
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಇತ್ಯಾದಿಗಳು ನಮ್ಮ ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಲು ಇರುವಂತಹ ಮೋಜಿನ ಒಗಟಿನ ಆಟಗಳಾಗಿವೆ. ಇಂತಹ ಸವಾಲಿನ ಆಟಗಳನ್ನು ಆಡುವ ಮೂಲಕ ಏಕಾಗ್ರತೆ ಮತ್ತು ಮೆದುಳನ್ನು ಚುರುಕುಗೊಳಿಸಬಹುದು. ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ಈ ಚಿತ್ರಗಳ ಮೂಲಕ ನೀವು ಕೂಡಾ ನಿಮ್ಮ ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷೆ ಮಾಡಿರುತ್ತೀರಿ ಆಲ್ವಾ. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಹಕ್ಕಿಗಳ ನಡುವೆ ಮರೆಯಾಗಿರುವ ಮುಖವನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 5 ಸೆಕೆಂಡುಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷಿಸಿ.
ಈ ಮೇಲಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಆಕಾಶದಲ್ಲಿ ಹಕ್ಕಿಗಳು ಹಾರುತ್ತಿರುವ ದೃಶ್ಯವನ್ನು ಕಾಣಬಹುದು. ಮೇಲ್ನೋಟಕ್ಕೆ ಇದು, ಸಾಮಾನ್ಯ ಚಿತ್ರದಂತೆ ಕಂಡರೂ ಹಾರುತ್ತಿರುವ ಈ ಹಕ್ಕಿಗಳ ನಡುವೆ ಮನುಷ್ಯನ ಮುಖವೊಂದು ಅಡಕವಾಗಿದೆ. ಅದನ್ನು ಬರೀ 5 ಸೆಕೆಂಡುಗಳಲ್ಲಿ ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 1% ಜನರಿಗೆ ಮಾತ್ರವಂತೆ ಈ ಉತ್ತರವನ್ನು ಕಂಡುಕೊಳ್ಳಲು ಸಾಧ್ಯ. ಹಾಗಿದ್ದರೆ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?
ಮೇಲ್ನೋಟಕ್ಕೆ ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಕ್ಕಿಗಳು ಆಕಾಶದಲ್ಲಿ ಹಾರಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆದರೆ ಆ ಹಕ್ಕಿಗಳ ನಡುವೆ ಮನುಷ್ಯನ ಮುಖವೊಂದು ಅಡಕವಾಗಿದೆ. ಕೇವಲ 5 ಸೆಕೆಂಡುಗಳಲ್ಲಿ ಆ ಮುಖವನ್ನು ನೀವು ಪತ್ತೆಹಚ್ಚಬೇಕು.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?
ಉತ್ತರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ನಿಮಗೆ ಧನ್ಯವಾದಗಳು. ನೀವು ಉತ್ತಮ ದೃಷ್ಟಿ ತೀಕ್ಷ್ಣ ತೆಯನ್ನು ಹೊಂದಿದ್ದೀರಿ ಎಂದರ್ಥ. ಮನುಷ್ಯನ ಮುಖ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ನಿಮಗಾಗಿ ಇಲ್ಲಿದೆ ಉತ್ತರ. ಮಧ್ಯಭಾಗದಲ್ಲಿ ಹಕ್ಕಿಗಳ ರೆಕ್ಕೆ ಮತ್ತು ಮೋಡವನ್ನು ಸೂಕ್ಷವಾಗಿ ಗಮನಿಸಿದರೆ ನಿಮಗೆ ಮನುಷ್ಯನ ಮುಖ ಗೋಚರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ