Optical Illusion: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ?

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಡಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಇವುಗಳು ಮೋಜಿನ ಆಟಗಳು ಮಾತ್ರವಲ್ಲದೆ ನಮ್ಮ ಬುದ್ಧಿವಂತಿಕೆ, ಏಕಾಗ್ರತೆಯನ್ನು ಸಹ ಹೆಚ್ಚಿಸುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಅದರಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು ಕೇವಲ 15 ಸೆಕೆಂಡುಗಳಲ್ಲಿ ಅದನ್ನು ಪತ್ತೆಹಚ್ಚಬೇಕು.

Optical Illusion: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Jagran Josh

Updated on: Sep 03, 2025 | 4:18 PM

ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್‌ ಇಲ್ಯೂಷನ್‌ಗಳು (Optical Illusion)  ಮೆದುಳಿಗೆ ವ್ಯಾಯಾಮವನ್ನು ಒದಗಿಸುವ ಉತ್ತಮ ಒಗಟಿನ ಆಟವಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ಏಕಾಗ್ರತೆ, ಸ್ಮರಣಶಕ್ತಿ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಬಲಪಡಿಸುವ ಮಾನಸಿಕ ವ್ಯಾಯಾಮವೂ ಹೌದು. ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿಯಾವುದೆಂದು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 15 ಸೆಕೆಂಡುಗಳ ಒಳಗೆ ಆ ಪ್ರಾಣಿ (Hidden Animal) ಯಾವುದೆಂದು ಕಂಡು ಹಿಡಿಯುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ಹೇಳಬಲ್ಲಿರಾ?

ಈ ಮೇಲಿನ ಜಿಗ್‌ಜ್ಯಾಗ್‌ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಂದು ಪ್ರಾಣಿ ಮರೆಯಾಗಿದೆ. ಅದನ್ನು ಕೇವಲ 15 ಸೆಕೆಂಡುಗಳ ಒಳಗೆ ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ತೀಕ್ಷ್ಣವಾದ ವೀಕ್ಷಣಾ ಕೌಶಲ್ಯ, ವಿವರಗಳಿಗೆ ಗಮನ ಮತ್ತು ಏಕಾಗ್ರತೆಯನ್ನು ಹೊಂದಿರುವ ಜನರು ಮಾತ್ರ ಈ ಆಪ್ಟಿಕಲ್ ಇಲ್ಯೂಷನ್‌ ಚಿತ್ರದಲ್ಲಿ ಅಡಗಿರುವ ಪ್ರಾಣಿ ಯಾವುದೆಂದು ಹುಡುಕಲು ಸಾಧ್ಯವಂತೆ. ಹಾಗಿದ್ರೆ ನಿಮ್ಮ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಲು ನೀವು ಈ ಸವಾಲನ್ನು ಸ್ವೀಕರಿಸಲು ಸಿದ್ಧರೇ?

ಇದನ್ನೂ ಓದಿ
ಈ ಚಿತ್ರದಲ್ಲಿ ರಿಯಲ್‌ ಪಿರಮಿಡ್‌ ಯಾವುದೆಂದು ಕಂಡು ಹಿಡಿಯುವಿರಾ?
ಈ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಎಂದು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಒಗಟಿನ ಆಟವು ನಿಮ್ಮ ಏಕಾಗ್ರತೆ, ಸ್ಮರಣಶಕ್ತಿ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಲು ಇರುವಂತಹ ಉತ್ತಮ ಮಾರ್ಗವಾಗಿದೆ. ನೀವು ಬರೀ 15 ಸೆಕೆಂಡುಗಳ ಒಳಗಾಗಿ ನೀವು ಈ ಸವಾಲನ್ನು ಪೂರ್ಣಗೊಳಿಸಬೇಕು. ಅಂಕುಡೊಂಕಾದ ಗೆರೆಗಳಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಂದು ಪ್ರಾಣಿ ಅಡಕವಾಗಿದೆ. ನೀವು ಏಕಾಗ್ರತೆಯಿಂದ ಆ ಚಿತ್ರವನ್ನು ಗಮನಿಸಿದಾಗ ಮಾತ್ರ ಅದರೊಳಗಿರುವ ಪ್ರಾಣಿ ಯಾವುದೆಂದು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯ.

ಇದನ್ನೂ ಓದಿ: ಚಿತ್ರದಲ್ಲಿ ರಿಯಲ್‌ ಪಿರಮಿಡ್‌ ಯಾವುದೆಂದು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ?

ಇಲ್ಲಿದೆ ಉತ್ತರ:

ನೀವು ಸೂಪರ್ ಶಾರ್ಪ್ ಕಣ್ಣು ಮತ್ತು ಸೂಪರ್ ಬುದ್ಧಿವಂತರಾಗಿದ್ದರೆ, ಅಂಕುಡೊಂಕಾದ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಸುಲಭವಾಗಿ ಹುಡುಕಲು ಸಾಧ್ಯ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ಚಿತ್ರದಲ್ಲಿ ಅಡಕವಾಗಿರುವ ಗುಪ್ತ ಪ್ರಾಣಿ ಯಾವುದೆಂದರೆ ಜಿರಾಫೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ