
ಸಾಮಾನ್ಯವಾಗಿ ಜನರ ನಡವಳಿಕೆಯ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು (personality) ಅಳೆಯಲಾಗುತ್ತದೆ. ಅಷ್ಟೇ ಯಾಕೆ ಸಾಮುದ್ರಿಕ ಶಾಸ್ತ್ರದಲ್ಲಿ ದೇಹಾಕಾರದ ಮೂಲಕವೂ ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಇದಲ್ಲದೆ ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳ ಮೂಲಕವೂ ನಿಮ್ಮ ನಿಗೂಢ ವ್ಯಕ್ತಿತ್ವ ಮತ್ತು ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಫೋಟೋವೊಂದು ವೈರಲ್ ಆಗಿದ್ದು, ಕರಡಿ (Bear) ಅಥವಾ ಜಲಪಾತ ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಮೊದಲು ನಿಮಗೆ ಕಂಡಿದ್ದೇನು ಎಂಬ ಆಧಾರದ ಮೇಲೆ ನೀವು ಉತ್ತಮ ಕೇಳುಗರೇ, ಎಲ್ಲರೊಂದಿಗೆ ಬೆರೆಯುವವರೇ ಎಂಬುದನ್ನು ತಿಳಿಯಿರಿ.
ಕಣ್ಣಿಗೆ ಭ್ರಮೆಯನ್ನುಂಟು ಮಾಡುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು marina__neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕೆಲವರಿಗೆ ಕರಡಿ ಕಂಡರೆ ಕೆಲವರಿಗೆ ಜಲಪಾತ ಕಾಣಿಸಬಹುದು. ಇದರಲ್ಲಿ ನಿಮಗೇನು ಕಾಣಿಸಿತು ಎಂಬ ಆಧಾರದ ಮೇಲೆ ನೀವು ಉತ್ತಮ ಕೇಳುಗರೇ ಅಥವಾ ಇತರರೊಂದಿಗೆ ಹೊಂದಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವವರೇ ಎಂಬ ವಿಚಾರವನ್ನು ತಿಳಿಯಿರಿ.
ಮೊದಲು ಜಲಪಾತ ಕಾಣಿಸಿದರೆ: ನಿಮಗೇನಾದರೂ ಈ ಚಿತ್ರದಲ್ಲಿ ಮೊದಲು ಜಲಪಾತ ಕಾಣಿಸಿದರೆ ನೀವು ಬಹಳ ಬೇಗ ಒಪನಪ್ ಆಗುವವರು ಎಂದರ್ಥ. ಇತರರೊಂದಿಗೆ ಬಹುಬೇಗ ಬೆರೆಯುವ ನೀವು ತುಂಬಾನೆ ಸರಳ ವ್ಯಕ್ತಿತ್ವದವರಾಗಿರುತ್ತೀರಿ. ನಿಮ್ಮ ಈ ಗುಣ ಇತರರನ್ನು ಆಕರ್ಷಿಸುತ್ತದೆ. ಅಲ್ಲದೆ ನೀವು ಅತ್ಯುತ್ತಮ ಕೇಳುಗರು ಕೂಡಾ ಹೌದು. ನೀವು ಉಪಯುಕ್ತವಾದ ಸಲಹೆಯನ್ನು ನಿಮ್ಮ ಸುತ್ತಮುತ್ತಲಿನ ಜನರಿಗೆ ನೀಡುವವರಾಗಿರುತ್ತೀರಿ. ನೀವು ಎಲ್ಲರಿಗೂ ಉತ್ತಮ ಸಲಹೆಯನ್ನು ನೀಡುವ ಕಾರಣ ಜನ ನಿಮಗೆ ಯಾವುದೇ ಕಷ್ಟಗಳು ಇಲ್ಲ ಎಂದು ಭಾವಿಸುತ್ತಾರೆ. ಹಾಗಾಗಿ ನಿಮಗೇನಾದರೂ ಕಷ್ಟಗಳು ಎದರಾದರೆ ಅದನ್ನು ನೀವು ಒಂಟಿಯಾಗಿ ನಿಂತು ಎದುರಿಸುತ್ತೀರಿ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಕಂಡಿದ್ದು ಮಹಿಳೆಯ ಮುಖವೇ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
ಮೊದಲು ಪಾಂಡ, ಕರಡಿ ಕಾಣಿಸಿದರೆ: ಈ ಚಿತ್ರದಲ್ಲಿ ನಿಮಗೆ ಮೊದಲು ಪಾಂಡ ಅಥವಾ ಕರಡಿಯ ರೂಪ ಕಾಣಿಸಿದರೆ ನೀವು ಹೊರ ನೋಟಕ್ಕೆ ತುಂಬಾನೇ ಸ್ವೀಟ್ ಮತ್ತು ಫ್ರೆಂಡ್ಲಿಯಾಗಿ ಕಂಡರೂ ನೀವು ಅಷ್ಟಾಗಿ ಯಾರೊಂದಿಗೂ ಬೆರೆಯದ ವ್ಯಕ್ತಿಯಾಗಿರುತ್ತೀರಿ. ಒಬ್ಬರ ಮೇಲೆ ನಂಬಿಕೆಯನ್ನು ಇಡಬೇಕಾದರೆ ನೀವು ತುಂಬಾನೇ ಯೋಚಿಸುತ್ತೀರಿ ಮತ್ತು ನಂಬಿಕೆ ಇಡಲು ತುಂಬಾ ಟೈಮ್ ತೆಗೆದುಕೊಳ್ಳುತ್ತೀರಿ. ನೀವು ಈ ಹಿಂದೆ ಸಂಬಂಧದಲ್ಲಿ ಒಂದಷ್ಟು ನೋವುಗಳನ್ನು ಅನುಭವಿಸಿದ ಕಾರಣ ನೀವು ಅಷ್ಟಾಗಿ ಯಾರ ಮೇಲೂ ನಂಬಿಕೆಯನ್ನು ಇಡುವುದಿಲ್ಲ. ಅಲ್ಲದೆ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ವೀಶ್ಲೇಷಿಸುವುದು ನಿಮ್ಮ ಸಾಮಾನ್ಯ ಸ್ವಭಾವವಾಗಿದೆ. ಮತ್ತು ನೀವು ಕೆಲವೊಮ್ಮೆ ಅಗಾಧವಾಗಿ ಯೋಚನೆ ಮಾಡುತ್ತೀರಿ, ಆ ಆಲೋಚನೆಯಲ್ಲಿಯೇ ಮುಳುಗಿರುವ ಸ್ವಭಾವವನ್ನು ಹೊಂದಿರುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Sat, 10 May 25