ವಿವಿಧ ವಿಟಮಿನ್ಗಳ ಕೊರತೆಯಿಂದ ಆಗುವ ದೈಹಿಕ ಸಮಸ್ಯೆಗಳೇನು?
ಹಸಿವಿಗೊಂದು ಆಹಾರ ಅಂತ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುತ್ತಾರೆ. ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಆಹಾರದ ಬಗ್ಗೆ ಗಮನಕೊಡದೆ ಇರುವವರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.
ಶರೀರ ಮತ್ತು ಮನಸ್ಸು ಆರೋಗ್ಯಕರವಾಗಿರಬೇಕಾದರೆ ಪೌಷ್ಟಿಕ ಆಹಾರ (Food) ತುಂಬಾ ಮುಖ್ಯವಾಗುತ್ತದೆ. ಈಗಿನ ಜೀವನ ಶೈಲಿಯಲ್ಲಿ (Life Style) ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಹಸಿವಿಗೊಂದು ಆಹಾರ ಅಂತ ಸಿಕ್ಕ ಸಿಕ್ಕ ಆಹಾರವನ್ನು ತಿನ್ನುತ್ತಾರೆ. ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಆಹಾರದ ಬಗ್ಗೆ ಗಮನಕೊಡದೆ ಇರುವವರು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಆರೋಗ್ಯವಾಗಿರಲು ಮತ್ತು ಕೆಲ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಇದೇನೇ ಇರಲಿ, ವಿವಿಧ ವಿಟಮಿನ್ ಕೊರತೆಯಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತ ಸಮಸ್ಯೆಗಳನ್ನು ಇಲ್ಲಿ ತಿಳಿಸಲಾಗಿದೆ.
ವಿಟಮಿನ್ A ಕೊರತೆಯಿಂದಾಗುವ ಸಮಸ್ಯೆಗಳಿವು:
* ಕಡಿಮೆ ಬೆಳಕಿನಲ್ಲಿ ಕಣ್ಣಿನ ಸಮಸ್ಯೆ ಕಾಡುತ್ತದೆ. ಅಂದರೆ ಕಣ್ಣು ಕಾಣುವುದಿಲ್ಲ.
* ಚರ್ಮ ತುರಿಕೆ ಆಗುತ್ತದೆ.
* ಕಣ್ಣು ಒಣಗುವುದು.
ವಿಟಮಿನ್ B2 ಮತ್ತು B6 ಕೊರತೆಯಿಂದಾಗುವ ಸಮಸ್ಯೆಗಳಿವು:
* ಬಾಯಿಯಲ್ಲಿ ಹುಣ್ಣಾಗುತ್ತದೆ.
* ಬಾಯಿಯ ಬದಿಯಲ್ಲಿ ಬಿರುಕಾಗುತ್ತದೆ.
* ತಲೆಯಲ್ಲಿ ಹೊಟ್ಟಾಗುತ್ತದೆ.
* ತಲೆಯಲ್ಲಿ ಅಲರ್ಜಿ ಆಗುತ್ತದೆ.
* ತಲೆ ತುರಿಕೆ ಆಗುತ್ತದೆ.
ವಿಟಮಿನ್ B7 ಕೊರತೆಯಿಂದಾಗುವ ಸಮಸ್ಯೆಗಳಿವು:
* ಉಗುರುಗಳು ಸುಲಭವಾಗಿ ಮುರಿಯುತ್ತದೆ.
* ಸುಸ್ತು ದೀರ್ಘಾವಧಿ ವರೆಗೆ ಇರುತ್ತದೆ.
* ಸ್ನಾಯು ಸೆಳೆಯವಾಗುತ್ತದೆ.
* ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವ ಸಂವೇದನೆ ಆಗುತ್ತದೆ.
ವಿಟಮಿನ್ B12 ಕೊರತೆಯಿಂದಾಗುವ ಸಮಸ್ಯೆಗಳಿವು:
* ಯಾವಾಗಲು ತಲೆ ನೋವಾಗುತ್ತದೆ.
* ಚರ್ಮ ತೆಳುವಾಗುತ್ತದೆ. ಹಾಗೂ ಹಳದಿ ಆಗುವುದು.
* ಬಾಯಿಯಲ್ಲಿ ಬಿರುಕುಗಳು ಮತ್ತು ಉರಿಯೂತ ಕಾಣಿಸುತ್ತದೆ.
* ಆಯಾಸ ದೀರ್ಘಕಾಲದವರೆಗೂ ಇರುತ್ತದೆ.
ವಿಟಮಿನ್ C ಕೊರತೆಯಿಂದಾಗುವ ಸಮಸ್ಯೆಗಳಿವು:
* ಒಸಡುಗಳಲ್ಲಿ ರಕ್ತಸ್ರಾವ ಆಗುತ್ತದೆ.
* ಗಾಯ ನಿಧಾನವಾಗಿ ಗುಣವಾಗುವುದು.
* ಚರ್ಮ ಒಣಗುತ್ತದೆ.
* ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ.
* ಹಿಮ್ಮಡಿಗಳು ಒಡೆಯುತ್ತದೆ.
ವಿಟಮಿನ್ C ಕೊರತೆಯಿಂದಾಗುವ ಸಮಸ್ಯೆಗಳಿವು:
* ತೋಳುಗಳು ಮತ್ತು ಕಾಲುಗಳಲ್ಲಿ ಸಂವೇದನೆ (sensation) ಕಡಿಮೆಯಾಗುತ್ತದೆ.
* ಸ್ನಾಯುಗಳು ದುರ್ಬಲ ಆಗುತ್ತದೆ.
* ದೃಷ್ಟಿ ಕಡಿಮೆ ಆಗುತ್ತದೆ.