Sign In

By signing in or creating an account, you agree with Associated Broadcasting Company's Terms & Conditions and Privacy Policy.

Lip Care: ಚಳಿಗಾಲದಲ್ಲಿ ಲಿಪ್ ಆಯಿಲ್‌ ಏಕೆ ಬಳಸಬೇಕು ಮಾಹಿತಿ ಇಲ್ಲಿದೆ

ಲಿಪ್ ಆಯಿಲ್ ನಿಮ್ಮ ತುಟಿಗಳಿಗೆ ಅಗತ್ಯವಿರುವ ತೇವಾಂಶವನ್ನು ಸೇರಿಸುವುದರ ಜೊತೆಗೆ ತುಟಿಯನ್ನು ಮೃದುಗೊಳಿಸಲು ಸಹಾಯಕವಾಗಿದೆ. ಆದ್ದರಿಂದ ಪ್ರತಿದಿನ ಲಿಪ್ ಆಯಿಲ್ ತುಟಿಗೆ ಹಚ್ಚಿ.

Lip Care: ಚಳಿಗಾಲದಲ್ಲಿ ಲಿಪ್ ಆಯಿಲ್‌ ಏಕೆ ಬಳಸಬೇಕು ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: BeBeautiful
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 07, 2022 | 5:11 PM

ಚಳಿಗಾಲದಲ್ಲಿ ತಾಪಮಾನ ಇಳಿಕೆಯಾದಾಗ ಚರ್ಮವು ಒಣಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ತುಟಿಗಳು ಸಾಕಷ್ಟು ಮೃದುವಾಗಿರುವುದರಿಂದ ಚಳಿಗಾಲದಲ್ಲಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಈಗ ಲಿಪ್ ಆಯಿಲ್‌ಗಳು ಸಾಕಷ್ಟು ಲಭ್ಯವಿರುವುದರಿಂದ ನೀವು ಪ್ರತಿ ಹಚ್ಚುವುದು ಅತ್ಯಂತ ಅಗತ್ಯವಾಗಿದೆ. ಇದಲ್ಲದೇ ನೀವು ಮನೆಯಲ್ಲಿಯೇ ಲಭ್ಯವಿರುವ ತೆಂಗಿನ ಕಾಯಿಯ ಎಣ್ಣೆ ಅಥವಾ ತುಪ್ಪವನ್ನು ನಿಮ್ಮ ತುಟಿಗೆ ಹಚ್ಚಬಹುದು.

ಒಣ ಮತ್ತು ಒಡೆದ ತುಟಿಗಳು ನಿಮ್ಮ ಸೌಂದರ್ಯ ಮೇಲೂ ಪರಿಣಾಮ ಬೀರುವುದು ಮಾತ್ರವಲ್ಲದೇ ಯಾವುದೇ ಆಹಾರವನ್ನು ತಿನ್ನುವಾಗಲೂ ಉರಿಯುವ ಸಾಧ್ಯತೆ ಹೆಚ್ಚಿದೆ. ಲಿಪ್ ಆಯಿಲ್ ನಿಮ್ಮ ತುಟಿಗಳಿಗೆ ಹೆಚ್ಚು ಅಗತ್ಯವಿರುವ ತೇವಾಂಶವನ್ನು ಸೇರಿಸುವುದರ ಜೊತೆಗೆ ತುಟಿಯನ್ನು ಮೃದುಗೊಳಿಸುತ್ತದೆ.

ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ.

ರಾತ್ರಿ ಮಲಗುವ ಮುನ್ನ ಕೊಂಚ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ರಾತ್ರಿಯ ಸಮಯದಲ್ಲಿ ತುಟಿಗಳು ಒಡೆಯುವುದನ್ನು ತಪ್ಪಿಸಬಹುದು.

ಇದನ್ನು ಓದಿ: ನಿಮ್ಮ ಕಣ್ಣಿನ ರಪ್ಪೆ ಆಕರ್ಷಕವಾಗಿ ಕಾಣಲು ಇಲ್ಲಿದೆ ಸಲಹೆ

ನಿಮ್ಮ ತುಟಿ ಆರೈಕೆಗೆ ಮಾಯಿಶ್ಚರೈಸೇಶನ್ ಅಗತ್ಯವಾಗಿದೆ. ನಿಮ್ಮ ತುಟಿಗಳಿಗೆ ತೇವಾಂಶವನ್ನು ನೀಡಲು ಲಿಪ್ ಆಯಿಲ್‌ಗಳನ್ನು ಹಚ್ಚುವುದು ಉತ್ತಮ ಮಾರ್ಗವಾಗಿದೆ. ಚಳಿಗಾಲದಲ್ಲಿ ನಿಮ್ಮ ತುಟಿಗಳಿಗೆ ಹೆಚ್ಚುವರಿ ಪೋಷಣೆಯ ಅಗತ್ಯವಿರುತ್ತದೆ. ಆದ್ದರಿಂದ ಲಿಪ್ ಆಯಿಲ್‌, ಲಿಪ್ ಬಾಮ್ ಗಳನ್ನು ಬಳಸುವುದು ಅತ್ಯಂತ ಅಗತ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:10 pm, Wed, 7 December 22

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್