Personality Test : ನಿಮ್ಮ ಕೂದಲಿನ ಬಣ್ಣವೇ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 04, 2024 | 4:20 PM

ಮೊದಲೆಲ್ಲಾ ಬಿಳಿ ಕೂದಲು ಇದ್ದವರು ಮಾತ್ರ ಕಪ್ಪಾಗಲೆಂದು ತಲೆಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಕೂದಲಿಗೆ ಬಣ್ಣ ಹಚ್ಚುವುದೇ ಫ್ಯಾಷನ್‌ ಆಗಿದೆ. ಕಂದು, ಕೆಂಪು, ಗುಲಾಬಿ, ಚಿನ್ನದ ಬಣ್ಣ ಸೇರಿದಂತೆ ಕೂದಲನ್ನು ಆಕರ್ಷಕವಾಗಿ ಕಾಣಲು ಹೇರ್ ಕಲರಿಂಗ್ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಕೂದಲಿನ ಬಣ್ಣವೇ ನಿಮ್ಮ ವ್ಯಕ್ತಿತ್ವವೇನು ಎನ್ನುವುದನ್ನು ರಿವೀಲ್ ಮಾಡುತ್ತೆ. ಈ ಕೂದಲಿನ ಬಣ್ಣಗಳ ಆಧಾರದ ಮೇಲೆ ನಿಮ್ಮ ಗುಣಸ್ವಭಾವವೇನು ಎಂದು ತಿಳಿಯಿರಿ.

Personality Test : ನಿಮ್ಮ ಕೂದಲಿನ ಬಣ್ಣವೇ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us on

ಒಬ್ಬ ವ್ಯಕ್ತಿಗೆ ಹೋಲಿಸಿದರೆ ಮತ್ತೊಬ್ಬ ವ್ಯಕ್ತಿಯ ಗುಣ ಸ್ವಭಾವವು ಭಿನ್ನವಾಗಿರುತ್ತದೆ. ವ್ಯಕ್ತಿಯ ಜೊತೆಗೆ ಸಮಯ ಕಳೆಯುವ ಮೂಲಕ ಆತನ ಗುಣಸ್ವಭಾವವನ್ನು ತಿಳಿಯಬಹುದು. ಅದಲ್ಲದೇ, ಕಣ್ಣು, ಅಂಗೈ, ಮುಷ್ಟಿ, ಮಾತನಾಡುವ ಶೈಲಿಯಿಂದಲೇ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು ಎನ್ನುವುದು ತಿಳಿದಿದೆ. ಆದರೆ ಕೂದಲಿನ ಬಣ್ಣದಿಂದಲೇ ನೀವು ಎಂತಹ ವ್ಯಕ್ತಿ ಹಾಗೂ ನಿಮ್ಮ ಗುಣಸ್ವಭಾವಗಳೇನು ಎನ್ನುವುದನ್ನು ಕಂಡು ಕೊಳ್ಳಬಹುದಂತೆ. ಕಪ್ಪು, ಕಂದು, ಹೊಂಬಣ್ಣ, ಕೆಂಪು ಈ ಬಣ್ಣಗಳಲ್ಲಿ, ನಿಮ್ಮ ಕೂದಲಿನ ಬಣ್ಣ ಯಾವುದು? ಈ ಬಣ್ಣದ ಆಧಾರದಲ್ಲಿ ನಿಮ್ಮ ಗುಣಸ್ವಭಾವವನ್ನು ತಿಳಿಯಿರಿ

* ಹೊಂಬಣ್ಣದ ಕೂದಲು ಹೊಂದಿರುವವರು : ಚಿನ್ನದ ಬಣ್ಣದ ಕೂದಲನ್ನು ಹೊಂದಿರುವ ಮಹಿಳೆಯರು ತನ್ನ ದುರ್ಬಲ ದೇಹದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಜ್ಞಾನವುಳ್ಳ ಈ ಮಹಿಳೆಯರು ಸರಳ ಜೀವನವನ್ನು ನಡೆಸುತ್ತಾರೆ. ಯಾರೊಂದಿಗೆ ಕೂಡ ಅಷ್ಟಾಗಿ ಬೆರೆಯಲು ಇಷ್ಟ ಪಡುವುದಿಲ್ಲ.

* ಕಪ್ಪು ಬಣ್ಣದ ಕೂದಲು ಹೊಂದಿರುವವರು : ಯಾರು ಗಾಢವಾದ ಕಪ್ಪು ಬಣ್ಣದ ಕೂದಲನ್ನು ಹೊಂದಿರುತ್ತಾರೋ ಅಂತಹ ವ್ಯಕ್ತಿಗಳು ಸ್ವಚ್ಛ ಮನಸ್ಸಿನವರಾಗಿರುತ್ತಾರೆ. ಇವರಿಗೆ ವಿಷಯಗಳನ್ನು ತಿರುಚಿ ಹೇಳುವ ಬುದ್ಧಿ ಇಲ್ಲ. ತಾನು ಏನನ್ನೂ ಯೋಚಿಸುತ್ತಾರೋ ಅದನ್ನು ತನ್ನ ಸುತ್ತಲು ಪಸರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇವರು ಸರಳ ಹಾಗೂ ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ.

* ಕೆಂಪು ಬಣ್ಣದ ಕೂದಲು ಹೊಂದಿರುವವರು : ಕೆಂಪು ಬಣ್ಣದ ಕೂದಲನ್ನು ಹೊಂದಿರುವ ಮಹಿಳೆಯರು ತೀಕ್ಷ್ಯ ಸ್ವಭಾವದಿಂದಲೇ ಗುರುತಿಸಿಕೊಳ್ಳುತ್ತಾರೆ. ಅದಲ್ಲದೆ ಧೈರ್ಯಶಾಲಿಗಳಾಗಿದ್ದು, ಕೋಪವು ಮೂಗಿನ ತುದಿ ಮೇಲೆಯೇ ಇರುತ್ತದೆ. ಹೆಚ್ಚಿನವರು ಜಗಳಗಂಟಿ ಸ್ವಭಾವವನ್ನು ಹೊಂದಿದ್ದು, ತನ್ನ ಸುತ್ತಮುತ್ತಲಿನ ಜನರನ್ನು ದೂರ ಇಟ್ಟುಕೊಳ್ಳುವುದೇ ಹೆಚ್ಚು ಎನ್ನಬಹುದು. ಈ ಸ್ವಭಾವದಿಂದಲೇ ಈ ವ್ಯಕ್ತಿಗಳನ್ನು ಹೇಗೆ ಎಂದು ನಿರ್ಣಯಿಸುವುದು ತುಂಬಾನೇ ಕಷ್ಟ.

* ಕಂದು ಬಣ್ಣದ ಕೂದಲು ಹೊಂದಿರುವವರು : ಕಂದು ಬಣ್ಣದ ಕೂದಲನ್ನು ಹೊಂದಿರುವ ಮಹಿಳೆಯರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ರೋಮ್ಯಾಂಟಿಕ್ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಎಲ್ಲರನ್ನು ಕಣ್ಣುಮುಚ್ಚಿ ನಂಬುವ ಕಾರಣ ಮೋಸ ಹೋಗುವುದೇ ಹೆಚ್ಚು. ಅದರಲ್ಲಿ ಪ್ರೀತಿಯ ಹೆಸರಿನಲ್ಲಿ ಇವರು ಬೇಗನೇ ವಂಚನೆಗೊಳಗಾಗುತ್ತಾರೆ. ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಮುಕ್ತ ಆಲೋಚನೆಗಳಿಂದ ಜೀವನ ನಡೆಸಲು ಇಷ್ಟ ಪಡುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ