
ಪ್ರತಿಯೊಬ್ಬರ ಸ್ವಭಾವ, ವ್ಯಕ್ತಿತ್ವ, ಗುಣ ನಡತೆ ವಿಭಿನ್ನವಾಗಿರುವಂತೆಯೇ, ಅವರ ದೇಹದ ರಚನೆಯೂ ಸಹ ವಿಭಿನ್ನವಾಗಿರುತ್ತದೆ. ಅದೇ ರೀತಿ, ಪ್ರತಿಯೊಬ್ಬರೂ ಎದ್ದೇಳುವ, ಕುಳಿತುಕೊಳ್ಳುವ, ನಡೆಯುವ, ಮಾತನಾಡುವ ವಿಧಾನವೂ ವಿಭಿನ್ನವಾಗಿರುತ್ತದೆ. ಅಷ್ಟೇ ಯಾಕೆ ಕೈಯನ್ನು ಮುಷ್ಟಿ ಹಿಡಿದುಕೊಳ್ಳುವ ರೀತಿಯಲ್ಲೂ ಭಿನ್ನತೆಗಳು ಇರುತ್ತವೆ. ಈ ಮುಷ್ಟಿ ಹಿಡಿದುಕೊಳ್ಳುವ ಶೈಲಿಯಿಂದಲೂ ಒಬ್ಬ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನು ಹೇಳಬಹುದಂತೆ. ಹೌದು ವ್ಯಕ್ತಿತ್ವ ಪರೀಕ್ಷೆಯ (Personality test) ವಿವಿಧ ವಿಧಾನಗಳ ಮೂಲಕ ಒಬ್ಬ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ತಿಳಿಯುವಂತೆ, ಆತನ ವ್ಯಕ್ತಿತ್ವವನ್ನು ಕೈ ಮುಷ್ಟಿ ಹಿಡಿದುಕೊಳ್ಳುವ ಶೈಲಿಯಿಂದಲೂ ತಿಳಿಯಬಹುದಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಕೈಯನ್ನು ಯಾವ ರೀತಿ ಮುಷ್ಟಿ ಹಿಡಿದಿಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ನಿಗೂಢ ಗುಣ ಸ್ವಭಾವದ ಬಗ್ಗೆ ತಿಳಿಯಿರಿ.
ತೋರು ಬೆರಳಿನ ಮೇಲೆ ಹೆಬ್ಬೆರಳು ಇಟ್ಟುಕೊಳ್ಳುವುದು: ಕೆಲವು ಜನರು ತಮ್ಮ ಹೆಬ್ಬೆರಳನ್ನು ಮುಷ್ಟಿ ಹಿಡಿದಿರುವ ತೋರು ಬೆರಳಿನ ಮೇಲೆ ಇಡುತ್ತಾರೆ. ಈ ಜನರು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುವವರಾಗಿರುತ್ತಾರೆ. ಅವರು ಬಾಲ್ಯದಿಂದಲೂ ಗಮನಾರ್ಹ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದಾರೆ. ಹೆಚ್ಚು ಬುದ್ಧಿವಂತರಾದ ಅವರು ಯಾವಾಗಲೂ ತಮ್ಮ ಗುರಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ. ಒಮ್ಮೆ ಅವರು ಗುರಿಯನ್ನು ಸಾಧಿಸಲು ಮನಸ್ಸು ಮಾಡಿದರೆ, ಅದನ್ನು ಸಾಧಿಸುವವರೆಗೂ ಛಲ ಬಿಡುವುದಿಲ್ಲ. ಅಲ್ಲದೆ ಇವರು ಇತರರಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಉತ್ತಮ ಸಲಹೆ ನೀಡುವಲ್ಲಿ ನಿಪುಣರು. ಅಷ್ಟೇ ಅಲ್ಲದೆ ಈ ರೀತಿ ಕೈಯನ್ನು ಮುಷ್ಟಿ ಹಿಡಿದಿಟ್ಟುಕೊಳ್ಳುವವರು ತಮ್ಮ ದಯಾ ಗುಣ ಮತ್ತು ಉದಾರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ.
ಪ್ರಮುಖ ವ್ಯಕ್ತಿತ್ವ ಲಕ್ಷಣಗಳು: ಸಹಾನುಭೂತಿ, ಕರುಣೆ, ಹೊಸ ವಿಷಯಗಳನ್ನು ಕಲಿಯುವ ಕೌಶಲ್ಯ, ಪ್ರಬುದ್ಧತೆ ಮತ್ತು ಸ್ವಯಂ ನಿಯಂತ್ರಣ, ಉತ್ತಮ ಸ್ಮರಣೆ, ಮಾನಸಿಕವಾಗಿ ಹೊಂದಿಕೊಳ್ಳುವ ಗುಣ, ಉತ್ತಮ ಭಾಷೆ, ತಾರ್ಕಿಕತೆ.
ಬೆರಳುಗಳ ಮೇಲೆ ಹೆಬ್ಬೆರಳು ಇಟ್ಟುಕೊಳ್ಳುವುದು: ಕೆಲವು ಜನರು ಮುಷ್ಟಿಯನ್ನು ಹಿಡಿದುಕೊಳ್ಳುವಾಗ ತಮ್ಮ ಹೆಬ್ಬೆರಳನ್ನು ಎಲ್ಲಾ ಬೆರಳುಗಳ ಮೇಲೆ ಇಡುತ್ತಾರೆ. ಈ ಜನರು ಹೆಚ್ಚು ಸೃಜನಶೀಲರು. ಅವರು ತಮ್ಮ ಸ್ವಾಭಿಮಾನವನ್ನು ಗೌರವಿಸುತ್ತಾರೆ. ಅವರ ಆಕರ್ಷಕ ವ್ಯಕ್ತಿತ್ವವು ಹೆಚ್ಚಾಗಿ ಜನರನ್ನು ಆಕರ್ಷಿಸುತ್ತದೆ. ಅಲ್ಲದೆ ಇವರು ಪ್ರಾಮಾಣಿಕರು ಮತ್ತು ಬುದ್ಧಿವಂತಿಕೆಯನ್ನು ಹೊಂದಿರುವವರಾಗಿದ್ದಾರೆ. ದುರಹಂಕಾರವನ್ನು ಹೊಂದಿರದ ಇವರು ಸಿಕ್ಕಾಪಟ್ಟೆ ಆತ್ಮವಿಶ್ವಾಸವನ್ನು ಹೊಂದಿರುವವರು. ಆತ್ಮವಿಶ್ವಾಸವೇ ಇವರ ಯಶಸ್ಸಿಗೆ ಪ್ರಮುಖ ಕಾರಣ. ಅಲ್ಲದೆ ಇವರಿಗೆ ಪ್ರತಿಕೂಲತೆಯನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವಿದೆ.
ಪ್ರಮುಖ ವ್ಯಕ್ತಿತ್ವ ಲಕ್ಷಣಗಳು: ಕಲ್ಪನಾಶೀಲರು, ಭಾವೋದ್ರಿಕ್ತರು, ಸೃಜನಶೀಲ ಚಿಂತಕರು, ಪ್ರಾಮಾಣಿಕತೆ, ಧೈರ್ಯಶಾಲಿಗಳು, ಸಹಾನುಭೂತಿ.
ಇದನ್ನೂ ಓದಿ: ನಿಮ್ಗೊತ್ತಾ ಕುತ್ತಿಗೆಯ ಉದ್ದವನ್ನು ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು
ಹೆಬ್ಬೆರಳನ್ನು ಎಲ್ಲಾ ಬೆರಳುಗಳ ಒಳಗೆ ಹಿಡಿದು ಮುಷ್ಟಿ ಹಿಡಿಯುವುದು: ಕೆಲವು ಜನರು ಕೈಗಳನ್ನು ಮುಷ್ಟಿ ಹಿಡಿದುಕೊಳ್ಳುವಾಗ ತಮ್ಮ ಹೆಬ್ಬೆರಳನ್ನು ಇತರೆ ಬೆರಳುಗಳ ಒಳಗೆ ಹಿಡಿಯುತ್ತಾರೆ. ಇಂತಹ ವ್ಯಕ್ತಿಗಳು ಅಂತರ್ಮುಖಿಗಳಾಗಿರುತ್ತಾರೆ. ಅವರು ತಮ್ಮ ಎಲ್ಲಾ ವಿಷಯಗಳನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಅಂತರ್ಮುಖಿಗಳಾದ ಇವರು ತಮ್ಮ ಭಾವನೆಗಳನ್ನು, ಸಂಪರ್ಕಗಳನ್ನು ಗೌರವಿಸುವ ಜನರೊಂದಿಗೆ ಮಾತ್ರ ಇರಲು ಇಷ್ಟಪಡುತ್ತಾರೆ. ಅಲ್ಲದೆ ಕಷ್ಟಕರ ಅಥವಾ ಪ್ರಚೋದನಕಾರಿ ಪರಿಸರದಲ್ಲಿಯೂ ಸಹ ಶಾಂತಿ ಕಾಪಾಡಿಕೊಳ್ಳುವ ಸಾಮರ್ಥ್ಯ ಇವರಲ್ಲಿದೆ, ಇದುವೇ ಇವರನ್ನು ಆಕರ್ಷಕ ವ್ಯಕ್ತಿಯನ್ನಾಗಿ ಮಾಡುತ್ತದೆ.
ಪ್ರಮುಖ ವ್ಯಕ್ತಿತ್ವ ಲಕ್ಷಣಗಳು: ಸಕಾರಾತ್ಮಕ ಮನೋಭಾವ, ಪ್ರಾಮಾಣಿಕತೆ, ಆತ್ಮವಿಶ್ವಾಸ, ತಾಳ್ಮೆ, ಜಿಜ್ಞಾಸೆ, ಮುಕ್ತ ಮನಸ್ಸು, ಅಚಲ ವರ್ತನೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Sat, 18 October 25