ಈ ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು

ಗಾತ್ರದಲ್ಲಿ ಸಣ್ಣದಾಗಿದ್ದರೂ, ಈ ಇಲಿಗಳು ಕೊಡುವ ಕಾಟ ಅಷ್ಟಿಷ್ಟಲ್ಲ. ಬಟ್ಟೆ ಆಹಾರದಿಂದ ಹಿಡಿದು, ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಹಾಳು ಮಾಡಿಬಿಡುತ್ತವೆ. ನೀವು ಕೂಡ ಈ ಇಲಿಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇಲಿಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ವಿಷಕಾರಿ ವಸ್ತುಗಳನ್ನು ಉಪಯೋಗಿಸುವ ಬದಲು ಕೇವಲ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಈ ಕಿತ್ತಲೆ ಹಣ್ಣಿನ ಸಿಪ್ಪೆ ಇಲಿಗಳನ್ನು ಓಡಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಈ ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ  ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 05, 2025 | 3:28 PM

ಈ ಇಲಿಗಳು (rats) ಚಿಕ್ಕದಾಗಿ ಕಂಡರೂ ಅವುಗಳು ಕೊಡುವ ತೊಂದರೆಗಳು ಹೇಳತೀರದ್ದು. ಒಮ್ಮೆ ಅವುಗಳು ಮನೆ, ಅಂಗಡಿಗಳಿಗೆ ಪ್ರವೇಶಿಸಿದರೆ ಆ ಸ್ತಳ ಅವ್ಯವಸ್ಥೆಯ ತಾಣವಾಗಿಬಿಡುತ್ತವೆ. ಮನೆಯಲ್ಲಿರುವ ಹಣ್ಣು, ತರಕಾರಿ ಇತರೆ ಆಹಾರಗಳನ್ನು ತಿನ್ನುವುದರ ಜೊತೆಗೆ ಬಟ್ಟೆ, ಟಿವಿ ವೈರ್‌ , ಫ್ರಿಡ್ಜ್‌ ವೈರ್‌ ಎಲ್ಲವನ್ನೂ ಕಚ್ಚಿ ತಿಂದು ಬಿಡುತ್ತವೆ. ಇದಕ್ಕಾಗಿ ಕೆಲವರು ಇಲಿಗಳನ್ನು ಸಾಯಿಸಲು ಇಲಿ ವಿಷಗಳನ್ನು ತಂದು ಮನೆಯಲ್ಲಿಡುತ್ತಾರೆ. ಆದರೆ ಕೆಲವೊಮ್ಮೆ ಈ ವಿಷಗಳನ್ನು ಮನೆಯಲ್ಲಿರುವ ಸಾಕು ಪ್ರಾಣಿಗಳು ತಿನ್ನುವ ಸಾಧ್ಯತೆ ಇರುತ್ತದೆ. ಹಾಗಾಗಿ ಇವುಗಳ ಬದಲು ನೀವು ಕೇವಲ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಸಿ ನೈಸರ್ಗಿಕ ವಿಧಾನದ ಮೂಲಕ ಸುಲಭವಾಗಿ ಮನೆಯಿಂದ ಇಲಿಗಳನ್ನು ಓಡಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಇಲಿಗಳನ್ನು ಓಡಿಸಲು ಕಿತ್ತಳೆ ಹಣ್ಣಿನ ಸಿಪ್ಪೆ ಹೇಗೆ ಸಹಾಯ ಮಾಡುತ್ತದೆ?

ಇಲಿಗಳನ್ನು ಓಡಿಸಲು ಕಿತ್ತಳೆ ಹಣ್ಣಿನ ಸಿಪ್ಪೆ ತುಂಬಾನೇ ಸಹಕಾರಿಯಾಗಿದೆ. ಇಲಿಗಳು ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಕಿತ್ತಳೆ ಸಿಪ್ಪೆಗಳು ಬಲವಾದ, ಕಟುವಾದ ವಾಸನೆಯನ್ನು ಹೊಂದಿರುತ್ತವೆ, ಈ ವಾಸನೆಗಳಿಂದ ಇಲಿಗಳು ದೂರ ಓಡಿ ಹೋಗುತ್ತವೆ. ಇಲಿಗಳು ಓಡಾಡುವ ಜಾಗದಲ್ಲಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನಿಡಿ.

ಇವುಗಳನ್ನು ಬಳಸುವುದು ತುಂಬಾ ಸುಲಭ. ಮೊದಲಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸುಳಿದು, ಆ ಸಿಪ್ಪೆಯನ್ನು ಸ್ವಲ್ಪ ಹಿಂಡಿ ಇಲಿಗಳು ಓಡಾಡುವ ಸ್ಥಳದಲ್ಲಿ ಇಟ್ಟು ಬಿಡಿ. ಅವುಗಳು ಬೇಗ ಒಣಗಿ ಹೋಗುವ ಕಾರಣ ನೀವು  ಎರಡು ಮೂರು ದಿನಗಳಿಗೊಮ್ಮೆ ಸಿಪ್ಪೆಯನ್ನು ಬದಲಾಯಿಸುತ್ತಿರಿ. ಇದರ ಹೊರತಾಗಿ ನೀವು ಕಿತ್ತಳೆ ಸಿಪ್ಪೆಯ ಸ್ಪ್ರೆಯನ್ನು ಕೂಡ ಬಳಸಬಹುದು. ಇದಕ್ಕಾಗಿ ಕಿತ್ತಳೆ ಸಿಪ್ಪೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ,  ಅದನ್ನು ಸ್ಪ್ರೇ ಬಾಟಲಿಗೆ ಹಾಕಿಡಿ. ನಂತರ ಮನೆಯ ಬಾಗಿಲುಗಳು, ಕಿಟಕಿಗಳು ಮತ್ತು ಮನೆಯ ಪ್ರವೇಶ ದ್ವಾರಗಳ ಸುತ್ತಲೂ ಆ ಸ್ಪ್ರೆಯನ್ನು ಸಿಂಪಡಿಸಿ. ಇದು ರೂಮ್‌ ಫ್ರೆಶ್ನರ್‌ನಂತೆ ಉತ್ತಮ ಸುವಾಸನೆಯನ್ನು ನೀಡುವುದರ ಜೊತೆಗೆ ಇಲಿಗಳು ಮನೆಯ ಕಡೆಗೆ ಸುಳಿಯದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಮನೆ ತುಂಬಾ ಜಿರಳೆಗಳ ಕಾಟವೇ? ಕಾಕ್ರೋಜ್‌ಗಳನ್ನು ಓಡಿಸಲು ಇಲ್ಲಿವೆ ಸಿಂಪಲ್‌ ಟ್ರಿಕ್ಸ್‌

ಇದು ನಿಮಗೆ ಕಷ್ಟವೆನಿಸಿದರೆ, ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ. ಈ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಇಲಿಗಳು ಓಡಾಡುವ ಸ್ಥಳ ಹಾಗೂ ಮನೆಯ ಮೂಲೆ ಮೂಲೆಗಳನ್ನು ಇಟ್ಟು ಬಿಡಿ. ಇದು ಇಲಿಗಳನ್ನು ಓಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ