
ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿಯಂತಹ ಹಲವು ಕಾರಣಗಳಿಂದಾಗಿ ಅನೇಕ ಮಂದಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಈ ಅತಿಯಾದ ದೇಹ ತೂಕವನ್ನು ಇಳಿಸಿಕೊಳ್ಳುವುದು ಸುಲಭದ ಮಾತಲ್ಲ, ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಪರಿಶ್ರಮ ಪಟ್ಟರೂ ಉತ್ತಮ ಫಲಿತಾಂಶ ಲಭಿಸುತ್ತದೆಯೇ ಎಂಬುದು ಗೊತ್ತಿಲ್ಲ. ಆದರೆ ಇಲ್ಲೊಬ್ಬಳು ಯುವತಿ ಬರೋಬ್ಬರಿ 70 ಕೆಜಿ ಯಷ್ಟು ತೂಕವನ್ನು ಇಳಿಸಿಕೊಂಡಿದ್ದಾಳೆ. ಹೌದು ಆರೋಗ್ಯಕರ ಜೀವನಶೈಲಿ ಮತ್ತು ಪತಂಜಲಿಯ (Patanjali) ಮೂಲಕ ಆಕೆ 125 ಕೆಜಿ ಯಿಂದ 55 ಕೆಜಿಗೆ ತನ್ನ ತೂಕವನ್ನು ಇಳಿಸಿಕೊಂಡಿದ್ದು, ಈ ಸ್ಪೂರ್ತಿದಾಯಕ ಕಥೆಯನ್ನು ಬಾಬಾ ರಾಮ್‌ದೇವ್ (Baba Ramdev) ಶೇರ್ ಮಾಡಿಕೊಂಡಿದ್ದಾರೆ.
ಬಾಬಾ ರಾಮ್‌ದೇವ್ ಸಾಮಾಜಿಕ ಮಾಧ್ಯಮದ ಮೂಲಕ ಫಿಟ್ ಆಗಿರಲು ಹಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಅವರು ಪತಂಜಲಿ ಉತ್ಪನ್ನ ಮತ್ತು ಸರಿಯಾದ ಆಹಾರ ಕ್ರಮ, ಆರೋಗ್ಯಕರ ಜೀವನಶೈಲಿಯ ಪಾಲನೆಯ ಮೂಲಕ ಯುವತಿಯೊಬ್ಬಳು ಸುಲಭವಾಗಿ 70 ಕೆಜಿ ತೂಕವನ್ನು ಇಳಿಸಿಕೊಂಡ ಕಥೆಯನ್ನು ಹಂಚಿಕೊಂಡಿದ್ದಾರೆ. ಬ್ರಿಟನ್ ಮೂಲದ ಪೂಜಾ ಎಂಬ ಯುವತಿ ಪತಂಜಲಿ ಉತ್ಪನ್ನ ಮತ್ತು ಸರಿಯಾದ ಆಹಾರ ಕ್ರಮದ ಪಾಲನೆಯಿಂದ ಬರೋಬ್ಬರಿ 70 ಕೆಜಿ ತೂಕವನ್ನು ಇಳಿಸಿಕೊಂಡು ಇದೀಗ ಫಿಟ್ ಆಗಿದ್ದಾಳೆ.
ಪೂಜಾ ಕೆಲವು ಪತಂಜಲಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಮತ್ತು ಆಕೆ ತನ್ನ ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವ ಮೂಲಕ ತೂಕವನ್ನು ಇಳಿಸಿಕೊಂಡಿದ್ದಾಳೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಇದರರ್ಥ ಆಕೆ ತೂಕ ಇಳಿಸಿಕೊಳ್ಳಲು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಿದಳು ಎಂದಲ್ಲ, ಬದಲಿಗೆ ಆಕೆ ಸಮತೋಲಿತ ಆಹಾರವನ್ನು ಸೇವನೆ ಮಾಡಿದಳು ಜೊತೆಗೆ ಸೋರೆಕಾಯಿ ರಸವನ್ನು ಸೇವನೆ ಮಾಡಿದಳು ಎಂದು ಹೇಳಿದ್ದಾರೆ.
ತೂಕ ಇಳಿಸಿಕೊಳ್ಳಲು ಪೂಜಾ ದಿನನಿತ್ಯ ಜಾಗಿಂಗ್ ಮಾಡುವುದನ್ನು ತನ್ನ ದಿನಚರಿಯ ಭಾಗವನ್ನಾಗಿ ಮಾಡಿಕೊಂಡಿದ್ದಳು. ಇದರ ಜೊತೆಗೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪ್ರಾಣಾಯಾಮವನ್ನು ಮಾಡುತ್ತಿದ್ದಳು ಹಾಗೂ ಸೂರ್ಯ ನಮಸ್ಕಾರವನ್ನೂ ಮಾಡುತ್ತಿದ್ದಳು ಎಂದು ಬಾಬಾ ರಾಮ್‌ದೇವ್ ಹೇಳುತ್ತಾರೆ. ಹೀಗೆ ಸರಿಯಾದ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯ ಪಾಲನೆಯಿಂದ ಸುಲಭವಾಗಿ ತೂಕ ಇಳಿಸಬಹುದು ಎನ್ನುತ್ತಾರೆ ಬಾಬಾ ರಾಮ್‌ದೇವ್.
ಇದನ್ನೂ ಓದಿ: ಬಾಬಾ ರಾಮದೇವ್ ಅವರ 5 ನಿಮಿಷಗಳ ಪವರ್ ಯೋಗ; ಅದ್ಭುತ ಪ್ರಯೋಜನಗಳನ್ನು ತಿಳಿದಿರಿ
ಯುಕೆಯ ಪೂಜಾ ಮಾತ್ರವಲ್ಲ, ಮುಂಬೈನ ಪೂಜಾ ಅಗರ್ವಾಲ್ ಕೂಡ ಪತಂಜಲಿ ಕೇಂದ್ರಕ್ಕೆ ಹೋಗಿ ಅಲ್ಲಿ ನೀಡಲಾದ ಸಲಹೆಗಳು ಮತ್ತು ಚಿಕಿತ್ಸೆಯನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಅವರ ತೂಕ 100 ಕೆಜಿ ಇತ್ತು, ಇಂದು ಅವರು ತೂಕವನ್ನು ಇಳಿಸಿಕೊಂಡು ಫಿಟ್ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಅದೇ ರೀತಿ, ರೋಹನ್ ಗಾಂಧಿ ಎಂಬ ವ್ಯಕ್ತಿಯ ತೂಕ ಬರೋಬ್ಬರಿ 172 ಕೆಜಿ ಇತ್ತು, ಅವರು 95 ಕೆಜಿಗೆ ತೂಕವನ್ನು ಇಳಿಸಿಕೊಂಡಿದ್ದಾರೆ. ಪತಂಜಲಿಯ ಈ ಕಥೆಗಳು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸ್ಫೂರ್ತಿದಾಯಕವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Wed, 10 September 25