Kannada News Lifestyle Paneer Recipe for kids : These are paneer delicious recipes for kids lunchbox Kannada News
Paneer Recipe for kids : ಮಕ್ಕಳ ಲಂಚ್ ಬಾಕ್ಸ್ ಖಾಲಿಯಾಗ್ಬೇಕಾ, ಈ ಪನ್ನೀರ್ ರೆಸಿಪಿಗಳನ್ನೊಮ್ಮೆ ಟ್ರೈ ಮಾಡಿ
ಮಕ್ಕಳ ಲಂಚ್ ಬಾಕ್ಸ್ ಗೆ ಏನು ತಿಂಡಿ ಮಾಡಿಕೊಡುವುದು ಎನ್ನುವ ಯೋಚನೆ ಎಲ್ಲಾ ತಾಯಂದಿರಿಗಿರುತ್ತದೆ. ಹೀಗಾಗಿ ಮಕ್ಕಳಿಗೆ ಇಷ್ಟವಾಗುವ ವಿವಿಧ ಬಗೆಯ ತಿಂಡಿ ತಿನಿಸುಗಳನ್ನೆ ಮಾಡಿಕೊಡುತ್ತಾರೆ. ಒಂದು ವೇಳೆ ಮಕ್ಕಳು ಬಾಕ್ಸ್ ಖಾಲಿ ಮಾಡಿದರೆ ಅಮ್ಮಂದಿರ ಮನಸ್ಸಿಗೆ ನಿಜಕ್ಕೂ ನೆಮ್ಮದಿಯಾಗುತ್ತದೆ. ನಿಮ್ಮ ಮಕ್ಕಳಿಗೆ ಪನ್ನೀರ್ ಏನಾದರೂ ಇಷ್ಟವಿದ್ದರೆ, ಇದರಿಂದ ವಿವಿಧ ಬಗೆಯ ರುಚಿಕರವಾದ ತಿನಿಸನ್ನು ಮಾಡಿ ಮಕ್ಕಳಿಗೆ ನೀಡಬಹುದು. ಈ ಖಾದ್ಯಗಳನ್ನು ಮಕ್ಕಳು ಇಷ್ಟಪಟ್ಟೆ ಸವಿಯುತ್ತಾರೆ.
ಸಾಂದರ್ಭಿಕ ಚಿತ್ರ
Follow us on
ಶಾಲೆಗೆ ಹೋಗುವ ಮಕ್ಕಳಿಗೆ ಲಂಚ್ ಬಾಕ್ಸ್ ಕೊಟ್ಟು ಕಳುಹಿಸಿದರೆ, ಖಾಲಿ ಮಾಡದೇ ವಾಪಸ್ಸು ತರುವ ಮಕ್ಕಳೇ ಹೆಚ್ಚು. ಖಾಲಿ ಮಾಡದೇ ವಾಪಸ್ಸು ತಂದು ಬಿಟ್ಟರೆ ಮಕ್ಕಳು ಏನು ಮಾಡಿಕೊಟ್ರು ತಿನ್ನುವುದಿಲ್ಲ ಎಂದು ತಾಯಂದಿರು ತಲೆ ಕೆಡಿಸಿಕೊಳ್ಳುತ್ತಾರೆ. ಹೀಗಾಗಿ ನಾಳೆ ಟಿಫನ್ ಬಾಕ್ಸ್ ಗೆ ಏನು ತಿಂಡಿ ಮಾಡಿ ಯೋಚಿಸುವುದರ ಜೊತೆಗೆ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ತಯಾರಿಸಿ ಲಂಚ್ ಬಾಕ್ಸ್ ತುಂಬಿಸುತ್ತಾರೆ. ಆದರೆ ಮನೆಯಲ್ಲೇ ಸುಲಭವಾಗಿ ಪನ್ನೀರ್ ನಿಂದ ಈ ಕೆಲವು ರುಚಿಕರ ಖಾದ್ಯಗಳನ್ನು ತಯಾರಿಸಿ ಲಂಚ್ ಬಾಕ್ಸ್ ಗೆ ಹಾಕಿಕೊಟ್ಟರೆ ಮಕ್ಕಳು ಇಷ್ಟ ಪಟ್ಟು ಸೇವಿಸುವುದರೊಂದಿಗೆ ಮಕ್ಕಳು ತಿಂದರಲ್ಲ ಎನ್ನುವ ನೆಮ್ಮದಿಯು ಇರುತ್ತದೆ.
ಪನ್ನೀರ್ ಪರೋಟ : ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಬೆಳಗಿನ ಉಪಹಾರವಾಗಿ ಈ ಪನ್ನೀರ್ ಪರೋಟವನ್ನು ತಯಾರಿಸಲಾಗುತ್ತದೆ. ಗೋಧಿ ಹಿಟ್ಟು, ಈರುಳ್ಳಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಈ ಐಟಂಯಿದ್ದರೆ ಮನೆಯಲ್ಲೇ ಫಟಾಪಟ್ ಎಂದು ಈ ರೆಸಿಪಿಯನ್ನು ಮಾಡಬಹುದು. ಈ ತಿನಿಸನ್ನು ಮಕ್ಕಳು ಇಷ್ಟ ಪಟ್ಟು ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರೆ.
ಪನೀರ್ ಫ್ರಾಂಕಿ : ಈ ಹೆಸರು ಕೇಳುವಾಗಲೇ ಇದೇನಪ್ಪಾ ಹೀಗೆ ಎಂದೆನಿಸಿದರೂ ಮಕ್ಕಳಿಗೆ ಸಹಜವಾಗಿ ಇಷ್ಟವಾಗುತ್ತದೆ. ಚಪಾತಿಯನ್ನು ತಯಾರಿಸಿದ ಅದಕ್ಕೆ ಪುಡಿಮಾಡಿದ ಪನೀರ್, ಈರುಳ್ಳಿ, ಜೀರಿಗೆ, ಚಾಟ್ ಮಸಾಲಾ ಮತ್ತು ಕೊತ್ತಂಬರಿ ಪುಡಿ ಹಾಗೂ ಉಪ್ಪು ಸೇರಿಸಿದರೆ ಬೇಯಿಸಿ ಇದನ್ನು ಚಪಾತಿಯೊಳಗೆ ರೋಲ್ ಮಾಡಿದರೆ ಮಕ್ಕಳಿಗೆ ಈ ವಿಶೇಷ ತಿನಿಸು ಇಷ್ಟವಾಗುವುದರಲ್ಲಿ ಡೌಟ್ ಇಲ್ಲ.
ಪನ್ನೀರ್ ಪಲಾವ್ : ಬೆಳಗ್ಗಿನ ತಿಂಡಿಗೆ ವೆಜಿಟೇಬಲ್ ಪುಲಾವ್ ಮಾಡುವುದು ಮುಮೂಲಿ. ಆದರೆ ಮಸಾಲೆಭರಿತವಾದ ಈ ಪುಲಾವ್ ಗೆ ಪನ್ನೀರ್ ಬೆರೆಸಿ ರುಚಿಕರವಾದ ಪನ್ನೀರ್ ಪುಲಾವ್ ಪ್ರಯತ್ನಿಸಬಹುದು. ಇದನ್ನು ಮಕ್ಕಳ ಲಂಚ್ ಬಾಕ್ಸ್ ಗೆ ಹಾಕಿಕೊಟ್ಟರೆ ಪನ್ನೀರ್ ಹಾಕಿರುವ ಕಾರಣ ಇಷ್ಟ ಪಟ್ಟು ತಿನ್ನುತ್ತಾರೆ.
ಪನ್ನೀರ್ ಪಕೋಡಾ : ಎಣ್ಣೆಯಲ್ಲಿ ಕರಿದ ತಿಂಡಿಗಳೆಂದರೆ ಮಕ್ಕಳಿಗೆ ತುಂಬಾನೇ ಇಷ್ಟ. ಹೀಗಾಗಿ ಮಕ್ಕಳ ಲಂಚ್ ಬಾಕ್ಸ್ ಗೆ ಪನ್ನೀರ್ ಪಕೋಡ ಮಾಡಿ ನೀಡಬಹುದು. ಮನೆಯಲ್ಲೇ ಇರುವ ಮಸಾಲೆಭರಿತವಾದ ಪದಾರ್ಥಗಳಿಂದ ಮಸಾಲೆ ತಯಾರಿಸಿ ಇದಕ್ಕೆ ಪನ್ನೀರ್ ತುಂಡುಗಳನ್ನು ಸೇರಿಸಿ ಎಣ್ಣೆಯಲ್ಲಿ ಕರಿದರೆ ಮಕ್ಕಳಿಗೆ ಇಷ್ಟವಾಗುವ ಪನ್ನೀರ್ ಪಕೋಡಾ ಸವಿಯಲು ಸಿದ್ಧ.
ಪನ್ನೀರ್ ಫ್ರೈಡ್ ರೈಸ್ : ತರಕಾರಿ ಜೊತೆ ಪನ್ನೀರ್ ಕಾಂಬಿನೇಷನ್ ಸಖತ್ ಟೇಸ್ಟಿ ಆಗಿರುವುದರೊಂದಿಗೆ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. ಈ ವೆಜ್ ಫ್ರೈಡ್ ರೈಸ್ ಮಾಡುವ ವಿಧಾನದಲ್ಲೇ ಈ ಪನ್ನೀರ್ ಫ್ರೈಡ್ ರೈಸನ್ನು ಮಾಡಬಹುದಾಗಿದ್ದು, ಇದನ್ನು ಮಕ್ಕಳಿಗೆ ಮಧ್ಯಾಹ್ನದ ಲಂಚ್ ಬಾಕ್ಸ್ ಗೆ ಹಾಕಿಕೊಡುವುದರಿಂದ ಖುಷಿಯಾಗುತ್ತದೆ.