
ಪ್ರತಿಯೊಬ್ಬರ ವ್ಯಕ್ತಿತ್ವ ಭಿನ್ನವಾಗಿರುವಂತೆ, ದೇಹಕಾರ, ಮಾತನಾಡುವ ಶೈಲಿ, ನಡೆಯುವ ಶೈಲಿ, ಕೈ ಬರಹ, ಸಹಿ ಹಾಕುವ, ಊಟ ಮಾಡುವ, ಮೊಬೈಲ್ ಹಿಡಿದುಕೊಳ್ಳುವ, ಶೈಲಿ ಇವೆಲ್ಲವೂ ಭಿನ್ನವಾಗಿರುತ್ತವೆ. ಇವುಗಳ ಮೂಲಕ ಒಬ್ಬ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ಮೊಬೈಲ್‌ನಲ್ಲಿ (Mobile) ಟೈಪಿಂಗ್ ಮಾಡುವ ವಿಧಾನದ ಮೂಲಕವೂ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಕೆಲವರು ಮೊಬೈಲ್‌ನಲ್ಲಿ ಟೈಪಿಂಗ್ ಮಾಡಲು ಎರಡು ಬೆರಳುಗಳನ್ನು ಉಪಯೋಗಿಸಿದರೆ ಇನ್ನೂ ಕೆಲವರು ಒಂದೇ ಬೆರಳಿನಲ್ಲಿ ಟೈಪಿಂಗ್ ಮಾಡ್ತಾರೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಮೊಬೈಲ್‌ನಲ್ಲಿ ಕೇವಲ ಒಂದೇ ಒಂದು ಬೆರಳಿನಲ್ಲಿ ಟೈಪಿಂಗ್ ಮಾಡುವವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.
ಸ್ಪಷ್ಟತೆಯನ್ನು ಗೌರವಿಸುತ್ತಾರೆ: ಒಂದೇ ಬೆರಳನ್ನು ಉಪಯೋಗಿಸಿ ಮೆಸೇಜ್ ಟೈಪ್ ಮಾಡುವ ಜನ ಆತುರದಿಂದ ಪದಗಳನ್ನು ಬರೆಯುವುದಿಲ್ಲ. ಬದಲಾಗಿ ಅವರ ಸಂದೇಶಗಳು ಸ್ಪಷ್ಟ ಮತ್ತು ಪೂರ್ಣವಾಗಿರುತ್ತದೆ. ಅವರು ಜೀವನದಲ್ಲೂ ಸಹ ಗೊಂದಲಕ್ಕೆ ಅವಕಾಶ ನೀಡುವ ಬದಲು ಪೂರ್ಣ ಆಲೋಚನೆಗಳನ್ನು ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಅವರು ಪ್ರತಿಕ್ರಿಯಿಸುವ ಮೊದಲು ಯೋಚಿಸುತ್ತಾರೆ: ಇವರುಗಳು ಯಾವಾಗಲು ಚಿಂತನಶೀಲ ಸಂವಹನವನ್ನು ನಡೆಸುತ್ತಾರೆ. ಅವರು ಸಂಘರ್ಷಗಳನ್ನು ತಪ್ಪಿಸುವ ಸಲುವಾಗಿ ಯೋಚಿಸಿ ಉತ್ತರಿಸುತ್ತಾರೆ. ಎಲ್ಲಾ ಸಂದರ್ಭದಲ್ಲೂ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ: ಪ್ರತಿಯೊಂದು ವಿಷಯಗಳಲ್ಲೂ ವಿವರಗಳಿಗೆ ಗಮನಕೊಡುತ್ತಾರೆ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಎಚ್ಚರಿಕೆಯಿಂದಿರುತ್ತಾರೆ.
ತಾಳ್ಮೆಯಿಂದ ಇರುತ್ತಾರೆ: ಒಂದೇ ಬೆರಳಿನಲ್ಲಿ ಟೈಪ್ ಮಾಡುವಂತಹ ಜನರು ತಾಳ್ಮೆಯಿಂದ ಇರುತ್ತಾರೆ. ಟೈಪಿಂಗ್ ಮಾಡುವಾಗ ಮಾತ್ರವಲ್ಲ ಜೀವನದಲ್ಲೂ ಬಹಳ ತಾಳ್ಮೆಯಿಂದ, ಶಾಂತವಾಗಿ ಇರುವಂತಹ ವ್ಯಕ್ತಿಗಳಿವರು.
ಆತುರ ಪಡುವುದಿಲ್ಲ: ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡುವುದಿಲ್ಲ, ತಾಳ್ಮೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಆರಾಮದಾಯಕವಾಗಿ ಟೈಪಿಂಗ್ ಮಾಡುವಂತೆ ತಮ್ಮ ಕೆಲಸವನ್ನು ಸಹ ಆರಾಮದಾಯಕವಾಗಿಯೇ ಮಾಡುತ್ತಾರೆ.
ಅತಿಯಾಗಿ ಹಂಚಿಕೊಳ್ಳುವುದಿಲ್ಲ: ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇಷ್ಟಪಡುವ ಇವರು ತಮ್ಮ ಯಾವುದೇ ವಿಷಯಗಳನ್ನು ಅತಿಯಾಗಿ ಹಂಚಿಕೊಳ್ಳುವುದಿಲ್ಲ. ಎಲ್ಲರೊಂದಿಗೂ ಆರೋಗ್ಯಕರ ಗಡಿಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಕೈ ಬೆರಳಿನ ಆಕಾರದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ಗುಟ್ಟು
ಭಾವನಾತ್ಮಕವಾಗಿ ಬಲಶಾಲಿಗಳು: ಮೊಬೈಲ್‌ನಲ್ಲಿ ಟೈಪಿಂಗ್ ಮಾಡಲು ಕೇವಲ ಒಂದೇ ಒಂದು ಬೆರಳನ್ನು ಬಳಸುವವರು ಭಾವನಾತ್ಮಕವಾಗಿ ತುಂಬಾನೇ ಬಲಶಾಲಿಗಳಂತೆ. ಅವರು ನಿಧಾನವಾಗಿ ಪ್ರತಿಕ್ರಿಯಿಸಿದರೂ ಯೋಚಿಸಿ ಸಂದೇಶವನ್ನು ಕಳಿಸುತ್ತಾರೆ, ಜೀವನದಲ್ಲೂ ಇದೇ ನಿಯಮವನ್ನು ಪಾಲಿಸುತ್ತಾರೆ.
ಅವರು ಒಂದು ಉದ್ದೇಶದಿಂದ ಬದುಕುತ್ತಾರೆ: ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಇವರು ಜೀವನದಲ್ಲಿ ಒಂದು ನಿಖರ ಉದ್ದೇಶ, ಗುರಿಯನ್ನು ಹೊಂದಿರುತ್ತಾರೆ. ಆ ಉದ್ದೇಶ ಪ್ರಕಾರವೇ ಶಿಸ್ತುಬದ್ಧ ಜೀವನವನ್ನು ನಡೆಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ