Relationship Tips: ಎಷ್ಟೇ ಜಗಳ ಮಾಡಿ, ಆದರೆ ಅಪ್ಪಿತಪ್ಪಿಯೂ ಈ ಮಾತು ಮಾತ್ರ ನಿಮ್ಮ ಬಾಯಿಯಿಂದ ಬರಬಾರದು

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2024 | 2:42 PM

ಮದುವೆ ಮತ್ತು ಪ್ರೀತಿಯಂತಹ ಸಂಬಂಧಗಳಲ್ಲಿ ಜಗಳಗಳು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಸಣ್ಣ ವಿಷಯಕ್ಕೆ ಆರಂಭವಾದ ಕಿತ್ತಾಟವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ಮುಖ್ಯ ಕಾರಣವೇ ಜಗಳವೇ ವೇಳೆಯಲ್ಲಿ ನಾವಾಡುವ ಮಾತುಗಳೇ ಆಗಿರುತ್ತದೆ. ಸಂಗಾತಿಯ ಜೊತೆಗೆ ಮನಸ್ತಾಪಗಳು ಮೂಡಿ ಗಲಾಟೆಗಳಾದ ಈ ಕೆಲವು ವಿಷಯಗಳನ್ನು ನಡುವೆ ತರುವುದು ಒಳ್ಳೆಯದಲ್ಲ.

Relationship Tips: ಎಷ್ಟೇ ಜಗಳ ಮಾಡಿ, ಆದರೆ ಅಪ್ಪಿತಪ್ಪಿಯೂ ಈ ಮಾತು ಮಾತ್ರ ನಿಮ್ಮ ಬಾಯಿಯಿಂದ ಬರಬಾರದು
ಸಾಂದರ್ಭಿಕ ಚಿತ್ರ
Follow us on

ದಾಂಪತ್ಯ ಜೀವನವು ಒಮ್ಮೆ ಮುರಿದು ಬಿದ್ದರೆ ಸರಿಪಡಿಸಿಕೊಳ್ಳುವುದು ಕಷ್ಟಕರ. ಹೀಗಾಗಿ ಗಂಡ ಹೆಂಡತಿ ಚೆನ್ನಾಗಿರಬೇಕಾದರೆ ಪ್ರೀತಿಯ ಜೊತೆಗೆ ನಂಬಿಕೆಯೂ ಇರಬೇಕು. ಮದುವೆಯಾದ ಹೊಸದರಲ್ಲಿದ ಪ್ರೀತಿ ನಂಬಿಕೆಯು ದಿನ ಕಳೆಯುತ್ತ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚಿನವರು ವಿಚ್ಛೇದನದ ಮೂಲಕ ದಾಂಪತ್ಯ ಜೀವನವನ್ನು ಮುರಿದು ಹಂತಕ್ಕೆ ತಲುಪಿದ್ದಾರೆ. ಸಂಗಾತಿಗಳಿಬ್ಬರೂ ಜಗಳ ನಡುವೆ ಈ ವಿಷಯಗಳ ಬಗ್ಗೆ ಮಾತನಾಡುವುದು ಹಿತಕರವಲ್ಲ.

* ಕೂಗಾಡಿ ಮಾತನಾಡುವುದು : ಜಗಳ ಅಥವಾ ವಾದದ ಸಮಯದಲ್ಲಿ ಏರುಧ್ವನಿಯಲ್ಲಿ ಕೂಗಾಡಿ ಮಾತನಾಡುತ್ತಾರೆ. ನಿಮ್ಮ ಸಂಗಾತಿಯ ಮುಂದೆ ಹೀಗೆ ಯಾವತ್ತಿಗೂ ವರ್ತಿಸಬೇಡಿ. ಜಗಳದ ಸಮಯದಲ್ಲಿ ಸಂಗಾತಿಯು ನಿಮ್ಮ ಮೇಲೆ ಕೂಗಾಡುತ್ತಿದರೆ, ನೀವು ಅದೇ ರೀತಿ ಪ್ರತಿಕ್ರಿಯಿಸಿದರೆ ಸಂಬಂಧವು ಮತ್ತಷ್ಟು ಹದಗೆಡುತ್ತದೆ.

* ಸ್ವಾಭಿಮಾನಕ್ಕೆ ಹಾನಿಯಾಗುವಂತೆ ನಡೆದುಕೊಳ್ಳುವುದು : ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಎನ್ನುವುದಿರುತ್ತದೆ. ಹೀಗಾಗಿ ವಾದ ಅಥವಾ ಜಗಳದ ಸಂದರ್ಭದಲ್ಲಿ ಎಷ್ಟೇ ದೊಡ್ಡ ವಿಷಯವಾಗಿದ್ದರೂ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳಬೇಡಿ. ಈ ನಡವಳಿಕೆಯಿಂದ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿಯು ಕಡಿಮೆಯಾಗಿ ದೂರವಾಗುವ ಸಂಭವವೇ ಹೆಚ್ಚು..

* ಹಳೆಯ ವಿಷಯಗಳನ್ನು ಪ್ರಸ್ತಾಪಿಸುವುದು : ಹೆಚ್ಚಿನವರು ಜಗಳ ಮಾಡುವಾಗ ಹಳೆಯ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಹೀಗೆ ಮಾಡಿದ್ದಲ್ಲಿ ಹಳೆಯ ವಿಷಯಗಳಿಂದಲೇ ಸಂಸಾರವು ಮುರಿದು ಬೀಳುತ್ತದೆ. ನಿಮ್ಮ ಚುಚ್ಚು ಮಾತುಗಳು ಎದುರಿಗಿರುವ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತದೆ. ಆದಷ್ಟು ಅಂತಹ ವಿಚಾರಗಳಿಂದ ಪತಿ ಅಥವಾ ಪತ್ನಿಯ ಮನಸ್ಸು ನೋಯಿಸಲು ಹೋಗುವುದು ಒಳ್ಳೆಯದಲ್ಲ.

* ಹಣದಿಂದ ಬೆದರಿಸುವುದು : ಈಗಿನ ಕಾಲದ ದಂಪತಿಗಳಿಬ್ಬರೂ ಉದ್ಯೋಗದಲ್ಲಿರುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿಗಿಂತ ನೀವು ಹೆಚ್ಚು ಆದಾಯವನ್ನು ಗಳಿಸುತ್ತಿದ್ದರೆ ಜಗಳ ನಡುವೆ ಈ ವಿಷಯಗಳಿಂದ ಆತ ಅಥವಾ ಆಕೆಯನ್ನು ಅವನನ್ನು ಬೆದರಿಸಬೇಡಿ. ಈ ಮಾತಿನಿಂದ ಎದುರಿಗಿರುವ ವ್ಯಕ್ತಿಯ ಮನಸ್ಸಿಗೆ ನೋವಾಗಬಹುದು.

ಇದನ್ನೂ  ಓದಿ: ಮಕ್ಕಳ ಮುಂದೆ ಯಾವತ್ತೂ ಹೀಗೆಲ್ಲ ಮಾತನಾಡಬೇಡಿ, ಕೆಟ್ಟ ಪರಿಣಾಮ ಎದುರಿಸಬೇಕಾದಿತು

* ವಿಚ್ಛೇದನದ ಬಗ್ಗೆ ಚರ್ಚಿಸದಿರಿ : ಗಂಡ ಹೆಂಡಿರ ಜಗಳವು ಆರಂಭವಾಗುವುದೇ ಸಣ್ಣ ಪುಟ್ಟ ವಿಷಯಕ್ಕೆ. ಇದನ್ನು ದೊಡ್ಡದು ಮಾಡದೇ ಇರುವುದು ಇಬ್ಬರ ಕೈಯಲ್ಲೇ ಇರುತ್ತದೆ. ಜಗಳವಾಡುವಾಗ ವಿಚ್ಛೇದನದ ಬಗ್ಗೆ ಎಂದಿಗೂ ಮಾತನಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸು ಮುರಿದು ಹೋಗುವುದಲ್ಲದೆ, ಈ ಮಾತು ಕೇಳಿಸಿಕೊಂಡ ವ್ಯಕ್ತಿಯು ವಿಚ್ಛೇದನಕ್ಕೂ ಮುಂದಾಗಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ