Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 08, 2022 | 7:22 AM

ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ ಹೊಂದಾಣಿಕೆಯನ್ನು ಮಾಡಿಕೊಳ್ಳಿ.

Positive Thinking: ಹೊಂದಾಣಿಕೆ ಜೀವನದ ಪಾಠ ಕಲಿಸುವ ಜತೆಗೆ positive ವಿಚಾರ ಬೆಳೆಸುತ್ತದೆ
ಸಾಂದರ್ಭಿಕ ಚಿತ್ರ
Follow us on

ಜೀವನದಲ್ಲಿ ಎಲ್ಲರೂ ಒಂದೇ ರೀತಿ ಇರಬೇಕು ಎಂಬುದು ಏನು ಇಲ್ಲ, ಆದರೆ ಹೊಂದಾಣಿಕೆ ಎಂಬುದು ಮುಖ್ಯ, ಆದರೆ ಎಲ್ಲ ವಿಚಾರಕ್ಕೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ನಿಮಗೆ ಈ ಸ್ಥಳ ಹಿಂಸೆ ಎಂದಾದರೆ ಆ ಸ್ಥಳದಲ್ಲಿ ನಿಲ್ಲಬೇಡಿ ಏಕೆಂದರೆ ಅದು ನಿಮ್ಮ ಮಾನಸಿಕ ಒತ್ತಡವನ್ನು ನೀಡುತ್ತದೆ. ಅವಮಾನ ಎಲ್ಲರಿಗೂ ಆಗುವುದು ಸಹಜ ಆದರೆ, ಆ ಅವಮಾನ ನಿಮ್ಮನ್ನು ನಾಶ ಮಾಡಬಾರದು ಏಕೆಂದರೆ ಜೀವನದಲ್ಲಿ ಎಲ್ಲವನ್ನೂ ಸಹಿಸಿಕೊಂಡ ಹೋಗಲು ಸಾಧ್ಯವಿಲ್ಲ.

ಅದಕ್ಕಾಗಿ ನಿಮ್ಮ ಜೀವನದಲ್ಲಿ ಹೊಂದಾಣಿಕೆ ಎಂಬುದು ಮುಖ್ಯ ಆದರೆ ಅದು ನಿಮ್ಮ ದೌರ್ಬಲ್ಯತೆ ಆಗಬಾರದು. ಕೆಲವೊಂದು ವಿಚಾರದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಖಂಡಿತ ಆ ಹೊಂದಾಣಿಕೆ ಮಾಡಿಕೊಳ್ಳಿ, ಅದು ನಿಮ್ಮ ಜೀವನಕ್ಕೆ ಮುಖ್ಯ ಎಂದರೆ ಮಾತ್ರ, ಅದು ನಿಮ್ಮ ಜೀವನದಲ್ಲಿ ವೈವಾಹಿಕವಾಗಿರಬಹುದು, ಪ್ರೀತಿ, ಸ್ನೇಹ, ಜವಾಬ್ದಾರಿ, ಶಿಕ್ಷಣ ಇಲ್ಲಿ ಖಂಡಿತ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

ಇದನ್ನು ಓದಿ:: ಸಿನಿಮಾ ನೋಡುವುದರಿಂದ ನಿಮ್ಮಲ್ಲಿ positive ಚಿಂತನೆ ಬೆಳಸಿಕೊಳ್ಳಬಹುದು

ಇದರ ಜೊತೆಗೆ ನಿಮ್ಮನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ, ಜೊತೆಗೆ ನಿಮ್ಮ ಸಂಬಂಧಗಳೊಂದಿಗೆ ನಿಮ್ಮಲ್ಲಿ positive ವಿಚಾರಗಳನ್ನು ಬೆಳಸಿಕೊಳ್ಳಿ, ಹೊಂದಾಣಿಕೆ ಎಂಬುದು ನಿಮ್ಮಲ್ಲಿ positive ಚಿಂತನೆ ಮತ್ತು ಹೋರಾಡುವ ಶಕ್ತಿಯನ್ನು ಬೆಳೆಸುತ್ತಾದೆ. ಹೊಂದಾಣಿಕೆ ಎಂಬುದು ನಿಮ್ಮ ದೌರ್ಬಲ್ಯ ಅಲ್ಲ, ಅದು ನಿಮ್ಮ ಶಕ್ತಿ, ನಿಮ್ಮ ಸಂಬಂಧಗಳನ್ನು ಉಳಿಸುತ್ತದೆ.

ಹೊಂದಾಣಿಕೆಯಲ್ಲಿ ಒತ್ತಡ ಇರುವುದಿಲ್ಲ, ಶಾಂತಿ, ತಾಳ್ಮೆಯನ್ನು ಬೆಳೆಸುತ್ತದೆ. ಸಂಬಂಧಗಳನ್ನು ಕಾಪಾಡುತ್ತದೆ, ಒಂದಿಷ್ಟು ಭೌತಿಕ ಶಕ್ತಿಯನ್ನು ತುಂಬುತ್ತದೆ, ಈ ಹೊಂದಾಣಿಕೆ ಎಂಬುದು ನಿಮಗೆ ಜೀವನದ ಎಷ್ಟೋ ಪಾಠವನ್ನು ಕಲಿಸುತ್ತದೆ. ಇದರ ಜತೆ ನಿಮ್ಮ ಬೆಲೆಯನ್ನು ಇನ್ನೊಬ್ಬರಿಗೆ ತಿಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ