AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಅಂಗೈ ಬಣ್ಣವೇ ನಿಮ್ಮ ನಿಗೂಢ ವ್ಯಕ್ತಿತ್ವ ತಿಳಿಸುತ್ತೆ

ಸಾಮಾನ್ಯವಾಗಿ ಎಲ್ಲರೂ ನೋಡುವುದಕ್ಕೆ, ಗುಣಸ್ವಭಾವದಲ್ಲಿ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿ ಹೇಗೆ ಎಂದು ಅರಿತುಕೊಳ್ಳುವುದು ಕಷ್ಟ. ಆದರೆ, ನಿಮ್ಮ ಅಂಗೈಯ ಬಣ್ಣವು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿಯೆನಿಸಬಹುದು. ನಂಬಲು ಕಷ್ಟವಾದರೂ ಇದು ಸತ್ಯ. ಅಂಗೈ ಬಣ್ಣವು ನಿಮ್ಮ ನಡವಳಿಕೆ, ಆಲೋಚನೆಗಳು ಮತ್ತು ಭಾವನೆಗಳ ಒಳನೋಟಗಳನ್ನು ಹೇಳುತ್ತದೆ. ಹೀಗಾಗಿ ನಿಮ್ಮ ಅಂಗೈ ಬಣ್ಣದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದಾಗಿದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಅಂಗೈ ಬಣ್ಣವೇ ನಿಮ್ಮ ನಿಗೂಢ ವ್ಯಕ್ತಿತ್ವ ತಿಳಿಸುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 13, 2025 | 3:12 PM

Share

ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿತ್ವ ಪರೀಕ್ಷೆಯ ಕುರಿತಾದ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಒಬ್ಬ ವ್ಯಕ್ತಿಯ ಕಣ್ಣು, ಮೂಗು, ಕಿವಿ, ಹಣೆ ಹಾಗೂ ಬೆರಳುಗಳ ಆಕಾರದಿಂದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಆದರೆ ವ್ಯಕ್ತಿಯೊಬ್ಬನ ಅಂಗೈ ಬಣ್ಣವೇ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆಯಂತೆ. ಕೆಲವರ ಅಂಗೈ ಬಿಳಿಯಾಗಿದ್ದರೆ, ಇನ್ನು ಕೆಲವರು ಕೆಂಪು ಅಥವಾ ಗುಲಾಬಿ ಬಣ್ಣದ ಅಂಗೈಯನ್ನು ಹೊಂದಿರುತ್ತಾರೆ. ಆದರೆ ಈ ಬಣ್ಣದಿಂದಲೇ ವ್ಯಕ್ತಿಯೂ ಹೇಗೆ ಎನ್ನುವ ನಿರ್ಣಯಕ್ಕೆ ಬರಬಹುದು.

  • ಬಿಳಿ ಅಂಗೈಗಳು : ಅಂಗೈಯೂ ಬಿಳಿ ಬಣ್ಣದಲ್ಲಿದ್ದರೆ ಇದು ರಕ್ತದ ಕೊರತೆಯನ್ನು ಸೂಚಿಸುತ್ತವೆಯಾದರೂ, ಆದರೆ ಕೆಲವರ ಅಂಗೈಗಳು ನೈಸರ್ಗಿಕವಾಗಿ ಬಿಳಿಯಾಗಿರುತ್ತವೆ. ಈ ಜನರು ಮಾನಸಿಕವಾಗಿ ದುರ್ಬಲರು ಮತ್ತು ಸ್ವಭಾವತಃ ಭಾವನಾತ್ಮಕ ವ್ಯಕ್ತಿಗಳಾಗಿರುತ್ತದೆ. ಸ್ನೇಹಪರರೂ ಆಗಿದ್ದು, ಎಲ್ಲರನ್ನು ಬಹುಬೇಗನೇ ನಂಬುತ್ತಾರೆ. ಇವರ ಈ ಗುಣವೇ ಇವರನ್ನು ಸುಲಭವಾಗಿ ಮೋಸಗೊಳಿಸುತ್ತದೆ.
  • ಹಳದಿ ಅಂಗೈಗಳು: ಅಂಗೈಗಳು ಹಳದಿ ಬಣ್ಣದ್ದಾಗಿದ್ದರೆ, ಈ ಜನರು ಹೆಚ್ಚಾಗಿ ಕಾಯಿಲೆಗೆ ತುತ್ತಾಗುತ್ತದೆ. ಈ ಜನರ ಸ್ವಭಾವವೂ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಜೀವನದಲ್ಲಿ ಹಣ ಸಂಪಾದಿಸುತ್ತಾರೆ. ಆದರೆ ಅಂದುಕೊಂಡಂತೆ ಬದುಕಲು ಕಷ್ಟಪಟ್ಟು ದುಡಿಯುತ್ತಾರೆ. ಇದರಿಂದಲೇ ಈ ವ್ಯಕ್ತಿಗಳ ಜೀವನ ಹೋರಾಟಮಯವಾಗಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಅದೃಷ್ಟವು ಕೈಕೊಡುತ್ತದೆ. ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಸಾಧಿಸುವುದರಿಂದ ದೇವರ ಅನುಗ್ರಹ ಈ ವ್ಯಕ್ತಿಗಳ ಮೇಲೆ ಸದಾ ಇರುತ್ತದೆ.
  • ಕೆಂಪು ಅಂಗೈಗಳು : ಅಂಗೈ ಕೆಂಪು ಬಣ್ಣದ್ದಲ್ಲಿದ್ದರೆ ಈ ಜನರಲ್ಲಿ ಅತಿಯಾದ ಆತ್ಮವಿಶ್ವಾಸವಿರುತ್ತದೆ. ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳುವುದಿಲ್ಲ. ಪ್ರತಿಯೊಂದು ಸನ್ನಿವೇಶದಲ್ಲೂ ಬಹಳ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಉತ್ಸಾಹಭರಿತ ವ್ಯಕ್ತಿತ್ವದಿಂದಲೇ ಎಲ್ಲರನ್ನು ಆಕರ್ಷಿಸುತ್ತಾರೆ.
  • ಗುಲಾಬಿ ಅಂಗೈಗಳು: ಅಂಗೈ ಗುಲಾಬಿ ಬಣ್ಣದಲ್ಲಿದ್ದರೆ ಇಂತಹ ಜನರು ಸಂತೋಷ ಹಾಗೂ ಸಮೃದ್ಧ ಜೀವನವನ್ನು ನಡೆಸುತ್ತಾರೆ ಎನ್ನುವುದನ್ನು ಸೂಚಿಸುತ್ತದೆ. ನಂಬಿಕೆಗೆ ಅರ್ಹರಾಗಿದ್ದು, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಯಶಸ್ವಿ ವೃತ್ತಿಜೀವನವನ್ನು ಹೊಂದುತ್ತಾರೆ. ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇವರ ಮೇಲಿದ್ದು, ಆರ್ಥಿಕ ಕೊರತೆ ಕಾಡುವುದಿಲ್ಲ. ಇವರು ಪ್ರಾಮಾಣಿಕ ಗುಣವನ್ನು ಹೊಂದಿದ್ದು, ಇವರ ಬಳಿ ಎಲ್ಲರೂ ಸಲಹೆ ಪಡೆದುಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ