AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವುಗಳು ಮನೆಯೊಳಗೆ ಬರಲು ಈ ವಸ್ತುಗಳೇ ಕಾರಣ, ಬರದಂತೆ ಏನು ಮಾಡಬೇಕು? ಇಲ್ಲಿದೆ ನೋಡಿ

ಹಾವುಗಳು ಮನೆಯೊಳಗೆ ಬರುತ್ತದೆ ಎಂಬ ಚಿಂತೆಯೇ? ಆ ಚಿಂತೆಯನ್ನು ಇಂದೇ ಬಿಟ್ಟುಬಿಡಿ, ಈ ನಿಮಯಗಳನ್ನು ಪಾಲಿಸಿದ್ರೆ ಖಂಡಿತ ಹಾವುಗಳು ಮನೆಯೊಳಗೆ ಬರುವುದಿಲ್ಲ. ಈ ಸಾಮಾನ್ಯ ವಿಚಾರಗಳು ಅನೇಕರಿಗೆ ಗೊತ್ತಿಲ್ಲ. ಹಾವುಗಳು ಮನೆಯೊಳಗೆ ಬರಲು ಮನೆಯಲ್ಲಿರುವ ಈ ವಸ್ತುಗಳೇ ಕಾರಣವಾಗಿದೆ. ಜತೆಗೆ ಇನ್ನು ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಹಾವುಗಳು ಮನೆಯೊಳಗೆ ಬರುವುದಿಲ್ಲ. ಹಾಗಾಗಿ ಮನೆಯಲ್ಲಿ ಯಾವುದನ್ನು ಇಡಬೇಕು? ಯಾವುದನ್ನು ಇಡಬಾರದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಹಾವುಗಳು ಮನೆಯೊಳಗೆ ಬರಲು ಈ ವಸ್ತುಗಳೇ ಕಾರಣ, ಬರದಂತೆ ಏನು ಮಾಡಬೇಕು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Sep 09, 2025 | 5:41 PM

Share

ಹಾವು (snake) ಎಂದರೆ ಎಲ್ಲರಿಗೂ ಕೂಡ ಭಯ ಇದೆ. ಅದು ಕೂಡ ಈ ಮಳೆಗಾಲದಲ್ಲಿ ಮನೆಯೊಳಗೆ ಹಾವುಗಳು ಬರುವುದು ಸಹಜ. ಅನೇಕ ಕಡೆ ಹಾವುಗಳು ಶೂವಿನಲ್ಲಿ ಅವಿತು ಕುಳಿತ, ಮನೆಯೊಳಗೆ ಬಂದಿರುವ ಘಟನೆಗಳು ಕಂಡು ಬಂದಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಹಾವು ಶೂ ಒಳಗೆ ಇರುವುದು ಗಮನಿಸದೆ ಆ ಶೂ ಧರಿಸಿ ಪ್ರಾಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಹಾಗಾಗಿ ಈ ಕಾಲದಲ್ಲಿ ಹೆಚ್ಚು ಎಚ್ಚರದ್ದಿರುವುದ ಅಗತ್ಯ. ಅದಕ್ಕಾಗಿ ಮನೆಗೆ ಹಾವುಗಳು ಬರದಂತೆ ಹೇಗೆ ತಡೆಯುವುದು, ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ಮನೆ ಸುತ್ತಮುತ್ತ ಈ ವಸ್ತುಗಳನ್ನು ಇರಿಸಿದರೆ, ಹಾವುಗಳು ಅವುಗಳನ್ನು ಆರ್ಕಷಣೆ ಮಾಡುತ್ತದೆ.  ಕೆಲವೊಂದು ಬಾರಿ ಮನೆಯಲ್ಲಿ ಇಂತಹ ವಸ್ತುಗಳು ಇದ್ದಾಗ ಹಾವುಗಳು ಮನೆಯೊಳಗೆ ಅಥವಾ ಮನೆಯ ಸುತ್ತ ಹರಿದಾಡಬಹುದು. ಅದಕ್ಕೆ ತಕ್ಷಣ ಈ ವಸ್ತುಗಳನ್ನು ಮನೆಯಿಂದ ದೂರು ಇಡಬೇಕಾಗುತ್ತದೆ. ಈ 5 ವಸ್ತುಗಳನ್ನು ಮನೆಯಿಂದ ದೂರು ಇಡುವ ಪ್ರಯತ್ನ ಮಾಡಿ.

ನೀರಿನ ಮೂಲಗಳು ಮತ್ತು ಅವುಗಳ ಸುತ್ತಲಿನ ಸಸ್ಯಗಳು:

ಮನೆಯ ಹತ್ತಿರ ಒಂದು ಸಣ್ಣ ಕೊಳ, ಕೂಲರ್ ಅಥವಾ ಯಾವುದೇ ನೀರಿನ ಜಲಾಶಯ ಇದ್ದರೆ, ಅದು ಹಾವುಗಳು ತಿನ್ನಲು ಮತ್ತು ವಾಸಿಸಲು ಉತ್ತಮ ಸ್ಥಳವಾಗುತ್ತದೆ. ಕೊಳಗಳಲ್ಲಿ ಕಂಡುಬರುವ ಕೀಟಗಳು ಮತ್ತು ಕಪ್ಪೆಗಳು ಹಾವುಗಳ ಮುಖ್ಯ ಆಹಾರವಾಗಿದೆ. ಇದಲ್ಲದೆ, ಈ ನೀರಿನ ಜಲಾಶಯಗಳ ಬಳಿ ಬೆಳೆಯುವ ಕಮಲ, ಲಿಲ್ಲಿ ಮುಂತಾದ ಸಸ್ಯಗಳು ಸಹ ಹಾವುಗಳನ್ನು ಆಕರ್ಷಿಸುತ್ತವೆ. ಅವುಗಳ ಮೃದುವಾದ ಕಾಂಡಗಳು , ಇದು ಹಾವುಗಳಿಗೆ ವಾಸ ಮಾಡಲು ಸೂಕ್ತ ಸ್ಥಳವನ್ನು ನಿರ್ಮಿಸುತ್ತದೆ. ಹಾಗಾಗಿ ಮನೆಯ ಸುತ್ತಲೂ ನೀರು ಸಂಗ್ರಹವಾಗಲು ಬಿಡಬೇಡಿ ಮತ್ತು ಕೊಳದ ಬಳಿ ಹುಲ್ಲು ಮತ್ತು ಎಲೆಗಳನ್ನು ಸ್ವಚ್ಛವಾಗಿಡಿ.

ದಟ್ಟವಾದ ಪೊದೆಗಳು:

ದಟ್ಟವಾದ ಪೊದೆಗಳಲ್ಲಿ ಹಾವುಗಳು ಸುಲಭವಾಗಿ ಅಡಗಿಕೊಳ್ಳಬಹುದು. ಇದು ಅಡಗಿಕೊಳ್ಳುವ ಸ್ಥಳವನ್ನು ನಿರ್ಮಾಣ ಮಾಡುವುದಲ್ಲದೆ, ಹಾವುಗಳಿಗೆ ಆಹಾರವಾಗುವ ಕೀಟಗಳು ಮತ್ತು ಸಣ್ಣ ಜೀವಿಗಳಿಗೂ ನೆಲೆಯಾಗಿದೆ. ಹಾಗಾಗಿ ಪೊದೆಗಳನ್ನು ಅದಷ್ಟು ನಾಶ ಮಾಡಿ.

ಇದನ್ನೂ ಓದಿ
Image
ಬಾತ್‌ರೂಮ್‌ ಬಕೆಟ್‌ಗಳಲ್ಲಿನ ಕೊಳೆಯನ್ನು ತೊಡೆದು ಹಾಕಲು ಈ ಸಲಹೆ ಪಾಲಿಸಿ
Image
ಚಿನ್ನ, ಬೆಳ್ಳಿ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿಕೊಡುವುದೇಕೆ
Image
ನಾವು ಧರಿಸುವ ಕೆಲ ಬಟ್ಟೆಗಳು ಒಗೆದ ನಂತರ ಕುಗ್ಗುವುದೇಕೆ?
Image
ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್‌ ಮುಟ್ಟಿನ ತೊಂದರೆಗೆ ಕಾರಣವಾಗಬಹುದು

ದೊಡ್ಡ ಮರಗಳು ಮತ್ತು ದಟ್ಟವಾದ ಹೂಬಿಡುವ ಸಸ್ಯಗಳು:

ದೊಡ್ಡ ಪೊದೆಗಳು ಮತ್ತು ಹೂಬಿಡುವ ಸಸ್ಯಗಳು ಸಣ್ಣ ಪ್ರಾಣಿಗಳು, ಪಕ್ಷಿಗಳು ಮತ್ತು ಕೀಟಗಳನ್ನು ಆಕರ್ಷಿಸುತ್ತವೆ. ಇವೆಲ್ಲವೂ ಹಾವುಗಳಿಗೆ ಆಹಾರವಾಗಬಹುದು. ದಟ್ಟವಾದ ಮತ್ತು ಹೂವುಗಳಿಂದ ತುಂಬಿದ ಪ್ರದೇಶಗಳು ಹಾವುಗಳಿಗೆ ಉತ್ತಮ ಆವಾಸಸ್ಥಾನವಾಗಿದೆ. ಮರಗಳ ಕೆಳಗೆ ಹೆಚ್ಚು ಕಸವನ್ನು ಬಿಡಬೇಡಿ ಮತ್ತು ಹೂಬಿಡುವ ಸಸ್ಯಗಳನ್ನು ಸ್ವಚ್ಛವಾಗಿಡಿ.

ಇದನ್ನೂ ಓದಿ: ತಜ್ಞರು ಹೇಳುತ್ತಾರೆ ಯಾವ ಹುಡ್ಗಿಗೂ ಹುಡುಗರ ಈ ಗುಣಗಳು ಇಷ್ಟವಾಗುವುದಿಲ್ಲವಂತೆ

ಎಲೆಗಳ ರಾಶಿ ಮತ್ತು ಕೊಳೆಯುತ್ತಿರುವ ತ್ಯಾಜ್ಯ:

ಈ ಹಾವುಗಳಿಗೆ ಚಳಿ ಮತ್ತು ಶಾಖದಿಂದ ತಪ್ಪಿಸಿಕೊಳ್ಳಲು ತೇವಾಂಶವುಳ್ಳ ಸ್ಥಳ ಬೇಕು.ಎಲೆಗಳ ರಾಶಿ ಮತ್ತು ಕೊಳೆಯುತ್ತಿರುವ ಕಸವು ಅವುಗಳನ್ನು ಆಕರ್ಷಿಸುತ್ತದೆ. ಇದರೊಂದಿಗೆ, ಇಲಿಗಳು ಮತ್ತು ಕೀಟಗಳು ಸಹ ಅಲ್ಲಿ ಸುಲಭವಾಗಿ ಲಭ್ಯವಿರುತ್ತವೆ, ಇದು ಹಾವುಗಳನ್ನು ಇನ್ನಷ್ಟು ಆಕರ್ಷಿಸುತ್ತದೆ.

ಪರಿಮಳಯುಕ್ತ ಹೂವುಗಳು :

ಸೇವಂತಿಗೆ, ಮಲ್ಲಿಗೆ ಮುಂತಾದ ಪರಿಮಳಯುಕ್ತ ಸಸ್ಯಗಳು ಸಹ ಹಾವುಗಳನ್ನು ಆಕರ್ಷಿಸುತ್ತವೆ. ಈ ಸಸ್ಯಗಳನ್ನು ಸ್ವಚ್ಛವಾಗಿಡುವುದು ಮುಖ್ಯ. ಹೂಬಿಡುವ ಸಸ್ಯಗಳನ್ನು ಸ್ವಚ್ಛವಾಗಿಡಿ ಮತ್ತು ಅವುಗಳ ಸುತ್ತಲೂ ಹುಲ್ಲು ಅಥವಾ ಎಲೆಗಳ ರಾಶಿಗಳು ಬೆಳೆಯದಂತೆ ನೋಡಿಕೊಳ್ಳಿ.

ಹಾವುಗಳನ್ನು ಹಿಮ್ಮೆಟ್ಟಿಸುವ ಸಸ್ಯಗಳು:

ಸರ್ಪಗಂಧ, ಲ್ಯಾವೆಂಡರ್, ಪುದೀನ, ನಿಂಬೆ ಹುಲ್ಲು ಮತ್ತು ಕಳ್ಳಿ, ಅವುಗಳ ಬಲವಾದ ವಾಸನೆ  ಹಾವುಗಳನ್ನು ದೂರವಿಡುತ್ತದೆ. ಈ ಸಸ್ಯಗಳನ್ನು ಮನೆಯ ಹೊರಗೆ ಮತ್ತು ಬಾಲ್ಕನಿಯಲ್ಲಿ ನೆಡಬೇಕು. ಅದೇ ಸಮಯದಲ್ಲಿ, ನಿಂಬೆ ಹುಲ್ಲು, ಪುದೀನ ಮತ್ತು ಬೆಳ್ಳುಳ್ಳಿಯಂತಹ ಸಸ್ಯಗಳ ಎಲೆಗಳು ಅಥವಾ ಅದರ ಎಣ್ಣೆಯ ಸುವಾಸನೆಯಿಂದ ಹಾವುಗಳು ಅಲ್ಲಿಂದ ದೂರ ಹೋಗುತ್ತದೆ. ಇದಲ್ಲದೆ ದಾಲ್ಚಿನ್ನಿ, ಲವಂಗ ಮತ್ತು ವಿನೆಗರ್ ಸುವಾಸನೆ ಹಾವುಗಳನ್ನು ಓಡಿ ಹೋಗುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ