ನವರಾತ್ರಿಯ 9 ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಪಿತೃ ಪಕ್ಷದಲ್ಲಿ ಬಟ್ಟೆ ಖರೀದಿ ಸೂಕ್ತವೇ?
ನವರಾತ್ರಿ ಹಬ್ಬದ ಆರಂಭಕ್ಕೆ ಇನ್ನು ಕೆಲವು ದಿನಗಳು ಬಾಕಿ ಇದೆ. ಎಲ್ಲ ಕಡೆ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಹಬ್ಬದ ಸಂಭ್ರಮ ಹೆಚ್ಚಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ನವರಾತ್ರಿ ಇನ್ನೂ ವಿಶೇಷವಾಗಿರುತ್ತದೆ. ಎಲ್ಲ ಕಡೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಈಗಲೇ ಆರಂಭವಾಗಿದೆ. ಇನ್ನು ಬಟ್ಟೆ ಖರೀದಿಯನ್ನು ಹಬ್ಬಕ್ಕೆ ಎರಡು ಮೂರು ದಿನ ಇರುವಾಗ ಖರೀದಿಸುವ ಯೋಚನೆಯಲ್ಲಿದ್ದರೆ ಬಿಟ್ಟು ಬಿಡಿ ಏಕೆಂದರೆ ಪಿತೃ ಪಕ್ಷ ಕೂಡ ಆರಂಭವಾಗಿದೆ. ಈ ಸಮಯದಲ್ಲಿ ಬಟ್ಟೆಯನ್ನು ಖರೀದಿ ಮಾಡಬಾರದು.

ನವರಾತ್ರಿ ಹಬ್ಬದ (Shardiya Navratri) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೈಸೂರು, ಮಂಗಳೂರಿನಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮೈಸೂರು ಹಬ್ಬ ಇನ್ನು ವಿಶೇಷವಾಗಿದೆ. ಇದು ವಿಶ್ವ ವಿಖ್ಯಾತ ದಸರಾ ಆಗಿರುವುದರಿಂದ ಎಲ್ಲ ಕಡೆ ಇದರ ಆಕರ್ಷಣೆ ತುಂಬಾ ವಿಶೇಷವಾಗಿರುತ್ತದೆ. ನವರಾತ್ರಿ ಹಬ್ಬವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಹಬ್ಬವಾಗಿದೆ. ಚೈತ್ರ ನವರಾತ್ರಿ ಮತ್ತು ಶರದಿಯಾ ನವರಾತ್ರಿ ,(Shardiya Navratri 2025) ಗುಪ್ತ ನವರಾತ್ರಿಗಳು – ಆಷಾಢ ಮತ್ತು ಮಾಘ ತಿಂಗಳುಗಳಲ್ಲಿ ಬರುವ ನವರಾತ್ರಿ ಎಂಬ ನಾಲ್ಕು ನವರಾತ್ರಿಗಳನ್ನು ವಿಶೇಷವಾಗಿ ಹಿಂದೂ ಪಂಚಾಂಗದಲ್ಲಿ ಹೇಳಲಾಗಿದೆ. ಶರದಿಯಾ ನವರಾತ್ರಿ ಸೆಪ್ಟೆಂಬರ್ 22 ಸೋಮವಾರದಿಂದ ಪ್ರಾರಂಭವಾಗಿ ಅಕ್ಟೋಬರ್ 2 ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಒಂಬತ್ತು ದಿನಗಳಲ್ಲಿ ಮಾತೆ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ದಿನಗಳಲ್ಲಿ ದೇವಿಯ 9 ರೂಪಗಳಿಗೆ ಸಮರ್ಪಿತವಾದ ಬಣ್ಣಗಳ ಬಟ್ಟೆಗಳನ್ನು ಧರಿಸುವುದು ಶುಭ ಎಂದು ಹೇಳಲಾಗುತ್ತದೆ.
ಪಂಚಾಂಗದ ಪ್ರಕಾರ, ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 21 ರವರೆಗೆ ಇರುತ್ತದೆ. ಈ ದಿನಗಳಲ್ಲಿ ಯಾವುದೇ ಹೊಸ ವಸ್ತುಗಳನ್ನು, ವಿಶೇಷವಾಗಿ ಬಟ್ಟೆಗಳನ್ನು ಖರೀದಿಸಬಾರದು. ಪಿತೃ ಪಕ್ಷ ಪ್ರಾರಂಭವಾಗುವ ಮೊದಲೇ ನೀವು ನವರಾತ್ರಿ ಶಾಪಿಂಗ್ ಮಾಡಬೇಕಿತ್ತು. ಸರಿಯಾದ ಸಮಯದಲ್ಲಿ ಖರೀದಿಸಿದ ವಸ್ತುಗಳು ನಿಮ್ಮ ಮನೆಗೆ ಶುಭ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ. ಇನ್ನು 9 ದಿನ ಯಾವೆಲ್ಲ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.
- ಮೊದಲ ದಿನ: ನವರಾತ್ರಿಯ ಮೊದಲ ದಿನದಂದು ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಈ ದಿನದಂದು ಕಿತ್ತಳೆ ಬಣ್ಣವನ್ನು ಧರಿಸುವುದು ಶುಭ ಎಂದು ಹೇಳಲಾಗಿದೆ. ಇದು ಶಕ್ತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ.
- ಎರಡನೇ ದಿನ: ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೆಂಪು ಬಣ್ಣವನ್ನು ಧರಿಸುವುದು ಶುಭ ಎಂದು ಹೇಳುತ್ತಾರೆ. ಕೆಂಪು ಬಣ್ಣವು ಶಕ್ತಿ ಮತ್ತು ಧೈರ್ಯವನ್ನು ಸಂಕೇತಿಸುತ್ತದೆ.
- ಮೂರನೇ ದಿನ: ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೆಂಪು ಬಣ್ಣವನ್ನು ಧರಿಸುವುದು ಶುಭವಾಗಿರುತ್ತದೆ. ಕೆಂಪು ಬಣ್ಣವು ಶಕ್ತಿ ಮತ್ತು ಧೈರ್ಯವನ್ನು ಸಂಕೇತಿಸುತ್ತದೆ.
- ನಾಲ್ಕನೇ ದಿನ: ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕಡು ನೀಲಿ ಬಣ್ಣವನ್ನು ಧರಿಸುವುದು ಶುಭ. ಕಡು ನೀಲಿ ಬಣ್ಣವು ಆತ್ಮವಿಶ್ವಾಸ ಮತ್ತು ಸ್ಥಿರತೆಯನ್ನು ಸೂಚಿಸುತ್ತದೆ.
- ಐದನೇ ದಿನ: ಐದನೇ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹಳದಿ ಬಣ್ಣವನ್ನು ಧರಿಸುವುದು ಶುಭ. ಹಳದಿ ಬಣ್ಣವು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.
- ಆರನೇ ದಿನ: ಆರನೇ ದಿನದಂದು ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಹಸಿರು ಬಣ್ಣವನ್ನು ಧರಿಸುವುದು ಶುಭ. ಹಸಿರು ಬಣ್ಣವು ಸಮೃದ್ಧಿ ಮತ್ತು ಹೊಸ ಆರಂಭವನ್ನು ಸಂಕೇತಿಸುತ್ತದೆ.
- ಏಳನೇ ದಿನ: ಏಳನೇ ದಿನದಂದು ಕಾಳರಾತ್ರಿ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಬೂದು ಬಣ್ಣವನ್ನು ಧರಿಸುವುದು ಶುಭ. ಬೂದು ಬಣ್ಣವು ಸ್ಥಿರತೆ ಮತ್ತು ಸಮತೋಲನವನ್ನು ಸಂಕೇತಿಸುತ್ತದೆ.
- ಎಂಟನೇ ದಿನ: ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ನೇರಳೆ ಬಣ್ಣವನ್ನು ಧರಿಸುವುದು ಶುಭ. ನೇರಳೆ ಬಣ್ಣವು ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯ ಶಕ್ತಿಯನ್ನು ಸೂಚಿಸುತ್ತದೆ.
- ಒಂಬತ್ತನೇ ದಿನ: ಒಂಬತ್ತನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ನವಿಲು ಹಸಿರು ಬಣ್ಣವನ್ನು ಧರಿಸುವುದು ಶುಭ. ನವಿಲು ಹಸಿರು ಬಣ್ಣವು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




