ಯಾವಾಗಲೂ ನಿದ್ರೆಯ ಮಂಪರಿನಲ್ಲಿಯೇ ಇರುತ್ತೀರಾ? ಈ ರೋಗದ ಲಕ್ಷಣವಾಗಿರಬಹುದು ಎಚ್ಚರ!

| Updated By: shruti hegde

Updated on: Nov 08, 2021 | 7:51 AM

ಕೆಲವರಿಗೆ ಹೆಚ್ಚಿನ ನಿದ್ರೆ ಅವಶ್ಯಕತೆ ಇರುತ್ತದೆ. ಆದರೆ ಯಾವಾಗಲೂ ನಿದ್ರೆಯ ಮಂಪರಿನಲ್ಲಿರುವವರು ಈ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ.

ಯಾವಾಗಲೂ ನಿದ್ರೆಯ ಮಂಪರಿನಲ್ಲಿಯೇ ಇರುತ್ತೀರಾ? ಈ ರೋಗದ ಲಕ್ಷಣವಾಗಿರಬಹುದು ಎಚ್ಚರ!
ಸಂಗ್ರಹ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಜೀವನಶೈಲಿ ಬದಲಾಗುತ್ತಿದ್ದಂತೆ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳ ಕಾಲ ಮಲಗುವ ಜನರು ಹೆಚ್ಚು ಆರೋಗ್ಯಕರ ಮತ್ತು ಹೆಚ್ಚು ಶಕ್ತಿಯುತರು ಎಂದು ಅನೇಕ ಅಧ್ಯಯನಗಳು ಈಗಾಗಲೇ ತಿಳಿಸಿವೆ. ಅದಾಗ್ಯೂ ಇತ್ತೀಚಿನ ಅಧ್ಯಯನಗಳು 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವ ಜನರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದೆ. ಮೆಡಿಕಲ್ ಜರ್ನಲ್ ಆಫ್ ದಿ ಅಮೆರಿಕನ್ ಅಕಾಡೆಮಿ ಆಫ್ ನ್ಯುರಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, 62 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 32,000 ಜನರ ಅಧ್ಯಯನದಲ್ಲಿ ಸಂಶೋಧಕರು ಪಾರ್ಶ್ವವಾಯು ಅಪಾಯವನ್ನು ವಿವರಿಸಿದ್ದಾರೆ.

ಮೆದುಳಿಗೆ ರಕ್ತದ ಹರಿವಿನ ಅಡ್ಡಿಯು ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ರಾತ್ರಿ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಒಂಭತ್ತು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಿಗಿಂತ 23 ಪ್ರತಿಶತದಷ್ಟು ಹೆಚ್ಚಿನ ಪಾರ್ಶ್ವವಾಯು ಅಪಾಯವನ್ನು ಹೊಂದಿರುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಅದಾಗ್ಯೂ ಹೆಚ್ಚು ನಿದ್ರೆ ಮಾಡಿದರೆ, ಪಾರ್ಶ್ವವಾಯು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತದೆ. ಹಾಗೆಯೇ ಅವರಲ್ಲಿ ಜ್ಞಾಪಕ ಶಕ್ತಿ ಕೂಡಾ ಕುಂಠಿತಗೊಳ್ಳುತ್ತದೆ. ಜೊತೆಗೆ ಮಾನಸಿಕ ಒತ್ತಡ, ಹೆಚ್ಚು ಭಾವೋದ್ವೇಗ ಈ ರೀತಿಯಾದ ಸಮಸ್ಯೆಗಳು ಕಂಡು ಬರುತ್ತದೆ. ಸರಿಯಾದ ಆಹಾರ ಜೀವನಶೈಲಿಯಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತವಾಗಿ ವ್ಯಾಯಾಮ ಮಾಡುವುದು, ಜಂಕ್ ಫುಡ್, ಧೂಮಪಾನ, ಮದ್ಯಪಾನವನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಯಾವಾಗಲೂ ನಿದ್ರೆಯ ಮಂಪರು ಮತ್ತು ನಿದ್ರೆ ಬಂತಾಗುವವರು ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸುವುದು ಒಳ್ಳೆಯದು. ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಆರೋಗ್ಯದ ಕುರಿತಾಗಿ ಹೆಚ್ಚು ಲಕ್ಷ್ಯವಿರಲಿ. ಯಾವಾಗಲೂ ಪೌಷ್ಟಿಕ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಬೆಳಿಗ್ಗೆ ಬೇಗ ಎದ್ದು ಧ್ಯಾನ, ವ್ಯಾಯಾಮ, ಜಾಗಿಂಗ್ ಅಭ್ಯಾಸ ರೂಢಿಯಲ್ಲಿದ್ದರೆ ಅದೆಷ್ಟೋ ರೋಗ ಲಕ್ಷಣಗಳಿಂದ ದೂರವಿರಬಹುದು.

ಇದನ್ನೂ ಓದಿ:

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

Health Tips: ದಾಲ್ಚಿನ್ನಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ