
ಸಾಮಾನ್ಯವಾಗಿ ಜನ ನಮ್ಮ ನಡವಳಿಕೆ, ವರ್ತನೆಯ ಮೇಲೆ ನಾವು ಎಂತಹ ವ್ಯಕ್ತಿಯಾಗಿರಬಹುದು ಎಂದು ಮೇಲ್ನೋಟಕ್ಕೆ ನಿರ್ಣಯಿಸುತ್ತಾರೆ. ಇದರ ಹೊರತಾಗಿ ಸಂಖ್ಯಾಶಾಸ್ತ್ರ, ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ನಮ್ಮ ವ್ಯಕ್ತಿತ್ವ (Personality) ಹೇಗಿದೆಯೆಂದು ನಾವೇ ತಿಳಿದುಕೊಳ್ಳಬಹುದು. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಅದರಲ್ಲಿ ನೀವು ನಿಮ್ಮಿಷ್ಟದ ಒಂದು ಕಣ್ಣನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್ (secret personality) ಹೇಗಿದೆಯೆಂದು ಪರೀಕ್ಷಿಸಿ.
ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಈ ನಿರ್ದಿಷ್ಟ ಚಿತ್ರವನ್ನು marina_neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಬೇರೆ ಬೇರೆ ರೀತಿಯ ಆರು ಕಣ್ಣುಗಳಿದ್ದು, ಅದರಲ್ಲಿ ನಿಮ್ಮಿಷ್ಟದ ಒಂದು ಕಣ್ಣನ್ನು ಆಯ್ಕೆ ಮಾಡುವ ಮೂಲಕ ನೀವು ವಿಶ್ವಾಸಾರ್ಹ ವ್ಯಕ್ತಿಯೇ, ಸೂಕ್ಷ್ಮ ಸ್ವಭಾವದವರೇ ಅಥವಾ ಶಕ್ತಿಶಾಲಿಯೇ ಎಂಬುದನ್ನು ಪರೀಕ್ಷಿಸಿ.
ವಿಡಿಯೋ ಇಲ್ಲಿದೆ ನೋಡಿ:
ಮೊದಲನೇ ಕಣ್ಣು: ಈ ಚಿತ್ರದಲ್ಲಿ ನೀವು ಮೊದಲನೇ ಕಣ್ಣನ್ನು ಆಯ್ಕೆ ಮಾಡಿದರೆ, ನೀವು ವಿಶ್ವಾಸಾರ್ಹ ವ್ಯಕ್ತಿತ್ವದವರೆಂದು ಅರ್ಥ. ನೀವು ಜನರೊಂದಿಗೆ ಮುಕ್ತವಾಗಿ ಸ್ನೇಹಪರವಾಗಿರುತ್ತೀರಿ. ನೀವು ಯಾರೊಂದಿಗೆ ಅಭದ್ರಯೆಯ ಭಾವದಿಂದಿರಲು ಬಯಸುವುದಿಲ್ಲ. ಇಂತಹ ಸಮಸ್ಯೆಗಳು ಎದುರಾದರೂ ಸಹ ಅದನ್ನು ನೀವೇ ಪರಿಹರಿಸುತ್ತೀರಿ.
ಎರಡನೇ ಕಣ್ಣು: ಚಿತ್ರದಲ್ಲಿರುವ ಎರಡನೇ ಕಣ್ಣನ್ನು ನೀವು ಆಯ್ಕೆ ಮಾಡಿದರೆ, ನೀವು ಸೂಕ್ಷ್ಮ ಸ್ವಭಾವದ ವ್ಯಕ್ತಿಗಳೆಂದು ಅರ್ಥ. ನೀವು ಯಾವಾಗಲೂ ಸರಿಯಾದ ಕೆಲಸಗಳನ್ನೇ ಮಾಡಲು, ಉತ್ತಮ ಪ್ರಭಾವ ಬೀರಲು ಮತ್ತು ಯಾರ ಭಾವನೆಗಳಿಗೂ ನೋವುಂಟು ಮಾಡದಿರಲು ಶ್ರಮಿಸುತ್ತೀರಿ. ನೀವು ನಿಮ್ಮ ಕ್ರಿಯೆಗಳು ಇತತರ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ನಂಬುತ್ತೀರಿ ಅದಕ್ಕಾಗಿಯೇ ನೀವು ನಿಮ್ಮೊಳಗಿನ ಚಿಂತೆ ಮತ್ತು ಹತಾಶೆಯನ್ನು ಮರೆ ಮಾಡುತ್ತೀರಿ.
ಮೂರನೇ ಕಣ್ಣು: ಈ ಚಿತ್ರದಲ್ಲಿ ನೀವು ಮೂರನೇ ಕಣ್ಣನ್ನು ಆಯ್ಕೆ ಮಾಡಿದರೆ ನೀವು ತ್ಯಾಗಮಯಿ ವ್ಯಕ್ತಿತ್ವದವರೆಂದು ಅರ್ಥ. ನೀವು ಜೀವನದಲ್ಲಿ ಎಷ್ಟೇ ಅಡೆತಡೆಗಳನ್ನು ಅನುಭವಿಸಿದರೂ ನೀವು ಎಂದಿಗೂ ನಕಾರಾತ್ಮಕವಾಗಿ ಯೋಚಿಸುವುದಿಲ್ಲ.
ನಾಲ್ಕನೇ ಕಣ್ಣು: ನೀವೇನಾದರೂ ಚಿತ್ರದಲ್ಲಿರುವ ನಾಲ್ಕನೇ ಕಣ್ಣನ್ನು ಆಯ್ಕೆ ಮಾಡಿದರೆ ನೀವು ನಿಗೂಢ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದರ್ಥ. ಸ್ವತಃ ನಿಮಗೆಯೇ ನೀವು ನಿಗೂಢವೆಂದು ಭಾಸವಾಗುತ್ತದೆ. ನಿಮ್ಮ ಮನಸ್ಥಿತಿ ಆಗಾಗ್ಗೆ ಬದಲಾಗುತ್ತಿರುತ್ತವೆ. ನಿಮ್ಮ ಸ್ವಯಂ ಅನ್ವೇಷಣೆಯ ಪ್ರಯಾಣ ಎಂದಿಗೂ ಕೊನೆಗೊಳ್ಳುವುದಿಲ್ಲ. ಇತರರೂ ನಿಮ್ಮ ಬಗ್ಗೆ ತಿಳಿಯಲು ತುಂಬಾನೇ ಕಷ್ಟಪಡುತ್ತಾರೆ.
ಇದನ್ನೂ ಓದಿ: ನಿಮ್ಮ ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
ಐದನೇ ಕಣ್ಣು: ಈ ಚಿತ್ರದಲ್ಲಿರುವ ಐದನೇ ಕಣ್ಣನ್ನು ನೀವು ಆಯ್ಕೆ ಮಾಡಿದರೆ, ನೀವು ಶಕ್ತಿಯುತ ವ್ಯಕ್ತಿತ್ವವನ್ನು ಹೊಂದಿದವರೆಂದು ಅರ್ಥ. ನೀವು ಯಾವಾಗಲೂ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತೀರಿ. ನೀವು ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದೀರಿ ಮತ್ತು ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತೀರಿ. ಆದರೂ ಕೆಲವೊಮ್ಮೆ ನೀವು ಹೆಚ್ಚು ಒತ್ತಡಕ್ಕೆ ಒಳಗಾಗಬಹುದು.
ಆರನೇ ಕಣ್ಣು: ನೀವು ಈ ಚಿತ್ರದಲ್ಲಿರುವ ಆರನೇ ಕಣ್ಣನ್ನು ಆಯ್ಕೆ ಮಾಡಿಕೊಂಡರೆ ನೀವು ಆಳವಾದ ಅಂತಃಪ್ರಜ್ಞೆಯನ್ನು ಹೊಂದಿರುವವರೆಂದು ಅರ್ಥ. ನೀವು ಜಗತ್ತನ್ನು ಮತ್ತು ಜನರನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತೀರಿ.ಜನರ ಮುಖದ ಅಭಿವ್ಯಕ್ತಿ ಮತ್ತು ಧ್ವನಿಯ ಮೂಲಕವೇ ನೀವು ಎಲ್ಲವನ್ನು ಗಮನಿಸುತ್ತೀರಿ. ಜೊತೆಗೆ ನೀವು ಇತರರು ಹೇಳುವ ಸುಳ್ಳುಗಳನ್ನು ಸುಲಭವಾಗಿ ಪತ್ತೆ ಹಚ್ಚುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ