AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kavaledurga Fort : ಪಶ್ಚಿಮ ಘಟ್ಟಗಳ ನಡುವೆ ಕಣ್ಮನ ಸೆಳೆಯುವ ‘ಕವಲೆದುರ್ಗ ಕೋಟೆ’

ಕರ್ನಾಟಕದಲ್ಲಿ ಹಚ್ಚ ಹಸಿರಿನ ಪ್ರಕೃತಿಗೆ ಮೈಯೊಡ್ಡಿ ನಿಂತ ಹಲವಾರು ಪ್ರವಾಸಿತಾಣಗಳಿವೆ. ಈ ತಾಣಗಳು ಸಹಜವಾಗಿ ಪಕೃತಿ ಪ್ರೇಮಿಗಳ ಮನಸ್ಸನ್ನು ಸೆಳೆಯದೇ ಇರದು. ಅಂತಹ ಸ್ಥಳಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಆಕರ್ಷಣೀಯ ತಾಣಗಳಲ್ಲಿ ಕವಲೆದುರ್ಗ ಕೋಟೆ ಕೂಡ ಒಂದು. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಈ ತಾಣವು ಚಾರಣ ಪ್ರಿಯರಗೆ ಹೇಳಿ ಮಾಡಿಸಿದ ಪ್ರವಾಸಿತಾಣವಾಗಿದೆ.

ಸಾಯಿನಂದಾ
| Edited By: |

Updated on:May 03, 2024 | 11:50 AM

Share
ಕವಲೆದುರ್ಗ ಕೋಟೆ ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗವು  ಹಚ್ಚ ಹಸಿರಿನ ಪ್ರಕೃತಿಯ ನಡುವೆ ಮೈಯೊಡ್ಡಿ ಮಲಗಿದಂತಿದೆ. ತೀರ್ಥಹಳ್ಳಿ ತಾಲೂಕಿನಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲೇ ಈ ಆಕರ್ಷಕ ಪ್ರವಾಸಿ ತಾಣವಿದೆ. ಒಂಬತ್ತನೇ ಶತಮಾನದ ಐತಿಹಾಸಿಕ ಕೋಟೆಯಾಗಿದ್ದು, ಶತಮಾನಗಳ ಹಿಂಡೆ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ  ಪಾಳುಬಿದ್ದ ಕೋಟೆಯಾಗಿದೆ. ಆದರೆ ಇವತ್ತಿಗೂ ಇಲ್ಲಿ ನಾನಾ ರೀತಿಯ ಆಕರ್ಷಣೆಯನ್ನು ಕಾಣಬಹುದು.

1 / 6
16 ನೇ ಶತಮಾನದಲ್ಲಿ ಕೆಳದಿ ನಾಯಕರ  ಆಳ್ವಿಕೆಗೆ ಒಳಪಟ್ಟಿದ್ದ  ಈ ಕೋಟೆಯು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.

2 / 6
ಈ ಕವಲೆದುರ್ಗಯು ಮೂರು ಸುತ್ತುಗಳ ಕಲ್ಲಿನ ಗೋಡೆಗಳನ್ನು ಹೊಂದಿದೆ. ಅರಮನೆ, ಸ್ನಾನದ  ತೊಟ್ಟಿ, ಕಾವಲು ಕೊಠಡಿಗಳು ಮತ್ತು ಶಸ್ತ್ರಾಸ್ತ್ರ ಗೋದಾಮಿನ ಕೆಲವು ಅವಶೇಷಗಳನ್ನು ಕಾಣಬಹುದು.

3 / 6
ಕೋಟೆಯ ಮೇಲೆ ಸಿಹಿನೀರಿನ ಕೊಳವಿದ್ದು, ಬೆಟ್ಟದ ಮೇಲೆ ಶ್ರೀಕಾಂಥೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವು ಪ್ರವಾಸಿಗರ ಗಮನ ಸೆಳೆಯುತ್ತವೆ.

4 / 6
ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಕವಲೆದುರ್ಗ ಕೋಟೆಯ  ಮೇಲ್ಭಾಗದವರೆಗೆ ನಡೆದುಕೊಂಡು ಹೋಗಬಹುದು. ಚಾರಣ ಪ್ರಿಯರಿಗೆ ಕವಲೆದುರ್ಗವನ್ನು ಅತ್ಯುತ್ತಮ ಸ್ಥಳವೆನ್ನಬಹುದು.

5 / 6
ಕವಲೆ ದುರ್ಗ ಕೋಟೆಯನ್ನು ನಡೆದು ಕೊಂಡು ಹೋಗಿ ಈ ಸ್ಥಳವನ್ನು ತಲುಪಲು ಎರಡು ಮೂರು ಗಂಟೆಗಳು ಬೇಕಾಗುತ್ತದೆ. ಪ್ರಕೃತಿಯ ಸೊಬಗಿನಿಂದ ಕಂಗೊಳಿಸುವ ಈ ಕವಲೆದುರ್ಗ ಕೋಟೆಯ  ತುತ್ತತುದಿಯಲ್ಲಿ ನಿಂತು ಸಹ್ಯಾದ್ರಿ ಬೆಟ್ಟಗಳ ಸಾಲುಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹವಾಮಾನ ವರದಿ ಇಲ್ಲಿದೆ

6 / 6

Published On - 11:49 am, Fri, 3 May 24

Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?

ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು

ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!

ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ

ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!

ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ

ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?

ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ