
ಸಾಮಾನ್ಯವಾಗಿ ಜನ ನಮ್ಮ ನಡವಳಿಕೆಯಿಂದ ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಅಷ್ಟೇ ಯಾಕೆ ಮಲಗುವ ಭಂಗಿ, ನಡಿಗೆಯ ಶೈಲಿ, ಮೊಬೈಲ್ ಹಿಡಿಯುವ ರೀತಿಯಿಂದ ಹಿಡಿದು ದೇಹಾಕಾರದ ಮೂಲಕವೂ ನಮ್ಮ ಸ್ವಭಾನ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಅಷ್ಟೆ ಯಾಕೆ ಆಪ್ಟಿಕಲ್ ಇಲ್ಯೂಷನ್ (Optical illusion) ಚಿತ್ರಗಳ ಮೂಲಕವೂ ನಮ್ಮ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿದೆ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದಾಗಿದೆ. ಪರ್ಸನಾಲಿಟಿ ಟೆಸ್ಟ್‌ಗಳಿಗೆ (Personality Test) ಸಂಬಂಧಿಸಿ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹದ್ದೇ ಫೋಟೋವೊಂದು ಇದೀಗ ಹರಿದಾಡುತ್ತಿದ್ದು, ಆ ಚಿತ್ರದ ಮೂಲಕ ನೀವು ಹಾಸ್ಯ ಪ್ರಜ್ಞೆಯನ್ನು ಹೊಂದಿದವರೆ, ಮಹತ್ವಾಕಾಂಕ್ಷೆಯ ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಿ.
ಈ ಮೇಲಿನ ಚಿತ್ರದಲ್ಲಿ ಬೇರೆ ಬೇರೆ ಭಂಗಿಯಲ್ಲಿ ನಿಂತಿರುವ ನಾಲ್ಕು ಕುದುರೆಗಳಿವೆ. ಆ ನಾಲ್ಕು ಕುದುರೆಗಳಲ್ಲಿ ನಿಮ್ಮಿಷ್ಟದ ಒಂದು ಕುದುರೆಯನ್ನು ಆಯ್ಕೆ ಮಾಡಿ ಮತ್ತು ಆ ಮೂಲಕ ನಿಮ್ಮ ಗುಣ ಸ್ವಭಾವ, ನಿಮ್ಮ ವ್ಯಕ್ತಿತ್ವದ ಅಂಶಗಳು ಹೇಗಿದೆಯೆಂದು ತಿಳಿಯಿರಿ.
ಒಂದನೇ ಕುದುರೆ: ನೀವು ಮೇಲಿನ ಚಿತ್ರದಲ್ಲಿ ಒಂದನೇ ಕುದುರೆಯನ್ನು ಆಯ್ಕೆ ಮಾಡಿದರೆ ನೀವು ಸಹಾನುಭೂತಿಯನ್ನು ಹೊಂದಿರುವವರು ಎಂದರ್ಥ. ಒಂದು ಲೆಕ್ಕದಲ್ಲಿ ಸಹಾನುಭೂತಿ ನಿಮ್ಮ ಸಾಮರ್ಥ್ಯ ಅಂತಾನೇ ಹೇಳಬಹುದು. ಇದಲ್ಲದೆ ಯಾರಾದರೂ ನೋವನ್ನು ಹಂಚಿಕೊಂಡಾಗ ಅಥವಾ ಎಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಸೂಕ್ತ ಎಂದು ನಿಮ್ಮ ಸಲಹೆಯನ್ನು ಕೇಳಿದಾಗ ನೀವು ಅವರಿಗೆ ಉತ್ತಮವಾದ ಸಲಹೆಯನ್ನೇ ನೀಡುತ್ತೀರಿ. ಒಟ್ಟಾರೆಯಾಗಿ ನಿಮ್ಮ ಕಾಳಜಿ ಮತ್ತು ಇತರರರನ್ನು ಸಾಂತ್ವನ ಗೊಳಿಸುವ ಸ್ವಭಾವ ನಿಮ್ಮ ಸುತ್ತಮುತ್ತಲಿನ ಜನರಿಗೆ ತುಂಬಾನೇ ಇಷ್ಟವಾಗುತ್ತದೆ.
ಎರಡನೇ ಕುದುರೆ: ನೀವೇನಾದರೂ ಎರಡನೇ ಕುದುರೆಯನ್ನು ಆಯ್ಕೆ ಮಾಡಿದರೆ ನೀವು ಸಕಾರಾತ್ಮಕ ಶಕ್ತಿಯನ್ನು ಹೊಂದಿರುವವರು ಎಂದರ್ಥ. ಸುಲಭ ಸಂಪರ್ಕ ಮತ್ತು ಸಕಾರಾತ್ಮಕ ಗುಣಗಳಿಂದ ನೀವು ಎಲ್ಲರನ್ನು ಆಕರ್ಷಿಸುತ್ತೀರಿ. ಇತರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ನೀವು ಶಾಶ್ವತ ಬಂಧವನ್ನು ನಿರ್ಮಿಸಲು ಇಷ್ಟಪಡುತ್ತೀರಿ. ನಿಮ್ಮ ಈ ಗುಣ ಇತರರಿಗೂ ಬಹಳ ಇಷ್ಟವಾಗುತ್ತದೆ.
ಇದನ್ನೂ ಓದಿ: ಈ ಚಿತ್ರದಲ್ಲಿರುವ ಒಂದು ಎಲೆಯನ್ನು ಆಯ್ಕೆ ಮಾಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಪರೀಕ್ಷಿಸಿ
ಮೂರನೇ ಕುದುರೆ: ಈ ಚಿತ್ರದಲ್ಲಿ ನೀವು ಮೂರನೇ ಕುದುರೆಯನ್ನು ಆಯ್ಕೆ ಮಾಡಿದರೆ ನೀವು ಅಚಲವಾದ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವವರಾಗಿರುತ್ತೀರಿ. ಸ್ಪಷ್ಟ ಗುರಿಗಳನ್ನು ಹೊಂದಿರುವ ನೀವು ಯಾವುದೇ ಅಡೆತಡೆಗಳನ್ನು ನೇರವಾಗಿ ಎದುರಿಸುತ್ತೀರಿ. ಸವಾಲುಗಳನ್ನು ಸುಲಭವಾಗಿ ಸ್ವೀಕರಿಸುವ ನೀವು ನಿಮ್ಮ ನಿರಂತರ ಪರಿಶ್ರಮದ ಮೂಲಕ ಮುಂದೆ ಸಾಗುತ್ತೀರಿ. ನಿಮ್ಮ ದೃಢ ನಿಶ್ಚಯವು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಒಟ್ಟಾರೆಯಾಗಿ ನಿಮ್ಮ ಈ ಸ್ವಭಾವ ಇತರರಿಗೂ ಕೂಡ ಪ್ರೇರಣೆಯಾಗಿದೆ.
ನಾಲ್ಕನೇ ಕುದುರೆ: ಈ ಚಿತ್ರದಲ್ಲಿ ನೀವೇನಾದರೂ ನಾಲ್ಕನೇ ಕುದುರೆಯನ್ನು ಆಯ್ಕೆ ಮಾಡಿದರೆ ನೀವು ಹಾಸ್ಯಮಯ ಮತ್ತು ಉತ್ಸಾಹಭರಿತ ಸ್ವಭಾವವನ್ನು ಹೊಂದಿದವರಾಗಿರುತ್ತೀರಿ. ನಿಮ್ಮ ಚುರುಕು ಬುದ್ಧಿ, ಹಾಸ್ಯಪ್ರಜ್ಞೆ, ತಮಾಷೆಯ ಮೂಲಕ ನಿಮ್ಮ ಸುತ್ತಮುತ್ತಲಿನ ಜನರನ್ನು ನಗಿಸುತ್ತೀರಿ, ಅವರ ಮನಸ್ಥಿತಿಯನ್ನು ಹಗುರಗೊಳಿಸುತ್ತೀರಿ. ಎಲ್ಲರೊಂದಿಗೂ ಹೊಂದಿಕೊಳ್ಳುವ ನಿಮ್ಮ ಗುಣ, ನಿಮ್ಮ ಹಾಸ್ಯ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ