AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂದಾ ಕೋಟೆ ಶಿರಸಿ; ಇತಿಹಾಸ, ಪ್ರಕೃತಿ ಸೌಂದರ್ಯ ಹಾಗೂ ಬೆಳವಡಿ ಮಲ್ಲಮ್ಮನ ಶೌರ್ಯದ ತಾಣ

ಉತ್ತರ ಕನ್ನಡದ ಶಿರಸಿಯಲ್ಲಿರುವ ಸೋಂದಾ ಕೋಟೆ ಇತಿಹಾಸ, ಶಿಲ್ಪಕಲೆ ಮತ್ತು ಪ್ರಕೃತಿಯ ಸಂಗಮ. ಇದು ಮಣ್ಣು ದಿಬ್ಬಗಳಿಂದ ಆವೃತವಾಗಿದ್ದು, ಸುತ್ತಲೂ ನೈಸರ್ಗಿಕ ನೀರಿನಿಂದ ಕೂಡಿದೆ. ಬೆಳವಡಿ ಮಲ್ಲಮ್ಮನ ಶೌರ್ಯವನ್ನು ಸಾರುವ ಈ ಕೋಟೆ ಪ್ರಾಚೀನ ರಾಜಾಸನ, ಈಶ್ವರ ದೇವಾಲಯ, ಮತ್ತು ಕಲ್ಲಿನ ಕೆತ್ತನೆಗಳನ್ನು ಹೊಂದಿದೆ. ಪ್ರಕೃತಿ ಪ್ರಿಯರಿಗೆ, ಇತಿಹಾಸಾಸಕ್ತರಿಗೆ ಇದು ಸೂಕ್ತ ತಾಣ.

ಸೋಂದಾ ಕೋಟೆ ಶಿರಸಿ; ಇತಿಹಾಸ, ಪ್ರಕೃತಿ ಸೌಂದರ್ಯ ಹಾಗೂ ಬೆಳವಡಿ ಮಲ್ಲಮ್ಮನ ಶೌರ್ಯದ ತಾಣ
ಸೋಂದಾ ಕೋಟೆ
TV9 Web
| Edited By: |

Updated on:Oct 17, 2025 | 6:07 PM

Share

ಕರ್ನಾಟಕದ ಉತ್ತರ ಭಾಗದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ನೆಲೆಸಿರುವ ಸೋಂದಾ ಕೋಟೆ ಇತಿಹಾಸ, ಶಿಲ್ಪಕಲೆ ಮತ್ತು ಪ್ರಕೃತಿ ಸೌಂದರ್ಯದ ಅದ್ಭುತ ಸಂಯೋಜನೆಯಾಗಿದೆ. ವೀರತೆಯ ಕಥೆಗಳನ್ನು ಹೇಳುವ ಈ ಪುರಾತನ ಕೋಟೆ ಇಂದಿಗೂ ತನ್ನ ಮಾಯಾಜಾಲದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಕಲ್ಲಿನ ಕೋಟೆ ಅಲ್ಲ. ಮಣ್ಣು ದಿಬ್ಬದಿಂದ ಆವರಿಸಿದ ಕೋಟೆ .ನೈಸರ್ಗಿಕವಾಗಿ ಸುತ್ತಲೂ ನೀರು.

ಸೋಂದಾ ಕೋಟೆಯನ್ನು ತಲುಪಲು ಎರಡು ಪ್ರಮುಖ ಮಾರ್ಗ:

ಮುಖ್ಯ ಮಾರ್ಗ:‘

ಶಿರಸಿ-ಎಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಶಿರಸಿಯಿಂದ ಸುಮಾರು 17–18 ಕಿಮೀ ದೂರದಲ್ಲಿ ಸೋಂದಾ ಕ್ರಾಸ್ ಎಂಬ ಸ್ಥಳ ಬರುತ್ತದೆ. ಅಲ್ಲಿಂದ ಎಡಗಡೆ ತಿರುಗಿ ಸುಮಾರು 1 ಕಿಮೀ ರಸ್ತೆ ಮತ್ತು ನಂತರ 1 ಕಿಮೀ ಕಾಲುದಾರಿಯಲ್ಲಿ ಸಾಗಬೇಕು.

ಪರ್ಯಾಯ ಮಾರ್ಗ:

ಸ್ವರ್ಣವಲ್ಲಿ ಮಠದ ದಾರಿಯಲ್ಲಿ ಬರುವ ಶಾಲ್ಮಲಾ ನದಿಯ ಸೇತುವೆ ದಾಟಿದ ನಂತರ ಬಲಗಡೆಗೆ ತಿರುಗ ಬೇಕು.ಗೂಗಲ್ಲ ಈ ದಾರಿ ಹೇಳುತ್ತದೆ. ತಲುಪಬಹುದಾದರೂ, ಮಳೆಗಾಲದಲ್ಲಿ ಈ ದಾರಿ ಕೊಂಚ ಕಷ್ಟಕರವಾಗಿರಬಹುದು.

ಭೌಗೋಳಿಕ ವೈಶಿಷ್ಟ್ಯ:

ಸೋಂದಾ ಕೋಟೆಯು ಒಂದು ಗುಡ್ಡದ ಮೇಲೆ ತಂತ್ರಜ್ಞಾನದ ನೋಟದಿಂದ ನಿರ್ಮಿತವಾಗಿದ್ದು, ಒಂದು ಬದಿಯಲ್ಲಿ ಶಾಲ್ಮಲಾ ನದಿ ಹರಿಯುತ್ತದೆ. ಮೆಹೆಂದಿ ಹಚ್ಚಿದಂತೆ ಹಸಿರಿನಿಂದ ಆವರಿತ ಈ ಪ್ರದೇಶ, ವಿಶೇಷವಾಗಿ ಮಳೆಗಾಲದಲ್ಲಿ ಮನಮೋಹಕ ದೃಶ್ಯಾವಳಿಯನ್ನು ಒದಗಿಸುತ್ತದೆ. ಪ್ರಕೃತಿಪ್ರೇಮಿಗಳಿಗೆ ಇದು ಸ್ವರ್ಗದಂತೆ ಭಾಸವಾಗುತ್ತದೆ.

ಐತಿಹಾಸಿಕ ಮಹತ್ವ:

  • ಸೋಂದಾ ಕೋಟೆ ಪ್ರಾಚೀನ ರಾಜ್ಯ ವ್ಯವಸ್ಥೆಯ ಕೇಂದ್ರವಾಗಿತ್ತು.
  • ಕೋಟೆ ಮತ್ತು ಭದ್ರತಾ ಗೋಡೆಗಳು – ಶತ್ರುಗಳಿಂದ ರಕ್ಷಣೆಗೆ ಪ್ರಾಚೀನ ಕಾಲದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಗೆ.
  • ಈಶ್ವರ ದೇವಾಲಯ – ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿತವಾದ ಈ ದೇವಾಲಯವು ಶೈಲಿಕಲೆಯ ಅತ್ಯುತ್ತಮ ನಿದರ್ಶನ. ಮುಂದೆ ಪುಟ್ಟ ನಂದಿ ಪ್ರತಿಮೆ ಇದೆ.

ಶಿಲ್ಪಕಲೆ ಮತ್ತು ವಾಸ್ತುಶಿಲ್ಪ:

ದೇವಾಲಯದ ಸಮೀಪದಲ್ಲಿರುವ ರಾಜಾಸನ (ರಾಜರ ಕುರ್ಚಿ) ಅತ್ಯಂತ ವಿಶಿಷ್ಟ.ಇದು ಏಕಶಿಲಾದಿಂದ ನಿರ್ಮಿತವಾದ 12 ಅಡಿ ಅಗಲದ ವೇದಿಕೆ, ಅದರ ನಾಲ್ಕು ಅಂಚುಗಳಲ್ಲಿ ಶಿಲಾ ಕಾಲುಗಳು ಹಾಗೂ ಮಧ್ಯಭಾಗದಲ್ಲಿ ಒಂದು ದಂಡಸಮಾನ್ ಕಾಲು ಇದೆ. ಶಿಲ್ಪದ ವಿಶೇಷತೆ:

ಕಂಬಗಳ ಮೇಲೆ ಕೆತ್ತಿದ ದೃಶ್ಯಗಳು:

  • ಶ್ರೀಕೃಷ್ಣನ ಬಾಲಲೀಲೆಗಳು
  • ಈಶ್ವರನ ಮೂರ್ತಿಗಳು
  • ಆಕಳು-ಕರು ಮತ್ತು ಹಾಲು ಕಡೆಯುವ ದೃಶ್ಯಗಳು
  • ಈ ಎಲ್ಲಾ ಶಿಲ್ಪಗಳು ಪುರಾತನ ಕರ್ನಾಟಕದ ಶಿಲ್ಪಕಲೆ ಮತ್ತು ಕೌಶಲ್ಯವನ್ನು ಪ್ರತಿಬಿಂಬಿಸುತ್ತವೆ.

ಬೆಳವಡಿ ಮಲ್ಲಮ್ಮ – ಸೋಂದಾ ಕೋಟೆಯ ವೀರ ಕಥೆ:

ಸೋಂದಾ ಕೋಟೆಯ ಇತಿಹಾಸದಲ್ಲಿ ಅಮರವಾದ ಹೆಸರು ಬೆಳವಡಿ ಮಲ್ಲಮ್ಮ.ಅವರನ್ನು “ಶಿವಾಜಿಯ ಮಹಾರಾಜರು ತುಳಜಾಭವಾನಿ” ಎಂದು ವರ್ಣಿಸಿ‌ದ್ದಾರೆ.ಬೆಳವಡಿ ಮಲ್ಲಮ್ಮ ಅವರ ತವರುಮನೆ ಸೋಂದಾ.ಅವರ ಜನ್ಮಸ್ಥಳವೆಂದು ಗುರುತಿಸಲ್ಪಟ್ಟ ಮಹಂತಿ ಮಠ ಕೋಟೆಯ ಸಮೀಪದಲ್ಲಿದೆ.ಇಲ್ಲಿಯೂ ಪ್ರಾಚೀನ ಈಶ್ವರ ದೇವಾಲಯವಿದ್ದು, ನಂದಿ ಮತ್ತು ಶೈಲಿಕಲೆಯ ಸಂಕೇತಗಳಿವೆ.

ಸಂರಕ್ಷಣೆ ಮತ್ತು ಮಾನ್ಯತೆ:

ಸೋಂದಾ ಕೋಟೆಯ ಮಹತ್ವವನ್ನು ಗುರುತಿಸಿ ಪುರಾತತ್ವ ಇಲಾಖೆ 1999ರಲ್ಲಿಈ ಸ್ಥಳದಲ್ಲಿ ಮಾಹಿತಿಯ ಫಲಕ ಅಳವಡಿಸಿದೆ. ಇದು ಈ ಸ್ಥಳದ ಇತಿಹಾಸ ಮತ್ತು ಪುರಾತನತೆ ಗುರುತಿಸುವ ಆಧಿಕೃತ ನಿದರ್ಶನವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ:

  • ಮಳೆಗಾಲ (ಜೂನ್ – ಸೆಪ್ಟೆಂಬರ್) ಹಸಿರು ಭೂದೃಶ್ಯ, ನದಿ ಪ್ರವಾಹ, ತಂಪು ಹವಾಮಾನ ಮಾರ್ಗಗಳು ಕೊಂಚ ಕಷ್ಟಕರ, ಆದರೆ ದೃಶ್ಯಾವಳಿ ಅದ್ಭುತ
  • ಚಳಿಗಾಲ (ಅಕ್ಟೋಬರ್ – ಫೆಬ್ರವರಿ) ಆರಾಮದಾಯಕ ಹವಾಮಾನ, ಸುಲಭ ಪ್ರವೇಶ ಪ್ರವಾಸಕ್ಕೆ ಅತ್ಯುತ್ತಮ ಕಾಲ. ಮಳೆಗಾಲದಲ್ಲಿ ಭೇಟಿ ನೀಡಿದರೆ ಉಂಬಳ

ಸೋಂದಾ ಕೋಟೆ ಕೇವಲ ಶಿಲಾಶಿಲ್ಪಗಳ ಸಮೂಹವಲ್ಲ.ಇದು ಕರ್ನಾಟಕದ ಶೌರ್ಯ, ಶಿಲ್ಪಕಲೆ, ಮತ್ತು ಸಂಸ್ಕೃತಿಯ ಜೀವಂತ ಪ್ರತಿ.ಇತಿಹಾಸಾಸಕ್ತರು, ಪ್ರಕೃತಿಪ್ರೇಮಿಗಳು, ಹಾಗೂ ಟ್ರೆಕ್ಕಿಂಗ್ ಪ್ರಿಯರಿಗೆ ಈ ಸ್ಥಳ ಅವಶ್ಯ ಭೇಟಿನೀಡಬೇಕಾದದು. “ಹಳೆಯ ಕಲ್ಲುಗಳು ಮಾತಾಡುತ್ತವೆಯೇ?” – ಸೋಂದಾ ಕೋಟೆಯಲ್ಲಿ ಹೌದು ಎಂದು ಭಾಸವಾಗುತ್ತದೆ.ಇಲ್ಲಿಗೆ ಭೇಟಿ ನೀಡುವಾಗ ಸ್ಥಳೀಯ ಮಾರ್ಗದರ್ಶನ ಅಥವಾ ತಾಣದ ನಕ್ಷೆ ಜೊತೆಗಿರಿಸಿ.ಸ್ವಚ್ಚತೆ, ಹಸಿರು ಪರಿಸರ ರಕ್ಷಣೆ,ಶುದ್ಧತೆ ಮತ್ತು ಸಂರಕ್ಷಣೆಗೆ ಸಹಕರಿಸಿ, ಕಾರಣ ಇದು ನಮ್ಮ ಇತಿಹಾಸದ ಅಮೂಲ್ಯ ಧಾರಾಸೇವೆಯಾಗಿದೆ.

ಬರಹ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ (08384225836)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Fri, 17 October 25

Follow Us
Web contact
Web contact

TV9 Kannada

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ