
ಸಾಮಾನ್ಯವಾಗಿ ನಾವು ನಮ್ಮ ಗುಣ ಸ್ವಭಾವ, ಭವಿಷ್ಯದ ಬಗ್ಗೆ ತಿಳಿಯಲು ಜ್ಯೋತಿಷ್ಯಶಾಸ್ತ್ರವನ್ನು ಅವಲಂಬಿಸುತ್ತೇವೆ. ಇದು ಮಾತ್ರವಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಕಣ್ಣಿನ ಆಕಾರ, ಮೂಗಿನ ಆಕಾರ, ಪಾದದ ಆಕಾರ, ಹಸ್ತದ ರೇಖೆ ಸೇರಿದಂತೆ ದೇಹಕಾರದ ಮುಖಾಂತರ ನಮ್ಮ ವ್ಯಕ್ತಿತ್ವ (secret Personality) ಹೇಗಿದೆ ಎಂಬುದನ್ನು ತಿಳಿಯಬಹುದು. ಅದೇ ರೀತಿ ಹೆಬ್ಬೆರಳಿನ ಆಕಾರದ ಮೂಲಕ ಒಬ್ಬ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ತಿಳಿಯಬಹುದು. ಹೌದು ನಿಮ್ಮ ಹೆಬ್ಬೆರಳು ನೇರವಾಗಿದೆಯೋ ಅಥವಾ ಬಾಗಿದೆಯೋ ಎಂಬುದರ ಆಧಾರದ ಮೇಲೆ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹೆಬ್ಬೆರಳಿನ ಆಕಾರದ ಮೂಲಕ ನೀವೆಂಥ ವ್ಯಕ್ತಿ ಎಂಬುದನ್ನು ಪರೀಕ್ಷಿಸಿ.
ನೇರ ಹೆಬ್ಬೆರಳು: ನಿಮ್ಮ ಹೆಬ್ಬೆರಳಿನ ಆಕಾರ ನೇರವಾಗಿದ್ದರೆ, ನೀವು ತಾರ್ಕಿಕ ಮತ್ತು ಪ್ರಾಯೋಗಿಕ ವ್ಯಕ್ತಿಯೆಂದು ಅರ್ಥ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳಿಂತ ಹೆಚ್ಚಾಗಿ ಸತ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತೀರಿ. ಇದಲ್ಲದೆ ನೀವು ಹಠಮಾರಿ ಸ್ವಭಾವದವರೂ ಹೌದು. ನಿಮ್ಮನ್ನು ಅಷ್ಟು ಸುಲಭವಾಗಿ ಓಲೈಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಜೊತೆಗೆ ನೀವು ತುಂಬಾನೇ ಕಠಿಣ ಸ್ವಭಾವದ ವ್ಯಕ್ತಿಯೂ ಹೌದು. ಹೀಗಂತ ನೀವು ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೀರಿ ಎಂದರ್ಥವಲ್ಲ. ಅಂದರೆ ನೀವು ತಾರ್ಕಿಕವಾಗಿ ಯೋಚಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಎಂದರ್ಥ.
ಇದನ್ನೂ ಓದಿ: ಹಸ್ತದ ಹೃದಯ ರೇಖೆಯಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ
ಹಿಂದಕ್ಕೆ ಬಾಗಿದ ಹೆಬ್ಬೆರಳು: ಹಿಂದಕ್ಕೆ ಬಾಗಿದ ಹೆಬ್ಬೆರಳು ನಿಮ್ಮದಾಗಿದ್ದರೆ, ನೀವು ಭಾವನಾತ್ಮಕ ವ್ಯಕ್ತಿಯೆಂದು ಅರ್ಥ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾರ್ಕಿಕವಾಗಿ ಯೋಚಿಸುವ ಬದಲು ಮನಸ್ಸಿನ ಮಾತನ್ನು ಕೇಳುತ್ತೀರಿ. ನೀವು ಸಂಬಂಧಗಳು ಮತ್ತು ಭಾವನೆಗಳಿಗೆ ಸಾಕಷ್ಟು ಆದ್ಯತೆ ನೀಡುವ ವ್ಯಕ್ತಿ. ಅಲ್ಲದೆ ನೀವು ಎಲ್ಲರೊಂದಿಗೆ ಬಹು ಬೇಗನೆ ಬೆರೆಯುತ್ತೀರಿ. ನಿಮ್ಮವರನ್ನು ಸಂತೋಷಪಡಿಸಲು ಸಾಕಷ್ಟು ಪ್ರಯತ್ನಪಡುತ್ತೀರಿ. ನೀವು ಸೃಜನಶೀಲ ಹಾಗೂ ಕಲಾತ್ಮಕ ಗುಣವನ್ನು ಸಹ ಹೊಂದಿದ್ದೀರಿ. ಒಟ್ಟಾರೆಯಾಗಿ ಹೇಳುವುದಾದರೆ ನಿಮ್ಮ ವ್ಯಕ್ತಿತ್ವ ತುಂಬಾ ಆಕರ್ಷಕವಾದುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ