾರು ಪ್ರವಾಸಿತಾಣಗಳಿವೆ. ಈ ತಾಣಗಳು ಸಹಜವಾಗಿ ಪಕೃತಿ ಪ್ರೇಮಿಗಳ ಮನಸ್ಸನ್ನು ಸೆಳೆಯದೇ ಇರದು. ಅಂತಹ ಸ್ಥಳಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಆಕರ್ಷಣೀಯ ತಾಣಗಳಲ್ಲಿ ಕವಲೆದುರ್ಗ ಕೋಟೆ ಕೂಡ ಒಂದು. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಈ ತಾಣವು ಚಾರಣ ಪ್ರಿಯರಗೆ ಹೇಳಿ ಮಾಡಿಸಿದ ಪ್ರವಾಸಿತಾಣವಾಗಿದೆ.