Personality Test: ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ ಗೊತ್ತಾ?

ಕೆಲವರ ಕಿವಿಗಳಲ್ಲಿ ಕೂದಲು ಇರುವಂತೆ ಕೆಲವರ ಕಾಲ್ಬೆರಳುಗಳಲ್ಲಿ ಕೂದಲಿರುತ್ತವೆ. ಹೀಗೆ ಕಾಲ್ಬೆರಳುಗಳಲ್ಲಿ ಕೂದಲಿರುವುಉ ಆರೋಗ್ಯಕರ ರಕ್ತ ಪರಿಚಲನೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಒಂದು ಅಂಶ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ರಹಸ್ಯವನ್ನು ಸಹ ತಿಳಿಸುತ್ತಂತೆ. ಹಾಗಿದ್ರೆ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ, ಅಂತಹ ಜನರ ನಿಗೂಢ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

Personality Test: ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ ಗೊತ್ತಾ?
ವ್ಯಕ್ತಿತ್ವ ಪರೀಕ್ಷೆ
Image Credit source: Getty Images

Updated on: May 10, 2026 | 5:00 PM

ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೂಲಕ ಒಬ್ಬ ವ್ಯಕ್ತಿಯ ಭವಿಷ್ಯ, ವ್ಯಕ್ತಿತ್ವವನ್ನು (Personality) ತಿಳಿದುಕೊಳ್ಳುವಂತೆ ದೇಹ ರಚನೆ ಮತ್ತು ದೇಹಾಕಾರದ ಮೂಲಕವೂ ವ್ಯಕ್ತಿಯ  ಭವಿಷ್ಯ,  ಆತನ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದು. ಹೌದು ಕಾಲ್ಬೆರಳುಗಳ ಆಕಾರದಿಂದ ಹಿಡಿದು ದೇಹದ ಮೇಲೆ ಇರುವಂತಹ ಮಚ್ಚೆಯ ವರೆಗೆ, ದೇಹದ ಸಣ್ಣ ವಿವರಗಳು ಸಹ ನಮ್ಮ ವ್ಯಕ್ತಿತ್ವದ ಹಲವು ಅಂಶಗಳನ್ನು ಬಹಿರಂಗಪಡಿಸುತ್ತವೆ. ನೀವು ಕೂಡ ಹಣೆಯ ಆಕಾರ, ಕಣ್ಣುಗಳ ಬಣ್ಣ, ಮೂಗು, ಕಿವಿ, ಕಾಲ್ಬೆರಳುಗಳ ಆಕಾರದ ಮೂಲಕ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದಿರಬಹುದಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಾಲ್ಬೆರಳುಗಳಲ್ಲಿ ಕೂದಲನ್ನು ಹೊಂದಿರುವ ವ್ಯಕ್ತಿಗಳ ವ್ಯಕ್ತಿತ್ವದ ರಹಸ್ಯವನ್ನು ತಿಳಿಯೋಣ.

ಕಾಲ್ಬೆರಳುಗಳಲ್ಲಿ ಕೂದಲಿರುವ ಜನರ ವ್ಯಕ್ತಿತ್ವ ಹೇಗಿರುತ್ತದೆ?

ಅದೃಷ್ಟವಂತರು, ಸ್ವಾವಲಂಬಿಗಳು:

ಯಾರ ಕಾಲ್ಬೆರಳುಗಳ ಮೇಲೆ ಕೂದಲು ಇದೆಯೋ ಅಂತಹ ಜನರು ಬಲವಾದ ಮತ್ತು ಸ್ವಾವಲಂಬಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ಜನರು ತಮ್ಮದೇ ಆದ ಆಲೋಚನೆ ಮತ್ತು ತೀರ್ಪಿನ ಮೇಲೆ ನಂಬಿಕೆ ಇಡುತ್ತಾರೆ ಮತ್ತು ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಅಂತಹ ಜನರು ತಮ್ಮ ಸ್ವಂತ ಪ್ರಯತ್ನದ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ.  ಅದು ಉದ್ಯೋಗವಾಗಿರಲಿ ಅಥವಾ ವ್ಯವಹಾರವಾಗಿರಲಿ, ಅವರು ಯಾವುದೇ ಕ್ಷೇತ್ರದಲ್ಲಿ ಸುಲಭವಾಗಿ ತಮ್ಮ ಖ್ಯಾತಿಯನ್ನು ಗಳಿಸುತ್ತಾರೆ. ಕಾಲ್ಬೆರಳುಗಳ ಮೇಲೆ ಕೂದಲು ಇರುವ ಜನರು ತುಂಬಾ ಸ್ವಾವಲಂಬಿಗಳು. ಅವರು ದೃಢವಾದ ನಿಲುವನ್ನು ಹೊಂದಿರುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ಅಂತಹ ಜನರು ಅತ್ಯುತ್ತಮ ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ

ಆತ್ಮವಿಶ್ವಾಸ ಹೊಂದಿದವರು:

ಆತ್ಮವಿಶ್ವಾಸದಿಂದ ಕೂಡಿದ ಇವರು ತಮ್ಮ ಮಾತಿನಲ್ಲಿ ಬಹಳ ದೃಢವಾಗಿರುತ್ತಾರೆ ಮತ್ತು ಯಾವುದೇ ವಿಷಯದ ಬಗ್ಗೆ ಬಹಳ ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಎಂದಿಗೂ ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ವಿಷಯದಲ್ಲಿ ಅವರು ಬಹಳ ಚೆನ್ನಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.  ಇವರು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಂಡ ಅಥವಾ ಕುಟುಂಬದಲ್ಲಿ ನಾಯಕತ್ವದ ಪಾತ್ರಗಳನ್ನು ಬೇಗನೆ ವಹಿಸಿಕೊಳ್ಳುತ್ತಾರೆ. ಇವರ ನಿರ್ಧಾರಗಳು ಹೆಚ್ಚಾಗಿ ಸದೃಢ ಮತ್ತು ಪ್ರಾಯೋಗಿಕವಾಗಿರುತ್ತವೆ, ಅದಕ್ಕಾಗಿಯೇ  ಸುತ್ತಲಿನವರು ಇವರನ್ನು ಬೇಗನೇ ನಂಬುತ್ತಾರೆ.

ಇವರಿಗೆ ಆಧ್ಯಾತ್ಮಿಕತೆಯ ಕಡೆಗೆ ಬಲವಾದ ಒಲವು ಇರುತ್ತದೆ. ಇವರ ಆಲೋಚನೆಗಳು ತುಂಬಾ ಆಳವಾದವು ಮತ್ತು ಅವರು ಏನನ್ನಾದರೂ ಅರ್ಥಮಾಡಿಕೊಳ್ಳುವ ದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನೂ ಯಾರ ಕಾಲ್ಬೆರಳ ಕೂದಲು ತುಂಬಾ ದಪ್ಪ ಅಥವಾ ಒರಟಾಗಿರುತ್ತದೋ  ಅಂತಹವರು ಸ್ವಲ್ಪ ಸೊಕ್ಕಿನವರಾಗಿರುತ್ತಾರೆ. ಅವರು ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಇದು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us