AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Jewellery Shopping: ಶಾಪಿಂಗ್ ಮಾಡುವ ಮೊದಲು ನೀವು ಗಮನಿಸಬೇಕಾದ ಅಂಶ ಯಾವುದು? ಇಲ್ಲಿದೆ ಮಾಹಿತಿ

ಆನ್‌ಲೈನ್ ನಲ್ಲಿ ಆಭರಣಗಳನ್ನು ಖರೀದಿಸುವಾಗ, ಸುರಕ್ಷಿತ ಮತ್ತು ತೃಪ್ತಿಕರ ಖರೀದಿಯನ್ನು ಮಾಡಲು ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸುವುದು ಬಹಳ ಮುಖ್ಯ. ಹಾಗಾದರೆ ನೆನಪಿನಲ್ಲಿಡಬೇಕಾದ ಐದು ವಿಷಯಗಳು ಇಲ್ಲಿವೆ.

Online Jewellery Shopping: ಶಾಪಿಂಗ್ ಮಾಡುವ ಮೊದಲು ನೀವು ಗಮನಿಸಬೇಕಾದ ಅಂಶ ಯಾವುದು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 13, 2023 | 7:27 AM

Share

ಆನ್ ಲೈನ್ ಶಾಪಿಂಗ್ ನ (Online Shopping) ಅನುಕೂಲದೊಂದಿಗೆ, ಆಭರಣಗಳನ್ನು ಖರೀದಿಸುವುದು ಹಿಂದೆಂದಿಗಿಂತಲೂ ಸುಲಭವಾಗಿದೆ. ಇದು ಎಲ್ಲೆಲ್ಲೋ ಹೋಗಿ ಖರೀದಿ ಮಾಡಬೇಕೆಂಬ ಚಿಂತೆ ಇಲ್ಲದೆ ಆರಾಮದಲ್ಲಿ ಮತ್ತು ಅತ್ಯಂತ ಸುಲಭವಾಗಿ ಆನ್ ಲೈನ್ ಆಭರಣ ಖರೀದಿ ಗಮನಾರ್ಹವಾಗಿ ಬೆಳೆದಿದೆ. ಅನೇಕ ಗ್ರಾಹಕರಿಗೆ, ಆಭರಣದ ಸರಳತೆ, ವೈವಿಧ್ಯಮಯ ವಿನ್ಯಾಸಗಳು ಮತ್ತು ಕೈಗೆಟುಕುವ ಬೆಲೆಗಳಿಂದಾಗಿ ಆನ್ ಲೈನ್ ನಲ್ಲಿ ಆಭರಣಗಳನ್ನು ಖರೀದಿಸುವುದು ಆಕರ್ಷಕವಾಗಿದೆ. ಇದಲ್ಲದೆ, ಯುವ ಪೀಳಿಗೆ, ವಿಶೇಷವಾಗಿ 16 ರಿಂದ 30 ವರ್ಷದೊಳಗಿನವರು, ಅಂಗಡಿಗೆ ಹೋಗುವ ಬದಲು ಆನ್ ಲೈನ್ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ, ಇಂಟರ್ನೆಟ್ ಸೇವೆಗಳು, ತ್ವರಿತ ಡಿಜಿಟಲ್ ಪಾವತಿ ಆಯ್ಕೆಗಳು ಮತ್ತು ಮನೆಯಿಂದ ಶಾಪಿಂಗ್ ಮಾಡಲು ಸುಲಭ. ಇದಲ್ಲದೆ, ಯುವ ಖರೀದಿದಾರರು ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಮಾರಾಟವಾಗುವ ಸೋಲಿಟೇರ್ ಗಳಂತಹ ಕೈಗೆಟುಕುವ ಬೆಲೆ ಮತ್ತು ಹಗುರವಾದ, ಆಭರಣ ವಿನ್ಯಾಸಗಳಿಗೆ ಆಕರ್ಷಿತರಾಗುತ್ತಾರೆ.

ಸುರಕ್ಷಿತ ಮತ್ತು ತೃಪ್ತಿಕರ ಖರೀದಿಯ ಅನುಭವಕ್ಕಾಗಿ ಆನ್ ಲೈನ್ ನಲ್ಲಿ ಆಭರಣಗಳನ್ನು ಖರೀದಿಸುವಾಗ ನೆನಪಿಡಬೇಕಾದ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಲಾಗಿದ್ದು ಅವು ಹೀಗಿವೆ.

ಇದನ್ನೂ ಓದಿ: Celebrity Jewellery: ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವ ಆಭರಣಗಳು ಇಲ್ಲಿವೆ ನೋಡಿ

ಆನ್ ಲೈನ್ ನಲ್ಲಿ ಆಭರಣಗಳನ್ನು ಖರೀದಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳು:

-ಖರೀದಿ ಮಾಡುವ ಮೊದಲು ವೆಬ್‌ಸೈಟ್ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ; ಇದು ಅನಾಮಧೇಯ ಬ್ಲಾಗರ್ ಆಗಿರದೆ, ಅಧಿಕೃತ ಹಿನ್ನೆಲೆಯನ್ನು ಹೊಂದಿರುವ ವಿಶ್ವಾಸಾರ್ಹ ಬ್ರಾಂಡ್ ನಿಂದ ಆದರೆ ಒಳ್ಳೆಯದು. ಬ್ರಾಂಡ್​​ನ ಇತಿಹಾಸ ಮತ್ತು ಅದ್ಕಕಿರುವ ಖ್ಯಾತಿಯನ್ನು ಪರಿಶೀಲಿಸಿ, ಹಿಂದಿನ ಗ್ರಾಹಕರ ವಿಮರ್ಶೆಗಳನ್ನು ಓದಿ, ಮತ್ತು ವೆಬ್ ಸೈಟ್ ಸುರಕ್ಷಿತ ಪಾವತಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಿ.

-ನೀವು ಆನ್ ಲೈನ್ ನಲ್ಲಿ ಖರೀದಿಸಲು ಬಯಸುವ ಆಭರಣ ವಿವರಗಳ ಬಗ್ಗೆ ಗಮನ ಹರಿಸುವುದು ಸಹ ಅತ್ಯಗತ್ಯ. ಒಡವೆಗಳ ಚಿತ್ರಗಳನ್ನು ಎಚ್ಚರಿಕೆಯಿಂದ ನೋಡಿ ಮತ್ತು ಅವರು ನೀಡಿರುವ ವಿವರಣೆಯನ್ನು ಸಂಪೂರ್ಣವಾಗಿ ಓದಿ. ಅಗತ್ಯವಿದ್ದರೆ, ಉತ್ಪನ್ನದ ವಿನ್ಯಾಸ, ಗುಣಮಟ್ಟ ಮತ್ತು ಒಟ್ಟಾರೆ ನೋಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಭರಣದ ಹೆಚ್ಚಿನ ಚಿತ್ರಗಳು ನೋಡಿ ಅಥವಾ ವೀಡಿಯೊಗಳನ್ನು ಕೇಳಿ.

-ಆಭರಣಕ್ಕಾಗಿ ಯಾವುದೋ ಬ್ರ್ಯಾಂಡ್ ನಿಮಗೆ ಹೆಚ್ಚಿನ ಶುಲ್ಕ ವಿಧಿಸುತ್ತಿಲ್ಲ ಮತ್ತು ಅದನ್ನು ನೀವು ನಿಜವಾದ ಬೆಲೆಗೆ ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಬೆಲೆ ಖಚಿತ ಪಡಿಸಿಕೊಳ್ಳಲು ಬೇರೆ ಬೇರೆ ಪ್ರಚಲಿತದಲ್ಲಿರುವ ವೆಬ್ ಸೈಟ್ಗಳಲ್ಲಿ ಪಾವತಿ ಆಯ್ಕೆಗಳು ಮತ್ತು ಬೆಲೆಗಳನ್ನು ಪರಿಶೀಲಿಸಿ.

-ಆಭರಣದ ಮರುಖರೀದಿ ಗ್ಯಾರಂಟಿಯನ್ನು ಪರಿಶೀಲಿಸಿ. ಕೆಲವು ಬಾರಿ ನೋಡಲು ತುಂಬಾ ಸುಂದರವಾಗಿದ್ದ ಆಭರಣಗಳಿಗೆ ಗ್ಯಾರಂಟಿ ಇರುವುದಿಲ್ಲ.

-ಅಂತಿಮವಾಗಿ, ಆಭರಣವು ನಿಮ್ಮ ನಿರೀಕ್ಷೆಗಳನ್ನು ಪೂರೈಸದಿದ್ದರೆ ಅಥವಾ ಶಿಪ್ಪಿಂಗ್ ಸಮಯದಲ್ಲಿ ಯಾವುದೇ ಹಾನಿಯಾದರೆ ವೆಬ್ಸೈಟ್ ಸ್ಪಷ್ಟ ರಿಟರ್ನ್ ಮತ್ತು ವಿನಿಮಯ ನೀತಿಯನ್ನು ಹೊಂದಿದೆಯಾ? ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವಾಗಲೂ ಖರೀದಿ ಮಾಡಿರುವ ಬಗ್ಗೆ ಸ್ವೀಕೃತಿಯನ್ನು ಇರಿಸಿಕೊಳ್ಳಿ, ಏಕೆಂದರೆ ರಿಟರ್ನ್ ಅಥವಾ ವಿನಿಮಯದ ಸಂದರ್ಭದಲ್ಲಿ ಇದು ಅಗತ್ಯವಾಗಿರುತ್ತದೆ.

ಆನ್‌ಲೈನ್​​​ನಲ್ಲಿ ಆಭರಣಗಳನ್ನು ಖರೀದಿಸುವುದರಿಂದ ವಿಶಿಷ್ಟ ವಿನ್ಯಾಸಗಳನ್ನು ಕೊಂಡುಕೊಳ್ಳಲು ಅನುಕೂಲವಾಗಿರುತ್ತದೆ, ವಿಶೇಷವಾಗಿ ಹಗುರವಾದ ಮತ್ತು ಉಡುಗೊರೆಯಾಗಿ ನೀಡುವ ಆಭರಣಗಳಿಗೆ. ಆದಾಗ್ಯೂ, ವೆಬ್ಸೈಟ್ ಮತ್ತು ಬ್ರಾಂಡ್​​ನ ವಿಶ್ವಾಸಾರ್ಹತೆ, ಬೆಲೆ ಮತ್ತು ಆಭರಣ ವಿವರಗಳನ್ನು ಪರಿಗಣಿಸುವುದು ಮುಖ್ಯ. ಖರೀದಿದಾರರು ತಾವು ಖರೀದಿಸಲು ಬಯಸುವ ಆಭರಣದ ಬಗ್ಗೆ ಅರ್ಥಮಾಡಿಕೊಳ್ಳಬೇಕು, ಇದು ಆನ್ ಲೈನ್ ಶಾಪಿಂಗ್ ಗೆ ಸೂಕ್ತವಾಗಿದೆಯೇ ಅಥವಾ ಇಲ್ಲವೇ. ಖರೀದಿದಾರರು ಈ ಅಂಶಗಳನ್ನು ಪರಿಗಣಿಸುವ ಮೂಲಕ ಸುರಕ್ಷಿತ ಮತ್ತು ಸಕಾರಾತ್ಮಕ ಆನ್‌ಲೈನ್ ಆಭರಣ ಶಾಪಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ